»   » ಸಲ್ಮಾನ್ ಚಿತ್ರದಲ್ಲಿ 'ವಿಲನ್' ಆಗಲು ಸುದೀಪ್ ಸಂಭಾವನೆ ಎಷ್ಟಿರಬಹುದು?

ಸಲ್ಮಾನ್ ಚಿತ್ರದಲ್ಲಿ 'ವಿಲನ್' ಆಗಲು ಸುದೀಪ್ ಸಂಭಾವನೆ ಎಷ್ಟಿರಬಹುದು?

Posted By:
Subscribe to Filmibeat Kannada

'ದಿ ವಿಲನ್' ಚಿತ್ರದಲ್ಲಿ ನಟಿಸುತ್ತಿರುವ ಸುದೀಪ್ ಮತ್ತೊಂದು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ಅಂಗಳದಿಂದ ಬಾಲಿವುಡ್ ವರೆಗೂ ಸದ್ದು ಮಾಡುತ್ತಿದೆ.

ಹೌದು, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರಂತೆ. ಅದು ವಿಲನ್ ಪಾತ್ರವೆನ್ನುವುದು ವಿಶೇಷ.

ಹಾಗಿದ್ರೆ, ಸಲ್ಮಾನ್ ಎದುರು ವಿಲನ್ ಆಗಲು, ಸುದೀಪ್ ಅವರು ಎಷ್ಟು ಸಂಭಾವನೆ ಪಡೆಯಬಹುದು ಎಂಬ ಕುತೂಹಲ ಎಲ್ಲರನ್ನ ಕಾಡುತ್ತಿದೆ. ಈ ಬಗ್ಗೆ ಬಿಟೌನ್ ನಲ್ಲಿ ಕೂಡ ಚರ್ಚೆಯಾಗುತ್ತಿದೆ. ಮುಂದೆ ಓದಿ.....

ಸಲ್ಲು ಚಿತ್ರದಲ್ಲಿ ಸುದೀಪ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ 'ಟೈಗರ್ ಜಿಂದಾ ಹೈ' ಸಿನಿಮಾದಲ್ಲಿ, ಕಿಚ್ಚ ಸುದೀಪ್ ವಿಶೇಷ ಅಭಿನಯಿಸುತ್ತಿದ್ದಾರಂತೆ. ಇದನ್ನ ಬಾಲಿವುಡ್ ಮೂಲಗಳು ಬಹಿರಂಗಪಡಿಸಿದ್ದು, ಹಿಂದಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ.

ಐಎಸ್ಐ ಏಜೆಂಟ್ ಸುದೀಪ್

ಏಕ್ತಾ ಟೈಗರ್ ಚಿತ್ರದ ಮುಂದುವರೆದ ಭಾಗ ಎನ್ನಲಾಗುತ್ತಿರುವ 'ಟೈಗರ್ ಜಿಂದಾ ಹೈ' ಚಿತ್ರದಲ್ಲಿ ಸುದೀಪ್ ಪಾಕಿಸ್ತಾನದ ಐಎಸ್ಐ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸುದೀಪ್ ಸಂಭಾವನೆ ಎಷ್ಟು?

ಕನ್ನಡದ ಸ್ಟಾರ್ ನಟ ಸಲ್ಮಾನ್ ಖಾನ್ ಚಿತ್ರದಲ್ಲಿ ಖಳನಾಯಕನಾಗಲು ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಕುತೂಹಲ ಕಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಸುದೀಪ್ ಒಂದು ಸಿನಿಮಾಗೆ ಸುಮಾರು 6 ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ. ಆದ್ರೆ, ಈ ಚಿತ್ರದಲ್ಲಿ ಬಾಲಿವುಡ್ ನಿರ್ಮಾಪಕರು ಎಷ್ಟು ಆಫರ್ ಮಾಡಿದ್ದಾರೆ ಎನ್ನುವುದು ಚರ್ಚೆಯಾಗುತ್ತಿದೆ.

ಪ್ರಕಾಶ್ ರೈ ಹೆಚ್ಚು ಸಂಭಾವನೆ ಪಡೆದ ವಿಲನ್!

ಮೂಲಗಳ ಪ್ರಕಾರ ಬಹುಭಾಷಾ ನಟ ಪ್ರಕಾಶ್ ರೈ ಒಂದು ಚಿತ್ರಕ್ಕೆ 2 ರಿಂದ 3 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿತ್ತು. ಆದ್ರೆ, ಪ್ರಕಾಶ್ ರೈ ಅವರಿಗಿಂತ ಹೆಚ್ಚು ಸಂಭಾವನೆ ಸುದೀಪ್ ಅವರಿಗೆ ನೀಡಲಾಗುತ್ತಿದೆಯಂತೆ.

ಹಿಂದಿಯಲ್ಲಿ ಇದೇ ಮೊದಲಲ್ಲ

ಸುದೀಪ್ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಆಫರ್ ಪಡೆದುಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಫೂಂಕ್' ಮತ್ತು 'ರಣ್' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ತೆರೆಹಂಚಿಕೊಂಡು ಭೇಷ್ ಎನಿಸಿಕೊಂಡಿದ್ದಾರೆ.

'ಟೈಗರ್ ಜಿಂದಾ ಹೈ' ಚಿತ್ರದ ಬಗ್ಗೆ.....

2012ರಲ್ಲಿ ತೆರೆಕಂಡಿದ್ದ ಏಕ್ತಾ ಟೈಗರ್ ಚಿತ್ರದ ಮುಂದುವರೆದ ಭಾಗ. ಈ ಚಿತ್ರಕ್ಕೆ ಅಲಿ ಅಬ್ಬಾಸ್ ಜಾಫರ್ ಆಕ್ಷನ್ ಕಟ್ ಹೇಳುತ್ತಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಪರೇಶ್ ರಾವಲ್, ಗಿರೀಶ್ ಕಾರ್ನಡ್, ಕಿಚ್ಚ ಸುದೀಪ್ ಸೇರಿದಂತೆ ಹಲವರು ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರು ಮಾಡಿದ್ದು, ಆದಷ್ಟೂ ಬೇಗ ಸುದೀಪ್ ಕೂಡ ಭಾಗಿಯಾಗುವ ಸಾಧ್ಯತೆ ಇದೆ.

English summary
As per latest reports that is coming, Sudeep to Act in Salman Khan’s upcoming movie Tiger Zinda Hai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada