For Quick Alerts
  ALLOW NOTIFICATIONS  
  For Daily Alerts

  ಕಿಯಾರಾ ಅಡ್ವಾನಿ ಮದುವೆ ಬಗ್ಗೆ ಶಾಕಿಂಗ್ ಕಮೆಂಟ್: ಸಿದ್ಧಾರ್ಥ್ ಗತಿ ಏನು?

  |

  ನಟಿ ಕಿಯಾರ ಅಡ್ವಾಣಿ ತಮ್ಮ ಅಭಿನಯದ ಭೂಲ್ ಭುಲಯ್ಯ 2 ಸಿನಿಮಾ ರಿಲೀಸ್ ಆಗಿ, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಜೊತೆಗೆ ನಟಿ ಕಿಯಾರಾ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಮದುವೆ ವಿಚಾರಕ್ಕೆ ಕಿಯಾರ ಸದ್ದು ಆಗಿದ್ದಾರೆ.

  ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ನಡುವೆ ಲವ್ವಿ, ಡವ್ವಿ ಇದೆ ಎನ್ನುವ ವಿಚಾರ ಹಲವು ದಿನಗಳಿಂದ ಬಾಲಿವುಡ್‌ನಲ್ಲಿ ಹರಿದಾಡುತ್ತಾ ಇದೆ. ಆದರೆ ಮಧ್ಯದಲ್ಲಿ ಕಿರಿಕ್ ಆಗಿತ್ತಂತೆ. ಈಗ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ.

  'ಭೂಲ್ ಭುಲಯ್ಯ 2' ಬಾಕ್ಸಾಫೀಸ್ ಚಿಂದಿ: ಕಂಗನಾ ಚಿತ್ರಕ್ಕಿಲ್ಲ ಉಳಿಗಾಲ!'ಭೂಲ್ ಭುಲಯ್ಯ 2' ಬಾಕ್ಸಾಫೀಸ್ ಚಿಂದಿ: ಕಂಗನಾ ಚಿತ್ರಕ್ಕಿಲ್ಲ ಉಳಿಗಾಲ!

  ಇನ್ನು ನಟಿ ಕಿಯಾರಾ ತನ್ನ ಮದುವೆ ಮತ್ತು ಜೀವನದಲ್ಲಿ ಸೆಟಲ್ ಆಗುವ ಬಗ್ಗೆ ಮಾತನಾಡಿದ್ದಾರೆ. ಮದುವೆ ಅಗುವ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

  ಮದುವೆ ಆಗದೇ ಸೆಟಲ್ ಆಗಬಹುದು ಎಂದ ಕಿಯಾರಾ!

  ಮದುವೆ ಆಗದೇ ಸೆಟಲ್ ಆಗಬಹುದು ಎಂದ ಕಿಯಾರಾ!

  ಮದುವೆ ಯಾವಾಗ ಎನ್ನುವ ಪ್ರಶ್ನೆ ನಟಿ ಕಿಯಾರಾಗೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರ ಕೊಟ್ಟ ನಟಿ ಕಿಯಾರಾ "ಮದುವೆ ಆಗದೇಯೂ ಕೂಡ ನಾನು ಜೀವನದಲ್ಲಿ ಸೆಟಲ್ ಆಗ ಬಹುದು ಅಲ್ಲವಾ? ನಾನು ತುಂಬಾ ಚೆನ್ನಾಗೇ ಸೆಟಲ್ ಆಗಿದ್ದೇನೆ. ನಾನು ದುಡಿಯುತ್ತಾ ಇದ್ದೇನೆ, ಖುಷಿಯಾಗಿ ಇದ್ದೇನೆ." ಎಂದಿದ್ದಾರೆ.

  ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!

  ಮದುವೆ ಆಗುವುದಿಲ್ಲವಾ ಕಿಯಾರಾ!

  ಮದುವೆ ಆಗುವುದಿಲ್ಲವಾ ಕಿಯಾರಾ!

  ಇನ್ನು ನಟಿ ಕಿಯಾರಾ ಅಡ್ವಾಣಿ ಮದುವೆ ಆಗದೇ ನಾನು ಆರಾಮಾಗಿ, ಸೆಟಲ್ ಆಗಿದ್ದೇನೆ ಎಂದು ಹೇಳಿಕೆ ಕೊಟ್ಟ ನಂತರ, ಬಾಲಿವುಡ್‌ನಲ್ಲಿ ಹೊಸ ಚರ್ಚೆ ಶುರುವಾಗಿದೆ. ಕಿಯಾರಾ ಮದುವೆಯೇ ಅಗುವುದಿಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿರುವುದರಿಂದ, ಸಿದ್ಧರ್ಥ್ ಜೊತೆಗೆ ಮತ್ತೇ ಕಾಣಿಸಿಕೊಂಡಿದ್ದೇಕೆ. ಈ ಜೋಡಿ ಮದುವೆ ಆಗುವುದು ಅನುಮಾನ ಎನ್ನುವ ಚರ್ಚೆ ಕೂಡ ಶುರುವಾಗಿದೆ.

  ಕಿಯಾರಾ ಬ್ರೇಕಪ್ ಸುದ್ದಿಗೆ ಬ್ರೇಕ್!

  ಕಿಯಾರಾ ಬ್ರೇಕಪ್ ಸುದ್ದಿಗೆ ಬ್ರೇಕ್!

  ಕಳೆದ ಕೆಲವು ದಿನಗಳಿಂದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಈಗ ಅದು ಸರಿಯಾಗಿದೆ ಎಂದು ಈ ಜೋಡಿ ತೋರಿಸಿಕೊಟ್ಟಿದೆ. ಭೂಲ್ ಭುಲಯ್ಯಾ 2 ಚಿತ್ರದ ಪ್ರೀಮಿಯರ್ ಶೋಗೆ ಕಿಯಾರ ಜೊತೆಗೆ ಸಿದ್ಧಾರ್ಥ್. ಹಲವು ದಿನಗಳ ಬಳಿಕ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡು, ಬ್ರೇಕಪ್ ಸುದ್ದಿಗೆ ಬ್ರೇಕ್ ಹಾಕಿದೆ.

  'ಮೇಜರ್' ಸಿನಿಮಾದ ಟಿಕೆಟ್ ದರ ನಿರ್ಮಾಪಕರು ಇಳಿಸಿದ್ಯಾಕೆ ಗೊತ್ತಾ?'ಮೇಜರ್' ಸಿನಿಮಾದ ಟಿಕೆಟ್ ದರ ನಿರ್ಮಾಪಕರು ಇಳಿಸಿದ್ಯಾಕೆ ಗೊತ್ತಾ?

  ಭುಲ್ ಭುಲಯ್ಯಾ ಯಶಸ್ಸಿನಲ್ಲಿ ಖುಚಿಯಲ್ಲಿ ಕಿಯಾರ!

  ಭುಲ್ ಭುಲಯ್ಯಾ ಯಶಸ್ಸಿನಲ್ಲಿ ಖುಚಿಯಲ್ಲಿ ಕಿಯಾರ!

  ಇನ್ನು ನಟಿ ಕಿಯಾರಾ ಅಡ್ವಾಣಿ ಸದ್ಯ ಭೂಲ್ ಭುಲಯ್ಯ 2 ಸಿನಿಮಾದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈ ಚಿತ್ರದ ಬಳಿಕ 'ಜುಗ್ ಜುಗ್ ಜಿ ಯೊ' ಸಿನಿಮಾ ರಿಲೀಸ್ ಆಗಲಿದೆ. ಸಿದ್ದಾರ್ಥ್ ಮಲ್ಹೋತ್ರ ಅಭಿನಯದ 'ಮಿಷನ್ ಮಜ್ನು' ಸಿನಿಮಾ ಜೂನ್‌ನಲ್ಲಿ ರಿಲೀಸ್ ಆಗಲಿದೆ.

  English summary
  Kiara Advani Shocking Comment On Getting Married With Sidharth Malhotra,
  Tuesday, May 24, 2022, 19:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X