»   » ನಯನಾ ಕೃಷ್ಣ 'ಚಪ್ಪಲಿ ಸೇವೆ'ಗೆ ಪಬ್ಲಿಕ್ ಏನಂತಾರೆ?

ನಯನಾ ಕೃಷ್ಣ 'ಚಪ್ಪಲಿ ಸೇವೆ'ಗೆ ಪಬ್ಲಿಕ್ ಏನಂತಾರೆ?

Posted By:
Subscribe to Filmibeat Kannada
ನಟಿ ನಯನಾ ಕೃಷ್ಣ, ನಿರ್ದೇಶಕ ರಿಷಿಗೆ ನಿನ್ನೆ ತಮ್ಮ ಅಭಿನಯದ ಕೊಟ್ಲಲ್ಲಪ್ಪೋ ಕೈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಚಪ್ಪಲಿಯಲ್ಲಿ ಹೊಡೆದು ನಿನ್ನೆ ಮಾಡಿದ ಮಹಾ ಸುದ್ದಿಗೆ ಕನ್ನಡ ಸಿನಿಪ್ರೇಕ್ಷಕರು ಏನನ್ನುತ್ತಿದ್ದಾರೆ ಗೊತ್ತೇ? ಹಲವರ ಅಭಿಪ್ರಾಯ ಹಲವು ರೀತಿಯಾಗಿದೆ. ಆದರೆ ಅವುಗಳ ಸಾರಾಂಶ ಮಾತ್ರ ಒಂದೇ. ಅದು ' ಚಿತ್ರೋದ್ಯಮದ ಮಾನ ಹೀಗೆ ಹರಾಜಾಗುವುದು ಸರಿಯಲ್ಲ'. ಆದರೆ ನಟಿ-ನಿರ್ದೇಶಕರ ಜಗಳ ಚಪ್ಪಲಿಯಲ್ಲಿ ಹೊಡೆಯುವ, ಹೊಡೆತ ತಿನ್ನುವ ಮಟ್ಟಿಗೆ ಹೋಗಿದ್ದು ಮಾತ್ರ ವಿಪರ್ಯಾಸ ಎನ್ನಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ನಡೆದ ಅವಾಂತರ ನಿರ್ದೇಶಕ ರಿಷಿ ಅಲ್ಲಿಂದ ಪಾರಾಗಿ ಬಂದು ಪೊಲೀಸ್ ಕಂಪ್ಲೇಟ್ ಕೊಡಲು ಆಟೋದಲ್ಲಿ ತೆರಳಲು ರೋಡಿಗೆ ಬಂದರು. ಆದರೆ ಅಲ್ಲೂ ಬಿಡದೇ ನಟಿ ನಯನಾ ಕೃಷ್ಣ ಹಾಗೂ ಮಹಿಳಾ ಸಂಘಟನೆಯ ಕೆಲವು ಮಹಿಳೆಯರು ರಿಷಿಗೆ ಬೈಯ್ದು ಥಳಿಸುವುದನ್ನು ಮುಂದುವರಿಸಿದರು. ಆಗ ಅಲ್ಲಿಯೇ ಹಾದು ಹೋಗುತ್ತಿದ್ದ ಸಾರ್ವಜನಿಕರಲ್ಲೊಬ್ಬರು "ಅಯ್ಯೋ.. ನಟ-ನಟಿಯರ ಸುದ್ದಿ ಮಗೀತು, ಈಗ ನಟಿ, ನಿರ್ದೇಶಕರ ಪಾಳಿ ಪ್ರಾರಂಭವಾಗಿದೆ" ಎಂದಿದ್ದು ಹಲವರ ಕಿವಿ ತಲುಪಿದೆ.

ಮತ್ತಿಬ್ಬರು ಮಾತನಾಡುತ್ತಾ "ಇವರಿಗೆ ಬಡಿದಾಡಿಕೊಳ್ಳಲು ಒಳಗಡೆ ಜಾಗವಿಲ್ಲವೇ! ಜಗಳ ಬಗೆಹರಿಸಿಕೊಳ್ಳಲು ಫಿಲಂ ಚೇಂಬರ್ ಇಲ್ಲವೇ? ಬೀದಿ ಜಗಳ ಮಾಡುವಷ್ಟು ಚಿತ್ರರಂಗ ಸಮಸ್ಯೆಗೆ ಸಿಲುಕಿದೆಯೇ" ಎನ್ನುತ್ತಿದ್ದರು. ಆದರೆ ಅವರಲ್ಲಿ ಯಾರೊಬ್ಬರಿಗೂ ಚಿತ್ರರಂಗದ ಬಗ್ಗೆಯಾಗಲೀ ಅಥವಾ ಚಿತ್ರೋದ್ಯಮದ ಮಂದಿಯ ಬಗ್ಗೆಯಾಗಲೀ ಆಳವಾದ ಜ್ಞಾನವಿದ್ದಂತೆ ತೋರುತ್ತಿರಲಿಲ್ಲ. ಆದರೆ ಅಲ್ಲಿದ್ದ ಜನರು ಪಿಸುಮಾತಿನಲ್ಲಿ ಮಾತುನಾಡುತ್ತಿದ್ದುದು ಅವರ ಬಾಯಿಂದ ಸ್ಪಷ್ಟವಾಗಿ ಕೇಳಿಬರುತ್ತಿತ್ತು ಅಷ್ಟೇ!

ಅಲ್ಲಿದ್ದ ಇನ್ನೊಬ್ಬರು "ನಟ, ನಟಿ ಹಾಗೂ ನಿರ್ದೇಶಕರು ತಮ್ಮ ತಮ್ಮ ಕೆಲಸ ಮಾಡುವ ಬದಲು ನಿರ್ಮಾಪಕರು ಹಾಗೂ ವಿತರಕರಾಗಲು ಹೋದರೆ ಹೀಗೆ ಆಗುವುದು. ಕಲೆಯ ಬೆಲೆಯೇ ಇವರಿಗೆ ಗೊತ್ತಿದೆಯೋ ಇಲ್ಲವೋ! ಒಟ್ಟಿನಲ್ಲಿ ಚಿತ್ರರಂಗ ಬೀದಿಗೆ ಬೀಳುತ್ತಿದೆ ಎಂಬ ಸಂಶಯ ಬರುತ್ತಿದೆ. ಇದಕ್ಕೂ ಮೊದಲು ಯಾರೋ ನಟಿ ನಿರ್ದೇಶಕರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದರು" ಎಂದರು.

ಒಟ್ಟಿನಲ್ಲಿ ಲೋಕೋ ಭಿನ್ನ ರುಚಿ ಎಂಬಂತೆ ತಲೆಗೊಂದೊಂದು ಮಾತು ಕೇಳಿಬರುತ್ತಲೇ ಇತ್ತು. ನಟಿನಟಿಯರನ್ನು ತಮ್ಮ ರೋಲ್ ಮಾಡೆಲ್ ಹಾಗೂ ಆರಾಧ್ಯ ದೈವ ಎಂದೇ ಭ್ರಮಿಸುವ ಸಮಾಜದಲ್ಲಿ ಹೀಗೆ ಸಾರ್ವಜನಿಕರೆದುರೇ ನಟರು, ನಟಿಯರು, ನಿರ್ದೇಶಕರು ಹಾಗೂ ತಂತ್ರಜ್ಞರು ಕಿತ್ತಾಡಿಕೊಂಡು ಅಸಹ್ಯವಾಗುವ ರೀತಿ ನಡೆದುಕೊಡರೆ ಸಂಬಂಧಪಟ್ಟವರು ತೀರಾ ಬೆಲೆ ತೆರಬೇಕಾಗುತ್ತದೆ. ಮುಂದೆಂದೂ ಹೀಗಾಗದಿರಲಿ ಎಂಬ ಅಲ್ಲಿದ್ದ ಹಿರಿಯರೊಬ್ಬರ ಮಾತು ಕೇಳಿ ಹಲವರು ಹೌದೆಂದು ತಲೆದೂಗಿದ್ದು ಮಾತ್ರ ಸುಳ್ಳಲ್ಲ... (ಒನ್ ಇಂಡಿಯಾ ಕನ್ನಡ)

English summary
Everybody is now aware of Kannada Movie Kottlallappo Kai controversy. Here are some 'Public Opinions' on that issue. Controversy is that actress Nayana Krishna has beaten the movie Director Rishi by her footwear at her upcoming movie 'Kottlallappo Kai Press Meet. 
 
Please Wait while comments are loading...