For Quick Alerts
  ALLOW NOTIFICATIONS  
  For Daily Alerts

  ಎನ್‌ಟಿಆರ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನಟಿ ನಾಯಕಿ?

  |

  ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಮೇ 20ಕ್ಕಾಗಿ ಕಾಯುತ್ತಿದ್ದಾರೆ. ಏಕಂದ್ರೆ, ಆ ದಿನ ಎನ್‌ಟಿಆರ್ ಹುಟ್ಟುಹಬ್ಬ. ಈ ವಿಶೇಷ ದಿನದಲ್ಲಿ ಯಂಗ್ ಟೈಗರ್ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಸರ್ಪ್ರೈಸ್ ಹೊರಬೀಳಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.

  ಅದರಲ್ಲೂ ಎನ್‌ಟಿಆರ್ ನಟಿಸಲಿರುವ 30ನೇ ಚಿತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆಯಂತೆ.

  ಈ ಸುದ್ದಿ ನಿಜವೇ ಆದರೆ ಕಿಯಾರಾ ಅಡ್ವಾಣಿ ತೆಲುಗಿನಲ್ಲಿ ಮೂರನೇ ಸಿನಿಮಾ ಆರಂಭಿಸಲಿದ್ದಾರೆ. ಇದಕ್ಕೂ ಮುಂಚೆ ಮಹೇಶ್ ಬಾಬು ಜೊತೆ 'ಭರತ್ ಅನೆ ನೇನು' ಹಾಗೂ ರಾಮ್ ಚರಣ್ ನಟನೆಯ 'ವಿನಯ ವಿಧೇಯ ರಾಮ' ಸಿನಿಮಾದಲ್ಲಿ ಕಿಯಾರಾ ನಟಿಸಿದ್ದರು.

  ತೆಲುಗು ನಟ ಜೂನಿಯರ್ ಎನ್‌ಟಿಆರ್‌ಗೆ ಕೊರೊನಾ ಪಾಸಿಟಿವ್ತೆಲುಗು ನಟ ಜೂನಿಯರ್ ಎನ್‌ಟಿಆರ್‌ಗೆ ಕೊರೊನಾ ಪಾಸಿಟಿವ್

  ಈ ಕುರಿತು ಅಧಿಕೃತ ಮಾಹಿತಿ ಇಲ್ಲ. ಆದರೂ ಕಿಯಾರಾ ಅವರನ್ನು ಟಾಲಿವುಡ್ ಇಂಡಸ್ಟ್ರಿಗೆ ಮತ್ತೆ ಸ್ವಾಗತಿಸಲು ಚಿತ್ರಪ್ರೇಮಿಗಳು ಖುಷಿಯಿಂದ ಕಾಯುತ್ತಿದ್ದಾರೆ.

  ಅಂದ್ಹಾಗೆ, ಜೂನಿಯರ್ ಎನ್‌ಟಿಆರ್ ಅವರ 30ನೇ ಪ್ರಾಜೆಕ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಬಹುದು ಎಂಬ ಚರ್ಚೆಯೂ ಇದೆ. ಜೂನಿಯರ್ ಎನ್‌ಟಿಆರ್‌ಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಈ ಪ್ರಾಜೆಕ್ಟ್ ಶುರುವಾಗಲಿದೆ.

  ಇನ್ನುಳಿದಂತೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾದಲ್ಲಿ ಎನ್‌ಟಿಆರ್ ನಟಿಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅಂತಿಮ ಕೆಲಸಗಳು ಮಾತ್ರ ಬಾಕಿ ಇದೆ. ಆರ್‌ಆರ್‌ಆರ್ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಎನ್‌ಟಿಆರ್ ನಾಯಕರಾಗಿ ನಟಿಸಿದ್ದಾರೆ. ಈ ಚಿತ್ರದ ಬಳಿಕ ಪ್ರಶಾಂತ್ ನೀಲ್ ಜೊತೆ ಯಂಗ್ ಟೈಗರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಚಾಲ್ತಿಯಲ್ಲಿದೆ.

  English summary
  Bollywood actress Kiara Advani will Romance With Jr Ntr in Koratala Siva Project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X