»   » ಮತ್ತೊಂದು ತೆಲುಗು ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್!

ಮತ್ತೊಂದು ತೆಲುಗು ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್!

Posted By:
Subscribe to Filmibeat Kannada

ಕನ್ನಡ ನಟ ಕಿಚ್ಚ ಸುದೀಪ್ ತೆಲುಗು ಚಿತ್ರ 'ಈಗ'ದಲ್ಲಿ ನಟಿಸಿದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿರುವುದು ಗೊತ್ತೇ ಇದೆ. 'ಈಗ' ಚಿತ್ರಕ್ಕೂ ಮೊದಲು ಬಾಲಿವುಡ್ ಚಿತ್ರಗಳಲ್ಲೂ ನಟಿಸಿ ಇಡೀ ಭಾರತಕ್ಕೆ ಪರಿಚಿತವಾಗಿರುವ ನಟ ಕನ್ನಡದ ಸುದೀಪ್. ಆದರೆ 'ಈಗ' ಚಿತ್ರದ ನಂತರ ಸುದೀಪ್ ಯಾವುದೇ ಪರಭಾಷೆಯ ಚಿತ್ರಗಳನ್ನು ಒಪ್ಪಿಕೊಳ್ಳದಿರುವುದು ಹಲವರ ಹುಬ್ಬೇರಿಸಿದೆ. 'ಈಗ' ನಂತರ ಕನ್ನಡದಲ್ಲಿ ಸುದೀಪ್ ನಟಿಸಿರುವ ಚಿತ್ರಗಳೆಂದರೆ 'ವರದನಾಯಕ' ಹಾಗೂ 'ಬಚ್ಚನ್'.

ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಬಹುಭಾಷೆಯಲ್ಲಿ ಬಂದ ತೆಲುಗು ಚಿತ್ರ 'ಈಗ'ದಲ್ಲಿ ಅತ್ಯದ್ಭುತವಾಗಿ ನಟಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ, ತಮಗೆ ಸಿಕ್ಕಾಪಟ್ಟೆ ಬೇಡಿಕೆಯಿದ್ದರೂ ಯಾವುದೇ ಹೊಸ ಚಿತ್ರಗಳಿಗೆ ಸುದೀಪ್ ಸಹಿ ಮಾಡಿಲ್ಲ. ಈಗ ಬಿಡುಗಡೆಗೆ ಮೊದಲು ಅವರು ಕನ್ನಡದಲ್ಲಿ ಸಹಿ ಮಾಡಿದ್ದ 'ವರದನಾಯಕ' ಹಾಗೂ 'ಬಚ್ಚನ್' ಚಿತ್ರೀಕರಣದಲ್ಲಿ ಮಾತ್ರ ತೊಡಗಿಸಿಕೊಂಡು ತೆಪ್ಪಗಿದ್ದಾರೆ ಸುದೀಪ್.

ಆದರೆ ಈಗ ಹೈದರಾಬಾದ್ ಕಡೆಯಿಂದ ಸುದ್ದಿಯೊಂದು ಸ್ಫೋಟವಾಗಿದೆ. ಹಬ್ಬಿರುವ ಸುದ್ದಿ ಪ್ರಕಾರ, ತೆಲುಗು ಕಾಮಿಡಿ ಕಿಂಗ್ ಅಲ್ಲರಿ ನರೇಶ್ ನಟನೆಯ "ಆಸು ರಾಜ ರಾಣಿ ಜಾಕಿ ಮಾತ್ರುಮ" ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಮ್ಮ ಕನ್ನಡದ ಕಿಚ್ಚ ಸುದೀಪ್ ನಟಿಸಲಿದ್ದಾರೆ. ಸುದೀಪ್ ನಟಿಸಲಿರುವ ಭಾಗದ ಚಿತ್ರಿಕರಣ ಸದ್ಯದಲ್ಲೇ ಪ್ರಾರಂಭವಾಗಬೇಕಿದೆ. ಈ ಚಿತ್ರಕ್ಕೆ ಸುದೀಪ್ ಭಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ.

ಆದರೆ ಬಂದಿರುವ ಈ ಸುದ್ದಿ ನಟ ಸುದೀಪ್ ಕಡೆಯಿಂದ ಇನ್ನೂ ಕನ್ಫರ್ಮ್ ಆಗಿಲ್ಲ. "ಸಾಕಷ್ಟು ಚಿತ್ರಗಳು ಮಾತುಕತೆ ಹಂತದಲ್ಲಿವೆ. ಆದರೆ ಯಾವುದೂ ಇನ್ನೂ ಫೈನಲ್ ಆಗಿಲ್ಲ. ಪಕ್ಕಾ ಆದಾಗ ನಾನೇ ಹೇಳುತ್ತೇನೆ" ಎಂದಿದ್ದಾರೆ ಕಿಚ್ಚ ಸುದೀಪ್. ಈ ಹಿಂದೆ 'ಗೌತಮ್ ಮೆನನ್' ಚಿತ್ರದಲ್ಲಿ 'ಸುದೀಪ್' ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದು ಠುಸ್ ಆಯ್ತು. ಈಗ ಬಂದಿರುವ ಈ ಸುದ್ದಿಯ ಕಥೆ ಅದೇನಾಗಲಿದೆಯೋ!

(ಕನ್ನಡ ನಟ ಕಿಚ್ ಸುದೀಪ್ ಅಪರೂಪದ ಫೋಟೋಗಳಿವೆ, ನೋಡಿ...)

ತೆಲುಗು ಈಗ ನಂತರ ಕನ್ನಡದಲ್ಲೇ ಬಿಜಿಯಾಗಿರುವ ಸುದೀಪ್

ತೆಲುಗು ಈಗ ಚಿತ್ರದ ನಂತರ ಕನ್ನಡದಲ್ಲೇ ಬಿಜಿಯಾಗಿದ್ದಾರೆ ನಟ ಸುದೀಪ್. ಅವರಿಗೆ ಸಾಕಷ್ಟು ಅವಕಾಶಗಳು ಬಂದರೂ ಸುದೀಪ್ ಅದ್ಭುತ ಪಾತ್ರಕ್ಕಾಗಿ ಕಾಯುತ್ತಿದ್ದಾರೇನೋ!

ಈಗ ಚಿತ್ರದಲ್ಲಿ ಅದ್ಭುತ ಅಭಿನಯ ನೀಡಿರುವ ಸುದೀಪ್

ತೆಲುಗು 'ಈಗ' ಚಿತ್ರದಲ್ಲಿ ಸುದೀಪ್ ನೀಡಿರುವ ಅತ್ಯದ್ಭುತ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಕನ್ನಡದಲ್ಲಿ ಸುದೀಪ್ ಅಭಿನಯದ ವರದನಾಯಕ ಚಿತ್ರ ತೆರೆಗೆ ಸಿದ್ಧ

ತೆಲುಗು ಚಿತ್ರ 'ಈಗ' ನಂತರ ಕನ್ನಡದಲ್ಲಿ ಸುದೀಪ್ ಅಭಿನಯದ ವರದನಾಯಕ ಚಿತ್ರವು ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ.

ವರದನಾಯಕ ಚಿತ್ರದಲ್ಲಿ ಚಿರು ಅಣ್ಗನಾಗಿ ನಟಿಸಿರುವ ಸುದೀಪ್

ಕನ್ನಡದ ವರದನಾಯಕ ಚಿತ್ರದಲ್ಲಿ ನಟ ಚಿರಂಜೀವಿ ಸರ್ಜಾರ ಅಣ್ಗನಾಗಿ ಕಿಚ್ಚ ಸುದೀಪ್ ನಟಿಸಿದ್ದಾರೆ.

ಬಚ್ಚನ್ ಚಿತ್ರದಲ್ಲಿ ಮಿಂಚಲಿರುವ ಕಿಚ್ಚ ಸುದೀಪ್

ಕನ್ನಡದಲ್ಲಿ ವರದನಾಯಕ ಚಿತ್ರದ ನಂತರ ಬಚ್ಚನ್ ಚಿತ್ರದಲ್ಲಿ ಮಿಂಚಲಿದ್ದಾರೆ ಕಿಚ್ಚ ಸುದೀಪ್.

ಸ್ವಮೇಕ್ 'ಬಚ್ಚನ್' ಚಿತ್ರದಲ್ದಿ ಸುದೀಪ್ ಗತ್ತು ನೋಡಿ!

ಈ ಫೋಟೋದಲ್ಲಿ ಕನ್ನಡದ ಸ್ವಮೇಕ್ 'ಬಚ್ಚನ್' ಚಿತ್ರದಲ್ದಿ ಸುದೀಪ್ ಗತ್ತು ನೋಡಿ!

ಈಗ ಚಿತ್ರದ ನಂತರ ಮತ್ತೊಂದು ಚಿತ್ರದಲ್ಲಿ ಸುದೀಪ್ ನಟನೆ?

ತೆಲುಗು ಸೂಪರ್ ಹಿಟ್ 'ಈಗ' ಚಿತ್ರದಲ್ಲಿ ನಟಿಸಿದ ನಂತರ ಸುದೀಪ್ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಲು ಸಹಿ ಮಾಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಆದರೆ ಅದು ಪಕ್ಕಾ ಆಗಿಲ್ಲ.

ಸುದೀಪ್ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸುವುದು ನಿಜವೇ?

ಹಬ್ಬಿರುವ ಸುದ್ದಿ ಪ್ರಕಾರ, ತೆಲುಗು ಕಾಮಿಡಿ ಕಿಂಗ್ ಅಲ್ಲರಿ ನರೇಶ್ ನಟನೆಯ "ಆಸು ರಾಜ ರಾಣಿ ಜಾಕಿ ಮಾತ್ರುಮ" ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಮ್ಮ ಕನ್ನಡದ ಕಿಚ್ಚ ಸುದೀಪ್ ನಟಿಸಲಿದ್ದಾರೆ. ಸುದೀಪ್ ನಟಿಸಲಿರುವ ಭಾಗದ ಚಿತ್ರಿಕರಣ ಸದ್ಯದಲ್ಲೇ ಪ್ರಾರಂಭವಾಗಬೇಕಿದೆ.

ಈ ಚಿತ್ರಕ್ಕೆ ಸುದೀಪ್ ಭಾರಿ ಮೊತ್ತದ ಸಂಭಾವನೆ ಪಡೆಯಲಿದ್ದಾರೆ.ಆದರೆ ಬಂದಿರುವ ಈ ಸುದ್ದಿ ನಟ ಸುದೀಪ್ ಕಡೆಯಿಂದ ಇನ್ನೂ ಕನ್ಫರ್ಮ್ ಆಗಿಲ್ಲ.

English summary
There is news buzz that Kannada Actor Kichcha Sudeep acts in another Telugu movie. He acts a very Important Role in Allari Naresh upcoming Telugu movie. But this news not confirmed by Sudeep. 
 
Please Wait while comments are loading...