ಮತ್ತೊಮ್ಮೆ ಚಿರಂಜೀವಿ ಚಿತ್ರದಲ್ಲಿ ನಟಿಸುತ್ತಾರಾ ಕನ್ನಡ ನಟ ಸುದೀಪ್?
ತೆಲುಗು ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಸುದೀಪ್ ಮತ್ತೊಮ್ಮೆ ತೆರೆ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಚಿರಂಜೀವಿ ನಟಿಸುತ್ತಿರುವ 'ಅಚಾರ್ಯ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕಾಗಿ ಸುದೀಪ್ ಅವರನ್ನು ಅಪ್ರೋಚ್ ಮಾಡಲಾಗಿದೆಯಂತೆ.
'ಆಚಾರ್ಯ' ಸಿನಿಮಾದಲ್ಲಿ ನಟಿಸುವಂತೆ ನಿರ್ದೇಶಕ ಕೊರಟಲಾ ಶಿವ ಕಿಚ್ಚನ ಬಳಿಕ ಕೇಳಿದ್ದು, ಅದಕ್ಕೆ ಸುದೀಪ್ ಇನ್ನು ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ.
ಆಚಾರ್ಯ ಸಿನಿಮಾದಲ್ಲಿ ಯಾವ ಪಾತ್ರಕ್ಕೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೂ, ಈ ಪಾತ್ರಕ್ಕೆ ಸುದೀಪ್ ಸೂಕ್ತ ಎಂದು ಸ್ವತಃ ಚಿರಂಜೀವಿ ಸಲಹೆ ನೀಡಿದ ಕಾರಣ, ನಿರ್ದೇಶಕ ಕೊರಟಲಾ ಶಿವ ಮಾತುಕತೆ ಮಾಡಿದ್ದಾರೆ ಎನ್ನಲಾಗಿದೆ.

ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಸಿನಿಮಾಗಳ ಚಿತ್ರೀಕರಣ ಮುಗಿಸಿರುವ ಸುದೀಪ್, ಬಿಗ್ ಬಾಸ್ ರಿಯಾಲಿಟಿ ಶೋ ಕೈಗೆತ್ತಿಕೊಳ್ಳಲಿದ್ದಾರೆ. ತಮ್ಮದೇ ನಿರ್ದೇಶನದ ಚಿತ್ರದ ಬಗ್ಗೆಯೂ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ ಚಿರು ಚಿತ್ರದಿಂದ ಆಫರ್ ಬಂದಿರುವುದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದರ ಬಗ್ಗೆ ಕುತೂಹಲ ಉಂಟು ಮಾಡಿದೆ.
ಇದಕ್ಕೂ ಮುಂಚೆ ಸುರೇಂದರ್ ರೆಡ್ಡಿ ನಿರ್ದೇಶನದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಚಿರಂಜೀವಿ ಜೊತೆ ಸುದೀಪ್ ಸ್ಕ್ರೀನ್ ಶೇರ್ ಮಾಡಿದ್ದರು. ಮತ್ತೊಮ್ಮೆ ಈ ಜೋಡಿಯನ್ನು ಒಟ್ಟಿಗೆ ನೋಡುವ ಅವಕಾಶ ಸಿಗುತ್ತದೆಯೇ?

ಇನ್ನುಳಿದಂತೆ ಕೊರಟಲಾ ನಿರ್ದೇಶನದ 'ಆಚಾರ್ಯ' ಸಿನಿಮಾ ಬೇಸಿಗೆವೊತ್ತಿಗೆ ತೆರೆಗೆ ಬರಲು ಸಜ್ಜಾಗಿದೆ. ಕಾಜಲ್ ಅಗರ್‌ವಾಲ್ ನಾಯಕಿಯಾಗಿದ್ದು, ರಾಮ್ ಚರಣ್ ತೇಜ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.


Click it and Unblock the Notifications











