ಹೀರೋಯಿನ್ ಫ್ರೆಂಡ್ ಜೊತೆ ಕ್ರಿಕೆಟಿಗ ರಾಹುಲ್ ಡೇಟಿಂಗ್: ಯಾರು ಆ ಸ್ನೇಹಿತೆ?
Recommended Video
ಕ್ರಿಕೆಟ್ ಆಟಗಾರರ ಜೊತೆ ಸಿನಿಮಾ ನಟಿಯರು ಹೆಸರು ತಳುಕು ಹಾಕಿಕೊಳ್ಳುವುದು ಹೊಸದೇನಲ್ಲ. ಆದರೆ, ಪದೇ ಪದೇ ಒಬೊಬ್ಬರ ನಟಿಯರ ಜೊತೆ ಆ ಆಟಗಾರನ ಹೆಸರು ಅಂಟಿಕೊಳ್ಳುತ್ತಿರುವುದು ಗಮನಿಸಬೇಕಾದ ವಿಚಾರ.
ಮಾಡೆಲ್ ಕಮ್ ನಟಿ ನಿಧಿ ಅಗರ್ ವಾಲ್ ಜೊತೆ ಆರಂಭದಲ್ಲಿ ಕೆಎಲ್ ರಾಹುಲ್ ಹೆಸರು ಸದ್ದು ಮಾಡಿತು. ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ, ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎನ್ನಲಾಯಿತು. ಆದ್ರೆ, ನಾವಿಬ್ಬರು ಜಸ್ಟ್ ಫ್ರೆಂಡ್ ಎಂದು ನಿಧಿ ಈ ಗಾಸಿಪ್ ಗೆ ತೆರೆ ಎಳೆದರು.
ಅದಾದ ಬಳಿಕ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಹಾಗೂ ನಟಿ ಸೋನಂ ಬಾಜ್ವಾ ಜೊತೆಯೂ ರಾಹುಲ್ ಹೆಸರು ಕೇಳಿಬಂತು. ಆಮೇಲೆ ಅದು ವದಂತಿ ಅಷ್ಟೇ ಎಂದರು. ಈಗ ಇನ್ನೊಬ್ಬ ಹುಡುಗಿ ಜೊತೆ ರಾಹುಲ್ ನಾಮಧೇಯ ಸದ್ದು ಮಾಡುತ್ತಿದೆ. ಈ ಸಲ ನಟಿ ಅನ್ನೋದಕ್ಕಿಂತ ನಟಿಯ ಸ್ನೇಹಿತೆ ಎಂದೇ ಹೇಳಬಹುದು. ಯಾರದು? ಮುಂದೆ ಓದಿ....

ಆಲಿಯಾ ಭಟ್ ಸ್ನೇಹಿತೆ ಜೊತೆ ರಾಹುಲ್
ಬಾಲಿವುಡ್ ನಟಿ ಆಲಿಯಾ ಭಟ್ ಅವರ ಆಪ್ತ ಗೆಳತಿಯೊಬ್ಬರ ಜೊತೆ ರಾಹುಲ್ ಡೇಟ್ ಮಾಡುತ್ತಿರಬಹುದು ಎಂಬ ಗುಸುಗುಸು ಈಗ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ, ಇತ್ತೀಚಿಗಷ್ಟೆ ಆ ಯುವತಿ ರಾಹುಲ್ ಜೊತೆಗಿರುವ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವುದು.

ಯಾರು ಆಲಿಯಾ ಸ್ನೇಹಿತೆ?
ಆಲಿಯಾ ಭಟ್ ಅವರ ಆಪ್ತ ಗೆಳತಿ ಆಕಾಂಕ್ಷ ರಂಜನ್ ಕಪೂರ್. ಮೂಲತಃ ಮಾಡೆಲ್ ಆಗಿರುವ ಆಕಾಂಕ್ಷ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ. ಈಗ ಕ್ರಿಕೆಟರ್ ರಾಹುಲ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಮತ್ತೊಂದೆಡೆ ಬಾಲಿವುಡ್ ಗೆ ಪ್ರವೇಶ ಮಾಡುವ ತಯಾರಿ ನಡೆಸಿದ್ದಾರೆ.

ನನ್ನ ವೈಯಕ್ತಿಕ ವಿಷ್ಯಗಳು ವೈಯಕ್ತಿಕವಾಗಿಯೇ ಇದೆ
ಲವ್, ಡೇಟಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಾಂಬೆ ಟೈಮ್ಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಎಲ್ ರಾಹುಲ್ ''ನನ್ನ ಖಾಸಗಿ ಜೀವನವನ್ನ ಪರ್ಸನಲ್ ಆಗಿಯೇ ಇಟ್ಟುಕೊಂಡಿದ್ದೇನೆ. ನಾನು ಈಗ ಕ್ರಿಕೆಟ್ ಗೆ ಮಾತ್ರ ಕಮಿಟ್ ಆಗಿದ್ದೇನೆ'' ಎಂದು ಹೇಳಿದ್ದಾರೆ.

ಸದ್ಯಕ್ಕೆ ನಾನು ಸಿಂಗಲ್
'ನೀವು ಸಿಂಗಲ್' ಎಂದು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ''ಸದ್ಯಕ್ಕೆ ಅದು ನನಗೂ ಗೊತ್ತಿಲ್ಲ. ಅದರ ಬಗ್ಗೆ ನಾನು ಖಚಿತಪಡಿಸಿಕೊಂಡು ನಿಮಗೆ ತಿಳಿಸುತ್ತೇನೆ'' ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.


Click it and Unblock the Notifications










