Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಿಯಾರಾಗೆ ಬೈತಾರಂತೆ ಸಿದ್ಧಾರ್ಥ್ ಮಲ್ಹೋತ್ರಾ, ಇದು ನಿಜನಾ?
ನಟಿ ಕಿಯಾರಾ ಅಡ್ವಾಣಿ ಸದ್ಯ ಅಭಿನಯದ 'ಭೂಲ್ ಭುಲಯ್ಯ 2' ಸಿನಿಮಾದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ನಟಿ ಕಿಯಾರ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ಕಾಣಿಸಿಕೊಂಡಿದ್ದು, ಈಗ ಈ ಜೋಡಿಯ ಬಗ್ಗೆ ಹೊಸ ಸುದ್ದಿ ಬಂದಿದೆ.
ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ನಡುವೆ ಲವ್ವಿ-ಡವ್ವಿ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ಬಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಮಧ್ಯದಲ್ಲಿ ಕಿರಿಕ್ ಆಗಿತ್ತಂತೆ. ಈಗ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ ಎನ್ನುವ ಸುದ್ದಿಗಳು ಹರಿಡುತ್ತಿವೆ.
ಕಿಯಾರಾ
ಅಡ್ವಾನಿ
ಮದುವೆ
ಬಗ್ಗೆ
ಶಾಕಿಂಗ್
ಕಮೆಂಟ್:
ಸಿದ್ಧಾರ್ಥ್
ಗತಿ
ಏನು?
ಆದರೆ ಇದೇ ಬೆನ್ನಲ್ಲೇ ನಟಿ ಕಿಯಾರ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಬಗ್ಗೆ ಹೇಳಿಕೆ ಒಂದನ್ನು ಕೊಟ್ಟು ಗಮನ ಸೆಳೆದಿದ್ದಾರೆ, ಬಾಲಿವುಡ್‌ನ ವಿವಾದಾತ್ಮಕ ನಟ, ನಿರ್ದೇಶಕ, ವಿಮರ್ಶಕ ಕಮಾಲ್ ಆರ್ ಖಾನ್.

ಕಿಯಾರಾ ವಿಚಾರಕ್ಕೆ ಬಂದ ಕಮಾಲ್ ಆರ್ ಖಾನ್!
ಈಗ ಕಿಯಾರಾ ಮತ್ತು ಸಿದ್ಧಾರ್ಥ್ ಬಗ್ಗೆ ಮಾತನಾಡು ಕಾರಣ ಬಾಲಿವುಡ್‌ನಲ್ಲಿ ವಿವಾದಾತ್ಮಕ ವ್ಯಕ್ತಿ ಅಂತಲೇ ಕರೆಸಿಕೊಳ್ಳುವ ಕಮಾಲ್ ಆರ್ ಖಾನ್. ಹೌದು ಕಮಾಲ್ ಖಾನ್ ಸದಾ ವಿವಾದಗಳಿಂದ ಸುದ್ದಿ ಆಗುತ್ತಾರೆ. ಬೇರೆ ನಟ, ನಟಿಯರ ಬಗ್ಗೆ ಮಾತನಾಡಿ ಕಾಲೆಳೆಯುವ ಕೆಲಸ ಮಾಡುತ್ತಾರೆ. ಅಂತೆಯೇ ಈಗ ಕಮಾಲ್ ಆರ್ ಖಾನ್ ಈಗ ಕಿಯಾರಾ ತನ್ನ ಬಗ್ಗೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಲು ಕಾರಣ ಸಿದ್ಧಾರ್ಥ್ ಮಲ್ಹೋತ್ರ ಎಂದಿದ್ದಾರೆ.
ಐದು
ದಿನ
ಕಳೆದರೂ
ನಿಲ್ಲದ
'ಭೂಲ್
ಭುಲಯ್ಯ
2'
ಓಟ:
5ನೇ
ದಿನದ
ಕಲೆಕ್ಷನ್
ಎಷ್ಟು?

ಟ್ವೀಟ್ ಡಿಲಿಟ್ ಮಾಡಿದ ಕಿಯಾರಾ!
ಇಷ್ಟಕ್ಕೆಲ್ಲಾ ಕಾರಣ ಆಗಿರುವುದು ನಟಿ ಕಿಯಾರಾ ಟ್ವೀಟ್ ಡಿಲೀಟ್ ಮಾಡಿರುವುದು. ಕಮಾಲ್ ಖಾನ್ ತಮ್ಮ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಅಮಿತಾಬ್ ಬಚ್ಚನ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಕಮಾಲ್ ಖಾನ್‌ಗೆ ಶುಭಕೋರಿ ಕಿಯಾರಾ ಟ್ವೀಟ್ ಮಾಡಿದ್ದರು. ಆದರೆ 10 ನಿಮಿಷದಲ್ಲಿ ಈ ಟ್ವೀಟ್ ಡಿಲೀಟ್ ಮಾಡಿದ್ದಾರೆ.
|
ಸಿದ್ಧಾರ್ಥ್ ಬೈತಾರೆ ಎಂದರೇ ಕಿಯಾರಾ?
ನಟಿ ಕಿಯಾರಾ ಅಡ್ವಾನಿ ಈ ಟ್ವೀಟ್ ಡಿಲೀಟ್ ಮಾಡಲು ಕಾರಣ ಸಿದ್ಧಾರ್ಥ್ ಮಲ್ಹೋತ್ರಾ ಎಂದು ಕಮಾಲ್ ಆರ್ ಖಾನ್ ಟ್ವೀಟ್ ಮೂಲಕ ಹೇಳಿದ್ದಾರೆ. "ಈ ಟ್ವೀಟನ್ನು 10 ನಿಮಿಷದ ನಂತರ ಕಿಯಾರಾ ಡಿಲೀಟ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಎಂದು ನಾನು ಕೇಳಿದೆ. ಇದರಿಂದ ಸಿದ್‌ಗೆ ಕೋಪ ಬಂದಿದೆ. ಇದನ್ನು ಡಿಲೀಟ್ ಮಾಡಲು ಸಿದ್ಧಾರ್ಥ್ ಮಲ್ಹೋತ್ರಾ ಹೇಳಿದ್ದಾರೆ. ಎಂದ ಕಿಯಾರಾ ಹೇಳಿದ್ದಾರೆ." ಈ ಮೂಲಕ ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಬೈಯುತ್ತಾರೆ ಎಂದಿದ್ದಾರೆ.
'ಕೆಜಿಎಫ್
2'
Vs
'ಭೂಲ್
ಭುಲಯ್ಯ
2'
6ನೇ
ದಿನದ
ಕಲೆಕ್ಷನ್
ಎಷ್ಟು?

ಕಿಯಾರಾ, ಸಿದ್ದಾರ್ಥ್ ಬ್ರೇಕಪ್ ಸುದ್ದಿಗೆ ಬ್ರೇಕ್!
ಇನ್ನು ಕಳೆದ ಕೆಲವು ದಿನಗಳಿಂದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಈಗ ಅದು ಸರಿಯಾಗಿದೆ ಎಂದು ಈ ಜೋಡಿ ತೋರಿಸಿಕೊಟ್ಟಿದೆ. ಭೂಲ್ ಭುಲಯ್ಯ 2 ಚಿತ್ರದ ಪ್ರೀಮಿಯರ್ ಶೋಗೆ ಕಿಯಾರಾ ಜೊತೆಗೆ ಸಿದ್ಧಾರ್ಥ್. ಹಲವು ದಿನಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು, ಬ್ರೇಕಪ್ ಸುದ್ದಿಗೆ ಬ್ರೇಕ್ ಹಾಕಿದೆ. ಇದೇ ಬೆನ್ನಲ್ಲೇ ಕಮಲ್ ಖಾನ್ ಹೀಗೊಂದು ಗುಮಾನಿ ಹಬ್ಬಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ, ಅವರ ಮಾತನನ್ನು ನಂಬುವವರು ಎಷ್ಟು ಜನರಿದ್ದಾರೆ ಎನ್ನುವುದೇ ಪ್ರಶ್ನೆ.