»   » ಯಾರ್ರಿ ಹೇಳಿದ್ದು ಸುದೀಪ್ ಕನ್ನಡ ಚಿತ್ರರಂಗ ತೊರೀತಾರಂತ?

ಯಾರ್ರಿ ಹೇಳಿದ್ದು ಸುದೀಪ್ ಕನ್ನಡ ಚಿತ್ರರಂಗ ತೊರೀತಾರಂತ?

By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಗ್ಗೆ ಗಾಂಧಿನಗರದಲ್ಲಿ ಇತ್ತೀಚೆಗೆ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಸುದೀಪ್ ಚಿತ್ರರಂಗ ತೊರೆಯುತ್ತಾರಂತೆ, ಹಾಗಂತೆ-ಹೀಗಂತೆ ಅಂತ, ಅಂತೆ-ಕಂತೆಗಳ ಪುರಾಣ ಬಹಳ ಜೋರಾಗೇ ನಡೆಯುತ್ತಿತ್ತು.

'ರನ್ನ' ಚಿತ್ರದ ನಿರ್ಮಾಪಕ ಹಾಗೂ ವಿತರಕರು ಸಂಭಾವನೆ ನೀಡದೆ ವಿಚಾರದಲ್ಲಿ ಸುದೀಪ್ ಅವರಿಗೆ ಅವರ ಮೇಲೆ ಸಣ್ಣ ಮಟ್ಟಿನ ಬೇಸರ ಹಾಗೂ ಮುನಿಸು ಉಂಟಾಗಿದ್ದ ಹಿನ್ನಲೆಯಲ್ಲಿ ಚಿತ್ರರಂಗ ತೊರೆಯುವ ಮಾತುಗಳನ್ನಾಡಿದ್ದಾರೆ ಅಂತ ಫಿಲಂ ಮೇಕರ್ ಕೃ‍ಷ್ಣ ಹೊರಹಾಕಿದ್ದ ಸುದ್ದಿ ಕಿಚ್ಚ ಅಭಿಮಾನಿಗಳಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿ ಮಾಡಿತ್ತು. ಈ ಬಗ್ಗೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ಕಿನಲ್ಲೂ ಭಾರಿ ಚರ್ಚೆಯಾಗಿತ್ತು.[ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಬೇಕಂತೆ? ಏಕಂತೆ?]

Kichcha Sudeep puts full stop to quitting rumours

ಇದೀಗ ಅದಕ್ಕೆಲ್ಲಾ ಬ್ರೇಕ್ ಹಾಕಿದ ಅಭಿನವ ಚಕ್ರವರ್ತಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರಂತೆ. ಈ ಮೊದಲು ಚಿತ್ರರಂಗ ತೊರೆಯುವ ಮಾತುಗಳನ್ನಾಡಿದ್ದಾರೆ ಅಂತ ಸುದ್ದಿಯಾದ ಸಂದರ್ಭದಲ್ಲಿ ಕಿಚ್ಚನ ಅಭಿಮಾನಿಗಳು ಅವರ ಮನೆಗೂ ದೌಡಾಯಿಸಿ ಚಿತ್ರರಂಗ ತೊರೆಯಬೇಡಿ ನೀವು ನಮಗೆ ವಾಪಸ್ ಬೇಕು ಅಂತ ರಿಕ್ವೆಸ್ಟ್ ಕೂಡ ಮಾಡಿಕೊಂಡಿದ್ದರಂತೆ.

ಇದೀಗ ಕೆಲ ನಿರ್ಮಾಪಕರ ಮನವೊಲಿಕೆ ಯಶಸ್ವಿಯಾಗಿದ್ದು, ಕಿಚ್ಚ ಸುದೀಪ್ ಅವರು ಮತ್ತೆ ಚಿತ್ರದಲ್ಲಿ ನಟಿಸುತ್ತೇನೆ ಎಂದಿದ್ದಾರೆ ಅಂತ ಸುದ್ದಿಯಾಗಿದೆ. ಸದ್ಯಕ್ಕೆ ಖ್ಯಾತ ನಿರ್ದೇಶಕ ರವಿಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸಲು ನಿರ್ಧಾರ ಮಾಡಿದ್ದಾರೆ ಎಂದು ಗಾಂಧಿನಗರದಲ್ಲಿ ಸಖತ್ ಗಾಸಿಪ್ ಕ್ರಿಯೇಟ್ ಆಗಿದೆ.

ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್,ಕಾಲಿವುಡ್ ನಲ್ಲೂ ಫೇಮಸ್ ಆಗಿರುವ ಕಿಚ್ಚ ಸುದೀಪ್ ಇದೀಗ ಮತ್ತೆ ವಾಪಸಾಗುತ್ತಿದ್ದಾರೆ ಅಂದ್ರೆ ಸಹಜವಾಗಿ ಅಭಿಮಾನಿಗಳಲ್ಲಿ ಸಂತಸ ಮೂಡುತ್ತಿದೆ.

English summary
Know Why Kichcha Sudeep fans trending with #WeWantKichchaSudeep on microblogging site Twitter. Sudeep is allegedly upset with few producers and Distributors and hinted to quit from Kannada Film Industry. But now Sudeep has changed his decission and decided to act with Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada