»   » ಯುಗಾದಿ ಹಬ್ಬಕ್ಕೆ ಸುದೀಪ್ 'ರನ್ನ' ಗ್ರ್ಯಾಂಡ್ ರಿಲೀಸ್?

ಯುಗಾದಿ ಹಬ್ಬಕ್ಕೆ ಸುದೀಪ್ 'ರನ್ನ' ಗ್ರ್ಯಾಂಡ್ ರಿಲೀಸ್?

Posted By:
Subscribe to Filmibeat Kannada

ಟಾಲಿವುಡ್ ನ ಸೂಪರ್ ಹಿಟ್ 'ಅತ್ತಾರಿಂಟಿಕಿ ದಾರೇದಿ' ಸಿನಿಮಾದ ರೀಮೇಕ್ ಕನ್ನಡದ 'ರನ್ನ'. ಕಳೆದ ಮೂರ್ನಾಲ್ಕು ತಿಂಗಳಿನಿಂದ ಭರ್ಜರಿಯಾಗಿ ಶೂಟಿಂಗ್ ಮಾಡುತ್ತಿರುವ 'ರನ್ನ' ಚಿತ್ರತಂಡ, ಎಲ್ಲಾ ಕನ್ನಡಾಭಿಮಾನಿಗಳಿಗೆ ಯುಗಾದಿ ಹಬ್ಬದ ಪ್ರಯುಕ್ತ ದೊಡ್ಡ ಉಡುಗೊರೆ ನೀಡುವುದಕ್ಕೆ ಮುಂದಾಗಿದೆ.

ಅದೇನಪ್ಪಾ ಅಂದ್ರೆ, ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರವನ್ನ ಯುಗಾದಿ ಹಬ್ಬದ ಪ್ರಯುಕ್ತ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಈಗಾಗಲೇ 80% ರಷ್ಟು ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಎರಡು ಹಾಡುಗಳು ಮಾತ್ರ ಬಾಕಿ ಇವೆ.

Kiccha Sudeep starrer Ranna to release on Yugadi Festival

ಅದ್ರಲ್ಲಿ ಒಂದು ಹಾಡನ್ನ ಹಾಂಕಾಂಗ್ ನಲ್ಲಿ ಚಿತ್ರೀಕರಣ ನಡೆಸುವುದಕ್ಕೆ ನಿರ್ದೇಶಕ ನಂದಕಿಶೋರ್ ಪ್ಲಾನ್ ಮಾಡಿದ್ದಾರೆ. ಹಾಂಕಾಂಗ್ ಗೆ ಈಗಾಗ್ಲೇ ಟಿಕೆಟ್ಸ್ ಬುಕ್ ಆಗಿದ್ದು, ಫೆಬ್ರವರಿ 20 ರಂದು 'ರನ್ನ' ತಂಡ ಫ್ಲೈಟ್ ಹತ್ತುವುದು ಖಚಿತ. [ಸುದೀಪ್ 'ರನ್ನ' ಲೇಟಾಗಲು ಅಸಲಿ ಕಾರಣ ಏನು?]


ಎರಡು ಹಾಡಿನ ಬಳಿಕ, ಪೋಸ್ಟ್ ಪ್ರೊಡಕ್ಷನ್ ಬಿರುಸಿನಿಂದ ನಡೆಸಿ, ಮಾರ್ಚ್ ಹೊತ್ತಿಗೆ, ಅಂದ್ರೆ ಯುಗಾದಿ ಹಬ್ಬದ ಹಿಂದೆ ಮುಂದೆ ರಿಲೀಸ್ ಆದ್ರೆ, 'ರನ್ನ'ನಿಗೆ ಮೈಲೇಜ್ ಸಿಗುತ್ತದೆ. ಹಬ್ಬದ ಸಂಭ್ರಮದ ಜೊತೆಗೆ ಸಾಲು ಸಾಲು ರಜಾ ಇರುವ ಕಾರಣ 'ರನ್ನ' ಚಿತ್ರವನ್ನ 'ಯುಗಾದಿ'ಗೆ ಫಿಕ್ಸ್ ಮಾಡಬೇಕು ಅನ್ನುವ ಪ್ಲಾನಿಂಗ್ 'ರನ್ನ' ಅಡ್ಡದಲ್ಲಿ ನಡೆಯುತ್ತಿದೆ. [ಕಾಲಿವುಡ್ ನಲ್ಲಿ 'ಹುಲಿ'ಯಾದ ಕಿಚ್ಚ ಸುದೀಪ್!]


Kiccha Sudeep starrer Ranna to release on Yugadi Festival

ಅಷ್ಟುಬಿಟ್ಟರೆ, ಚಿತ್ರತಂಡ ಇನ್ನೂ ಬಿಡುಗಡೆ ಡೇಟ್ ನ ಫೈನಲ್ ಮಾಡಿ ಅನೌನ್ಸ್ ಮಾಡಿಲ್ಲ. ಒಂದು ವೇಳೆ ಪೋಸ್ಟ್ ಪ್ರೊಡಕ್ಷನ್ ಹಂತ ಕೊಂಚ ನಿಧಾನವಾಗಿ, ಸೆನ್ಸಾರ್ ಲೇಟ್ ಆದ್ರೆ, 'ರನ್ನ' ಯುಗಾದಿ ಹಬ್ಬಕ್ಕೆ ಬರುವುದು ಡೌಟು. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಯುಗಾದಿ ಹಬ್ಬಕ್ಕೆ 'ರನ್ನ' ಸುದೀಪ್ ರನ್ನ ನೀವು ಬೆಳ್ಳಿತೆರೆ ಮೇಲೆ ನೋಡಬಹುದು. (ಏಜೆನ್ಸೀಸ್)

English summary
As per the reports, Director Nandakishore is planning to release Kiccha Sudeep starrer Most Awaited movie Ranna on Yugadi Festival.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada