»   » 'ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.!

'ಸುದೀಪ್-ಚಿರಂಜೀವಿ' ಜೋಡಿಯಿಂದ ಕನ್ನಡದಲ್ಲೊಂದು ಚಿತ್ರ.!

Posted By:
Subscribe to Filmibeat Kannada

ತೆಲುಗು ಮೆಗಾಸ್ಟಾರ್ ಚಿರಂಜೀವಿ ಮತ್ತು ಕನ್ನಡದ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಚಿರಂಜೀವಿಯ ಅವರ 151ನೇ ಚಿತ್ರ 'ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ಪಾಳೆಗಾರನ ಪಾತ್ರವನ್ನ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಈ ಮೂಲಕ ಚೊಚ್ಚಲ ಬಾರಿಗೆ ಚಿರಂಜೀವಿ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ಸುದೀಪ್. ಈ ಸುದ್ದಿ ಇನ್ನು ಅಧಿಕೃತವಾಗಿಲ್ಲ. ಸುದೀಪ್ ಚಿತ್ರೀಕರಣದಲ್ಲೂ ಭಾಗಿಯಾಗಿಲ್ಲ. ಹೀಗಿರುವಾಗ ಇನ್ನೊಂದು ಚಿತ್ರದಲ್ಲಿ ಚಿರು ಮತ್ತು ಸುದೀಪ್ ಒಂದಾಗಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ. ಈ ವಿಶೇಷ ಅಂದ್ರೆ ಇದು ಕನ್ನಡ ಸಿನಿಮಾವಂತೆ.

ಹಾಗಿದ್ರೆ, ಕನ್ನಡದಲ್ಲಿ ಚಿರಂಜೀವಿ ಮತ್ತು ಸುದೀಪ್ ಒಟ್ಟಿಗೆ ಅಭಿನಯಿಸಲಿರುವ ಚಿತ್ರ ಯಾವುದು? ಮುಂದೆ ಓದಿ.....

ಕನ್ನಡ ಚಿತ್ರಕ್ಕಾಗಿ ಒಂದಾಗ್ತಾರೆ ಚಿರು-ಕಿಚ್ಚ

ಚಿರಂಜೀವಿ ಅವರ 'ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದ ನಂತರ ಮೆಗಾಸ್ಟಾರ್ ಜೊತೆ ಸುದೀಪ್ ಎರಡನೇ ಸಿನಿಮಾ ಮಾಡಲಿದ್ದಾರಂತೆ. ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲದಲ್ಲಿ ತಯಾರಾಗಲಿದೆ ಎನ್ನುವುದು ಸ್ಯಾಂಡಲ್ ವುಡ್ ಗೆ ಸಿಹಿ ಸುದ್ದಿ.

ಸುದೀಪ್ ಗೆ ಸಿಕ್ತು 'ಮೆಗಾ' ಆಫರ್: ಇಂಥ ಅವಕಾಶ ಯಾರಿಗುಂಟು, ಯಾರಿಗಿಲ್ಲ.!

ಇಬ್ಬರು ಹೀರೋಗಳು

ಅಂದ್ಹಾಗೆ, ಚಿರು 151ನೇ ಚಿತ್ರದಲ್ಲಿ ಸುದೀಪ್ ಪಾಳೇಗಾರನಾಗಿ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಆದ್ರೆ, ಮುಂದಿನ ಚಿತ್ರದಲ್ಲಿ ಇಬ್ಬರು ಹೀರೋಗಳಾಗಿ ಮಿಂಚಲಿದ್ದಾರಂತೆ.

ನಿರ್ದೇಶಕ-ನಿರ್ಮಾಪಕ ಯಾರು

ಈ ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ ಎಂಬುದನ್ನ ಗೌಪ್ಯವಾಗಿಡಲಾಗಿದೆ. ಆದ್ರೆ, ಈ ಚಿತ್ರಕ್ಕೆ ಆಂಧ್ರದಲ್ಲಿ ಕನ್ನಡ ಸಿನಿಮಾಗಳನ್ನ ವಿತರಣೆ ಮಾಡುತ್ತಿರುವ ಸುದೀಪ್ ಆಪ್ತರೊಬ್ಬರು ಬಂಡವಾಳ ಹಾಕಲಿದ್ದಾರೆ. ಈ ಹಿಂದೆ ಸುದೀಪ್ ಅಭಿನಯದ 'ಸ್ಪರ್ಶಾ', 'ಧಮ್' ಹಾಗೂ ಇತ್ತೀಚಿನ 'ದಂಡುಪಾಳ್ಯ-2' ಚಿತ್ರವನ್ನ ಕೂಡ ವಿತರಣೆ ಮಾಡಿದ್ದಾರೆ.

'ಸಿಪಾಯಿ' ಆಗಿದ್ದ ಚಿರಂಜೀವಿ

ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದ 'ಸಿಪಾಯಿ' ಚಿತ್ರದ ಮೂಲಕ ಚಿರಂಜೀವಿ ಕನ್ನಡಕ್ಕೆ ಪರಿಚಯವಾಗಿದ್ದರು. ಬಹುಭಾಷೆಯಲ್ಲಿ ನಿರ್ಮಾಣವಾಗಿದ್ದ 'ಶ್ರೀಮಂಜುನಾಥ' ಚಿತ್ರದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದರು. ಈಗ ಸುದೀಪ್ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಪ್ರವೇಶ ಮಾಡಲಿದ್ದಾರಂತೆ.

'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

ಅಧಿಕೃತ ಮಾಹಿತಿ ಸಿಕ್ಕಿಲ್ಲ

ಈ ಬಗ್ಗೆ ಸುದೀಪ್ ಅವರು ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದ್ರೆ, ನಿರ್ಮಾಪಕರು ಇಂತಹ ಯೋಜನೆಯನ್ನ ರೂಪಿಸಿಕೊಂಡಿದ್ದು, ಈ ಇಬ್ಬರು ನಟರ ಬಳಿ ಚರ್ಚಿಸಿದ್ದಾರಂತೆ. ಅದೇನೆ ಇರಲಿ, ಅಧಿಕೃತ ಮಾಹಿತಿ ಹೊರ ಬೀಳುವವರೆಗೂ ಕಾದುನೋಡೋಣ.

ಒಂದಾದ ಸುದೀಪ್-ದರ್ಶನ್ ಬಳಗದಿಂದ ಒಗ್ಗಟ್ಟಿನ ಮಂತ್ರ

English summary
Kannada Actor Kiccha Sudeep and Telugu Megastar Chiranjeevi to act together 2nd Film After uyyalawada narasimha reddy .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada