ಡೆವಿಲ್ ದರ್ಶನಕ್ಕೆ ಕಾಯುತ್ತಿದ್ದವರಿಗೆ ಮ್ಯಾಕ್ಸಿಮಮ್ ಮನರಂಜನೆ ನೀಡಲು ಸಿದ್ಧವಾದ ಕಿಚ್ಚ ಸುದೀಪ್..?

ಕನ್ನಡ ಚಿತ್ರರಂಗದಲ್ಲಿ ಒಂದು ಆನೆ ಇತ್ತು. ಅದಕ್ಕೆ ಎಲ್ಲರೂ 'ಐರಾವತ' ಎಂದು ಹೆಸರಿಟ್ಟಿದ್ದರು. ಆದರೆ ಅದೊಂದು ದಿನ ನಾನು ನಡೆದಿದ್ದೇ ದಾರಿ ಎಂದು ಈ 'ಗಜ' ಗಾಂಭಿರ್ಯ ಮರೆತು ಹಾವಳಿ ಇಡಲು ಶುರು ಮಾಡಿತು. ಕೊನೆಗೆ ಕೊಲೆಗಡುಕ ಆನೆ ಎನ್ನುವ ಆರೋಪದೊಂದಿಗೆ ಜೈಲು ಪಾಲಾಯಿತು. ಆ ಆನೆಯ ಹೆಸರು ದರ್ಶನ್.

ಇಂಥಾ ದರ್ಶನ್ ಕಂಬಿ ಹಿಂದೆ ಹೋಗುವ ಮುನ್ನ ಡೆವಿಲ್ ಎಂಬ ಚಿತ್ರವನ್ನು ಶುರು ಮಾಡಿದ್ದರು. ಎಲ್ಲವೂ ಅಂದುಕೊಂಡತೆ ಆಗಿದ್ದರೆ, ಹಣದ ಅಮಲು, ಸುತ್ತಲು ಮೊಳಗುವ ಜೈಕಾರದ ನಶೆ .. ನಾನೇನೂ ಮಾಡಿದರು ಬಚಾವ್ ಆಗ್ಬಿಡ್ತೀನಿ ಎನ್ನುವ ಅಹಂಕಾರ.. ನೆತ್ತಿಗೇರದಿದ್ದರೆ ಈ ಸಮಯಕ್ಕೆ ಡೆವಿಲ್ ಚಿತ್ರದ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದು ತಲುಪಬೇಕಿತ್ತು. ಚಿತ್ರ ಈ ಡಿಸೆಂಬರ್ 20ಕ್ಕೆ ತೆರೆಗೆ ಬರಬೇಕಿತ್ತು. ಆದರೆ ದುರ್ದೈವ ಹಾಗಾಗಲಿಲ್ಲ. ಚಿತ್ರ ಈ ವರ್ಷ ತೆರೆಗೆ ಬರುವುದಕ್ಕೆ ಸಾಧ್ಯವೂ ಇಲ್ಲ.

Kichcha Sudeep s MAX is eyeing the release date of Darshan s Devil Will the film release on Decembe

ಹೀಗಿರುವಾಗ ಈಗ ಡೆವಿಲ್ ಜಾಗಕ್ಕೆ ಮ್ಯಾಕ್ಸ್ ಬರಲಿದ್ದಾನೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ. ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಈ ಡಿಸೆಂಬರ್ 20ರಂದು ಬಿಡುಗಡೆಯಾಗಲಿದೆ ಎಂದು ಪುಕಾರು ಹಬ್ಬಿದೆ. ಹಬ್ಬಿರುವ ಈ ಸುದ್ದಿ ಎಷ್ಟು ನಿಜಾ ಗೊತ್ತಿಲ್ಲ. ಆದರೆ.. ಸದ್ಯಕ್ಕೆ ಈ ಸುದ್ದಿಯನ್ನು ಕೇಳಿ ಸುದೀಪ್ ಸೈನ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಕೊನೆಗೂ ಹಾಗೂ ಹೀಗೂ ಮ್ಯಾಕ್ಸಿಮಮ್ ಮನರಂಜನೆಗೆ ಮುಹೂರ್ತ ನಿಗಧಿಯಾಗಿದೆ ಎಂದು ಕುಣಿದು ಕುಪ್ಪಳಿಸುತ್ತಿದೆ.

ಅಂದ್ಹಾಗೇ ಈ ಡಿಸೆಂಬರ್‌ನಲ್ಲಿಯೇ ಧ್ರುವ ಸರ್ಜಾ ಅಭಿನಯದ ಪ್ರೇಮ್ ನಿರ್ದೇಶನದ ಕೆಡಿ ಚಿತ್ರ ಬಿಡುಗಡೆಯಾಗುತ್ತೆ ಎನ್ನುವ ಸುದ್ದಿ ಹಿಂದೆ ಹಬ್ಬಿತ್ತು. ಅನೇಕರು ಡೆವಿಲ್ ಚಿತ್ರದ ಎದುರು ಕೆಡಿ ಬಿಡುಗಡೆಯಾಗಲಿದೆ ಎಂದು ಮಾತನಾಡಿಕೊಂಡಿದ್ದರು. ಆದರೆ ಈಗ ಡೆವಿಲ್ ಜಾಗ ಖಾಲಿ ಮಾಡಿದೆ. ಕೆಡಿ ಚಿತ್ರದ ಕೆಲಸ ಇನ್ನೂ ಬಾಕಿ ಇರುವ ಕಾರಣಕ್ಕೆ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರುವುದು ಅನುಮಾನ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಖಾಲಿ ಉಳಿದ ಜಾಗವನ್ನು ಮ್ಯಾಕ್ಸ್ ಮೂಲಕ ಸುದೀಪ್ ತುಂಬಲು ಅಣಿಯಾಗಿದ್ದಾರೆ ಎನ್ನುವ ಸುದ್ದಿ ಸದ್ಯಕ್ಕೆ ಕೇಳಿ ಬರುತ್ತಿದೆ.

ಉಳಿದಂತೆ ಮ್ಯಾಕ್ಸ್ ನಲ್ಲಿ ಮ್ಯಾಕ್ಸಿಮಮ್ ಸಂಖ್ಯೆಯಲ್ಲಿ ಇರುವುದು ಕನ್ನಡಿಗರೇ. ಉದಾಹರಣೆಗೆ ಸುಕೃತಾ ವಾಗ್ಲೇ, ಸಂಯುಕ್ತ ಹೊರನಾಡು, ಉಗ್ರಂ ಮಂಜು. ಅನಿರುದ್ಧ್ ಭಟ್. ಇನ್ನೂ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.ಕಲಾ ನಿರ್ದೇಶಕ ಶಿವಕುಮಾರ್ ಅವರದ್ದಾದರೆ, ಶೇಖರ್ ಚಂದ್ರ ಚಿತ್ರವನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಉಳಿದಂತೆ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಇರುವ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ‌ಕೂಡ ಇದ್ದಾರೆ. ಇಳವರಸು, ಸುನಿಲ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಇನ್ನೂ 'ತುಪಾಕಿ'.. 'ಕಬಾಲಿ'.. 'ಅಸುರನ್'.. 'ಕರ್ಣನ್'.. 'ನಾರಪ್ಪ'.. ಹೀಗೆ ಒಂದಕ್ಕಿಂತ ಒಂದು ಚಿತ್ರಗಳನ್ನೂ ತಮಿಳಿನಲ್ಲಿ ನಿರ್ಮಾಣ ಮಾಡಿರುವ ಕಲಿಪುಲಿ ಎಸ್ ತನು ಈ ಚಿತ್ರವನ್ನು ನಿರ್ಮಾಣ ಮಾಡಿದ್ಧಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಿನಿಮಾಗೆ ಬಹುತೇಕ ಶೂಟಿಂಗ್ ​ನಡೆದಿರುವುದು ವಿಶೇಷ.

ಒಟ್ನಲ್ಲಿ ಸದ್ಯಕ್ಕೆ ಸುದೀಪ್ ಅವರ ಮಹತ್ವಕಾಂಕ್ಷೆಯ ಚಿತ್ರ ಮ್ಯಾಕ್ಸ್ ಈ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ ಎನ್ನುವ ಸುದ್ದಿ ಹಬ್ಬಿದೆ. ನಿಜಕ್ಕೂ ಈ ಬಾರಿ ಮ್ಯಾಕ್ಸ್ ಚಿತ್ರ ಡಿಸೆಂಬರ್ 20ರಂದು ಬಿಡುಗಡೆಯಾಗುತ್ತಾ, ಎದುರಾದ ಅಡೆತಡೆಗಳನ್ನೆಲ್ಲ ದಾಟಿಕೊಂಡು ಚಿತ್ರ ಚಿತ್ರಮಂದಿರದ ಅಂಗಳಕ್ಕೆ ಬರುತ್ತಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: darshan sudeep sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X