»   » 'ಬಲುಪು' ರೀಮೇಕ್ ನಲ್ಲಿ ಕಿಚ್ಚ ಸುದೀಪ್?

'ಬಲುಪು' ರೀಮೇಕ್ ನಲ್ಲಿ ಕಿಚ್ಚ ಸುದೀಪ್?

Posted By:
Subscribe to Filmibeat Kannada

'ಯಾಕೆ ರೀಮೇಕ್ ಸಿನಿಮಾ ಮಾಡಬಾರದು?' ಅಂತ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಹೀಗಂತ ನಿನ್ನೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ರೀಮೇಕ್ ಚಿತ್ರಗಳು ಸಕ್ಸಸ್ ಆಗುತ್ತಿರುವ ಕಾರಣ, ಅಂತಹ ಚಿತ್ರಗಳನ್ನ ಮಾಡಿದರೆ ತಪ್ಪೇನು ಅನ್ನೋದು ಅಭಿಮಾನಿಗಳ ಪ್ರೀತಿಯ 'ನಲ್ಲ'ನ ಅಭಿಪ್ರಾಯ.

ಸದ್ಯಕ್ಕೆ ಕೆ.ಎಸ್.ರವಿಕುಮಾರ್ ನಿರ್ದೇಶಿಸಲಿರುವ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ 'ರೀಮೇಕ್ ರಾಜಾ' ಅಂತ ಕರೆಯಿಸಿಕೊಳ್ಳುತ್ತಿರುವ ಸುದೀಪ್, ಮತ್ತೊಂದು ರೀಮೇಕ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. [ಯಾಕೆ ರೀಮೇಕ್ ಮಾಡಬಾರದು? ಸುದೀಪ್ ಖಡಕ್ ಪ್ರಶ್ನೆ!]

Kiccha Sudeep to star in Balupu remake?

ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, ಮಾಸ್ ಮಹಾರಾಜಾ ರವಿತೇಜಾ ಅಭಿನಯದ 'ಬಲುಪು' ಚಿತ್ರದ ಕನ್ನಡ ಅವತರಣಿಕೆಗೆ ಸುದೀಪ್ ಓಕೆ ಅಂದಿದ್ದಾರೆ. [ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು]

2013 ರಲ್ಲಿ ತೆರೆಕಂಡ 'ಬಲುಪು' ಚಿತ್ರ ಟಾಲಿವುಡ್ ಬಾಕ್ಸ್ ಆಫೀಸ್ ನ ಚಿಂದಿ ಉಡಾಯಿಸಿತು. ಆ ಚಿತ್ರದ ರೀಮೇಕ್ ಹಕ್ಕುಗಳನ್ನ ಪಡೆದಿರುವ ನಿರ್ಮಾಪಕರು ಸುದೀಪ್ ಜೊತೆ ಮಾತುಕತೆ ನಡೆಸಿದ್ದಾರಂತೆ. 'ಕೈಯಲ್ಲಿರುವ ಚಿತ್ರಗಳು ಕಂಪ್ಲೀಟ್ ಆದ ನಂತ್ರ 'ಬಲುಪು' ರೀಮೇಕ್' ಅಂತ ಸುದೀಪ್ ಹೇಳಿದ್ದಾರಂತೆ. [ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ]

Kiccha Sudeep to star in Balupu remake?

ಹಾಗಂತ ಅಂತೆ-ಕಂತೆಗಳು ಗಾಂಧಿನಗರದಲ್ಲಿ ಗುಯ್ ಗುಟ್ಟುತ್ತಿವೆ. ಇದು ನಿಜವೇ ಆದರೆ, ಸುದೀಪ್ ರೀಮೇಕ್ ಲಿಸ್ಟ್ ಗೆ 'ಬಲುಪು' ಲೇಟೆಸ್ಟ್ ಎಂಟ್ರಿ ಅಷ್ಟೆ. (ಏಜೆನ್ಸೀಸ್)

English summary
According to the Grapevine, Kiccha Sudeep has given a nod to star in the remake of Tollywood Hit 'Balupu'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada