twitter
    For Quick Alerts
    ALLOW NOTIFICATIONS  
    For Daily Alerts

    ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆಂಬ ಸುದ್ದಿಗೆ ಸಾಕ್ಷಿ?

    |

    ಕನ್ನಡದ ನಟ ಕಿಚ್ಚ ಸುದೀಪ್ ಒಂದುಕಡೆ ಚಿತ್ರೋದ್ಯಮದಲ್ಲಿ ಪ್ರಕಾಶಿಸುತ್ತಿದ್ದಾರೆ. ಇನ್ನೊಂದು ಕಡೆ ಅವರು ರಾಜಕೀಯದ ಬಗ್ಗೆ ಆಸಕ್ತಿ ತಾಳಿದ್ದಾರೆಯೇ? ಸುದೀಪ್ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ದಟ್ಟವಾಗಿ ಹಬ್ಬಿದೆ. ಆದರೆ ಅದು ಮುಂದುವರಿದಿಲ್ಲವಾದರೂ ಅಲ್ಲಲ್ಲಿ ಆ ಸುದ್ದಿಗೆ ಕೆಲವು ಪುಷ್ಠಿಕರವಾದ ಸಾಕ್ಷಿಗಳು ಸಿಗುತ್ತಿವೆ.

    ಆದರೆ ಯಾರೊಬ್ಬರೂ ಸುದೀಪ್ ಅವರನ್ನು ನೇರವಾಗಿ ಪ್ರಶ್ನಿಸುತ್ತಿಲ್ಲ. ಕಾರಣ, ಸುದೀಪ್ ಅವರಾಗಲೀ ಅಥವಾ ಬಿಜೆಪಿಯಾಗಲೀ ಅದನ್ನು ಅಧಿಕೃತ ಗೊಳಿಸುವ ಗೋಜಿಗೇ ಹೋಗಿಲ್ಲ. ಸುದೀಪ್ ಅವರೇ ತಮ್ಮ ಪಕ್ಷದ ಪ್ರಚಾರಕ್ಕೆ 'ದಿ ಬೆಸ್ಟ್', ಸುದೀಪ್ ಕರ್ನಾಟಕ ಸದ್ಯದ 'ಯೂಥ್ ಐಕಾನ್' ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಗಿದೆ.

    ತೆಲುಗು ಚಿತ್ರ 'ಈಗ' ಹಾಗೂ ವರದನಾಯಕ ಚಿತ್ರೀಕರಣವನ್ನು ಇತ್ತೀಚಿಗೆ ಮುಗಿಸಿರುವ ಸುದೀಪ್, ಸಿನಿಮಾ ನಟನೆ ಹಾಗೂ ಕಿರುಚಿತ್ರದ ನಿರ್ದೇಶನದಲ್ಲಿ ಬಿಜಿಯಾಗಿದ್ದಾರೆ. ಆದರೆ ಈ ಮಧ್ಯೆ ಸುದೀಪ್ ಅವರಿಗೆ ಬಿಜೆಪಿ ಕಡೆಯಿಂದ ತಮ್ಮ ಪಕ್ಷ ಸೇರುವಂತೆ ಆಫರ್ ನೀಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ.

    ಚುನಾವಣೆಗೆ ಇನ್ನು ಕೇವಲ 15 ತಿಂಗಳುಗಳು ಮಾತ್ರ ಬಾಕಿ ಇವೆ. ಪ್ರಮುಖ ಎಲ್ಲಾ ರಾಜಕೀಯ ಪಕ್ಷಗಳು ಈಗಿನಿಂದಲೇ ಭರದ ಸಿದ್ಧತೆಗೆ ತೊಡಗಿವೆ. ತಮ್ಮತಮ್ಮ ಪಕ್ಷಗಳ ಪ್ರಚಾರಕ್ಕಾಗಿ ಕ್ರಿಕೆಟ್ ಹಾಗೂ ಸಿನಿಮಾ ಸ್ಟಾರ್ ಗಳನ್ನು ಕಣಕ್ಕಿಳಿಸಲು ಪಕ್ಷಗಳು ಗಂಭೀರವಾಗಿ ನಿರ್ಧರಿಸಿವೆ. ಹೀಗಾಗಿ, ಅಧಿಕಾರರೂಢ ಬಿಜೆಪಿ ಪಕ್ಷ ಅನಿಲ್ ಕುಂಬ್ಳೆ ಹಾಗೂ ಸುದೀಪ್ ಮೇಲೆ ಕಣ್ಣಿಟ್ಟಿದೆ.

    ಸುದ್ದಿ ಮೂಲಗಳ ಪ್ರಕಾರ, ಕ್ರಿಕೆಟಿಗ ಅನಿಲ್ ಕುಂಬ್ಳೆಗಿಂತಲೂ ಸುದೀಪ್ ಹೆಚ್ಚು ಜನಪ್ರಿಯ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ. ಯುವಜನತೆಯನ್ನು ಸೆಳೆಯಲು ಕುಂಬ್ಳೆಗಿಂತ ಕಿಚ್ಚರೇ ಬೆಸ್ಟ್. ಹೀಗಾಗಿ ಸುದೀಪ್ ಅವರತ್ತ ಬಿಜೆಪಿ ಪಕ್ಷದ ಘಟಾನುಘಟಿಗಳ ಕಣ್ಣು ನೆಟ್ಟಿದೆ. ಈಗಾಗಲೇ ಸುದೀಪ್ ರೊಂದಿಗೆ ಈ ಸಂಬಂಧ ಮಾತುಕತೆಯೂ ನಡೆದಿದೆ.

    ಸುದೀಪ್ ಈಗಾಗಲೇ ಬಿಜೆಪಿ ಪಕ್ಷ ಸೇರಿದ್ದಾರೆ ಎಂಬ ಕೆಲವರ ವಾದಕ್ಕೆ ಪುರಾವೆ ಇಲ್ಲ. ವಿಧಾನ ಪರಿಷತ್ ಗೆ ಸುದೀಪ್ ಅವರನ್ನು ನಾಮನಿರ್ದೇಶನ ಮಾಡಲು ಬಿಜೆಪಿ ಗಂಭೀರವಾಗಿ ಯೋಚಿಸುತ್ತಿದೆ. ಅದಕ್ಕೆ ಕಾರಣ ಚುನಾವಣೆಯಲ್ಲಿ ಗೆಲುವಿನಲ್ಲಿ ಅವರಿಂದ ಲಾಭವಾಗುವುದು ಖಂಡಿತ ಎಂಬುದು ಬಿಜೆಪಿ ಸದ್ಯದ ಲೆಕ್ಕಾಚಾರ. ಆದರೆ ಇದ್ಯಾವುದಕ್ಕೂ ಯಾವುದೇ ಸ್ಪಷ್ಟವಾದ ಪುರಾವೆ ಇಲ್ಲ.

    ಕಳೆದ ಚುನಾವಣೆ ವೇಳೆಯಲ್ಲೇ ಸುದೀಪ್ ಹೆಸರು ಕೇಳಿಬಂದಿತ್ತು. ಆದರೆ ಸುದೀಪ್ ಇನ್ನೂ ಯಾವ ಪಕ್ಷವನ್ನೂ ಸೇರಿಲ್ಲ. ಆದರೆ ಈ ಬಾರಿ ಸುದೀಪ್ ಬಗ್ಗೆ ಇಷ್ಟೊಂದು ಸುದ್ದಿಯಾಗಲು ಕಾರಣ, ಸುದೀಪ್ ಸದ್ಯ ಗೃಹ ಖಾತೆ ಹಾಗೂ ಸಾರಿಗೆ ಮಂತ್ರಿ ಆರ್ ಅಶೋಕ್ ಅವರ ಆಪ್ತರು, ಹಾಗೂ ಬಿಜೆಪಿ ಪ್ರಭಲವಾಗಿರುವ ಶಿವಮೊಗ್ಗಾಕ್ಕೆ ಸೇರಿದವರು.

    ಆರ್ ಅಶೋಕ್ ಹಾಗೂ ಸುದೀಪ್ ನಂಟು ಹೊಸದೇನೂ ಅಲ್ಲ. ಸುದೀಪ್ ಅವರ ಕೆಂಪೇಗೌಡ ಚಿತ್ರದ ಆಡಿಯೋ ಬಿಡುಗಡೆಗೆ ಆರ್ ಅಶೋಕ್ ಹಾಜರಾಗಿದ್ದರು. ಆ ಚಿತ್ರದಲ್ಲಿರುವ ಗೃಹಮಂತ್ರಿಯ ಪಾತ್ರಕ್ಕೆ ಸ್ವತಃ ಸುದೀಪ್ ಅಶೋಕ್ ಅವರಿಗೆ ಆಫರ್ ನೀಡಿದ್ದರು. ಆದರೆ ಅಶೋಕ್ ಆಗ ಸಿಕ್ಕಾಪಟ್ಟೆ ಬಿಜಿಯಾಗಿದ್ದರಿಂದ ಆ ಪಾತ್ರವನ್ನು ನಂತರ ಅಶೋಕ್ ಖೇಣಿಗೆ ವರ್ಗಾಯಿಸಲಾಯಿತು.

    ಹೀಗೆ ಸುದೀಪ್ ಹಾಗೂ ಆರ್ ಅಶೋಕ್ ನಡುವಿನ ನಂಟು, ಬಜೆಪಿ ಹಾಗೂ ಶಿವಮೊಗ್ಗಾದ ನಂಟು ಎಲ್ಲವನ್ನೂ ಸೇರಿಸಿ ಸುದೀಪ್ ರಾಜಕೀಯ ಸೇರಲಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜವಾಗಿಯೂ ಸುದೀಪ್ ಬಿಜೆಪಿ ಸೇರುವ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ಆದರೆ ಈಗಾಗಲೇ ಬಿಜೆಪಿ ಉನ್ನತ ವಲಯದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಮುಂದೇನಾಗಲಿದೆಯೋ? (ಒನ್ ಇಂಡಿಯಾ ಕನ್ನಡ)

    English summary
    The rumor was high that Kichcha Sudeep has joined BJP. Sudeep was preferred more than Anil Kumble from Karnataka by the young wing of Bharathiya Janata Party. The political parties are making contacts with popular stars from cricket and cinema stars as the assembly election is just 15 months away. 
 
    Monday, June 11, 2012, 12:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X