'ಮಾಣಿಕ್ಯ' ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್

Recommended Video

Kiccha Sudeep to wear his director cap affter 5 years | FILMIBEAT KANNADA

'ಮೈ ಆಟೋಗ್ರಾಫ್' ಸಿನಿಮಾದ ಮೂಲಕ ನಟ ಸುದೀಪ್ ನಿರ್ದೇಶಕರಾದರು. ಆ ಸಿನಿಮಾದ ದೊಡ್ಡ ಹಿಟ್ ಆಯ್ತು. ಆ ಬಳಿಕ 'ಶಾಂತಿ ನಿವಾಸ', 'ಜಸ್ಟ್ ಮಾತ್ ಮಾತಲ್ಲಿ', 'ವೀರ ಮದಕರಿ', 'ಕೆಂಪೇಗೌಡ', 'ಮಾಣಿಕ್ಯ' ಸಿನಿಮಾಗಳನ್ನು ಸುದೀಪ್ ಡೈರೆಕ್ಷನ್ ಮಾಡಿದ್ದಾರೆ.

'ಮಾಣಿಕ್ಯ' ನಂತರ ನಟನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದ ಸುದೀಪ್ ಈಗ ಮತ್ತೆ ನಿರ್ದೇಶನಕ್ಕೆ ಮರಳುವ ಪ್ಲಾನ್ ಮಾಡಿದ್ದಾರಂತೆ. ಈಗಾಗಲೇ ಕಥೆಯ ಎಳೆ ಅಂತಿಮವಾಗಿದ್ದು, ಸಿನಿಮಾದ ತಯಾರಿಯಲ್ಲಿ ಸುದೀಪ್ ತೊಡಗಿದ್ದಾರೆ. 2020ರ ಮಧ್ಯದಲ್ಲಿ ಈ ಸಿನಿಮಾ ಶುರು ಆಗಬಹುದಂತೆ.

Kiccha Sudeep Will Returns To Direction

ಸದ್ಯ, 'ಕೋಟಿಗೊಬ್ಬ 3', 'ಬಿಲ್ಲಾ ರಂಗ ಭಾಷ', 'ಫ್ಯಾಂಟಮ್' ಸೇರಿದಂತೆ ಸೇರಿದಂತೆ ಕೆಲವು ಸಿನಿಮಾಗಳನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಕೆಲಸಗಳು ನಡೆಯುತ್ತಿದೆ. ಈ ನಡುವೆಯೇ ತಾವೇ ಒಂದು ಸಿನಿಮಾ ನಿರ್ದೇಶನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

'ಮಾಣಿಕ್ಯ' ಸಿನಿಮಾ ಬಂದು ಐದು ವರ್ಷಗಳು ಕಳೆದಿದ್ದು, ಆ ನಂತರ ಸುದೀಪ್ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ಸುದೀಪ್ ನಿರ್ದೇಶನದ ಬಹುತೇಕ ಸಿನಿಮಾಗಳನ್ನು ಅವರೇ ನಿರ್ಮಾಣ ಮಾಡಿದ್ದು, ಈ ಚಿತ್ರದ ಕೂಡ ಅವರ ಬ್ಯಾನರ್ ನಲ್ಲಿಯೇ ಬರಬಹುದು.

ಸದ್ಯ, 'ದಬಾಂಗ್ 3' ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾದ ಮೇಲೆ ಸುದೀಪ್ ಹಿಂದಿಯಲ್ಲಿ ಇನ್ನಷ್ಟು ಜನಪ್ರಿಯತೆ ಪಡೆಯುತ್ತಾರೆ. ಅವರ ನಿರ್ದೇಶನದ ಸಿನಿಮಾ ಮತ್ತಷ್ಟು ಕ್ರೇಜ್ ಸೃಷ್ಟಿ ಮಾಡುತ್ತದೆ.

More from Filmibeat

English summary
Kannada actor Kiccha Sudeep will returns to direction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X