For Quick Alerts
  ALLOW NOTIFICATIONS  
  For Daily Alerts

  ಲೋಕಸಭೆ ಚುನಾವಣಾ ಅಖಾಡಕ್ಕೆ ಕಿಚ್ಚ ಸುದೀಪ್?

  By ಉದಯರವಿ
  |

  ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಜಕೀಯ ಅಡಿಯಿಡುತ್ತಾರೆ ಎಂಬ ಮಾತುಗಳು ಬಹಳ ವರ್ಷಗಳಿಂದಲೂ ಗಾಳಿಯಲ್ಲಿ ತೇಲಾಡುತ್ತಿವೆ. 2014ರಲ್ಲಿ ನಡೆಯಲಿರುವ 16ನೇ ಲೋಕಸಭೆಗೆ ಕಿಚ್ಚ ಸುದೀಪ್ ಅವರು ಸ್ಪರ್ಧಿಸಲಿದ್ದಾರೆಯೇ? ಈ ಪ್ರಶ್ನೆಗೆ ಮತ್ತೆ ಜೀವ ಬಂದಿದ್ದು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡುತ್ತಿದೆ.

  ಸುದೀಪ್ ಅವರು ಸದ್ಯಕ್ಕೆ ತೆಲುಗಿನ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೈದರಾಬಾದಿನಿಂದ ಬೆಂಗಳೂರಿಗೆ ಮರಳಿದ ಅವರು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

  ಈ ಮಾತುಕತೆ ವಿವರಗಳು ಸದ್ಯಕ್ಕೆ ಲಭ್ಯವಿಲ್ಲದಿದ್ದರೂ ಮೂಲಗಳ ಪ್ರಕಾರ ಅವರನ್ನು ಲೋಕಸಭೆ ಚುನಾವಣಾ ಕಣಕ್ಕೆ ಇಳಿಸುವ ಸಂಬಂಧ ಮಾತುಕತೆ ನಡೆದಿದೆ ಎನ್ನಲಾಗಿದೆ. ಒಟ್ಟು 30 ನಿಮಿಷಗಳ ಕಾಲ ಸುದೀಪ್ ಹಾಗೂ ಸಿದ್ದರಾಮಯ್ಯ ನಡುವೆ ಮಾತುಕತೆ ನಡೆದಿದೆ.

  ಸುದೀಪ್ ಅವರಿಗೆ ಸ್ವತಃ ಸಿದ್ದರಾಮಯ್ಯ ಅವರೇ ಆಹ್ವಾನ ಕೊಟ್ಟಿದ್ದರು ಎಂಬುದು ಮತ್ತೊಂದು ಟ್ವಿಸ್ಟ್. ಈ ಹಿಂದೆಯೂ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪರ ಪ್ರಚಾರ ಮಾಡಲು ಕೇಳಲಾಗಿತ್ತು. ಆಗ ಸುದೀಪ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗಲೂ ಅದೇ ರೀತಿಯ ಮಾತುಗಳು ಕೇಳಿಬರುತ್ತಿವೆ.

  English summary
  The speculations is rife that Kannada actor Kichcha Sudeep to contest Lok Sabha election in 2014. The actor meets chief minister Siddaramaiah in his residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X