ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮುಂದಿನ ಚಿತ್ರಕ್ಕೆ ಇಬ್ಬರು ಕನ್ನಡತಿಯರು?

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ತೆಲುಗಿನ ನಿರ್ದೇಶಕರೊಬ್ಬರು 'ಪುಷ್ಪ ಚಿತ್ರಕ್ಕೆ ಹತ್ತು ಕೆಜಿಎಫ್ ಸಮ' ಎಂದು ಹೇಳಿಕೆ ಬೇರೆ ಕೊಟ್ಟಿದ್ದರು. ಬಾಹುಬಲಿ, ಕೆಜಿಎಫ್ ರೀತಿಯಲ್ಲಿ ಪುಷ್ಪ ಚಿತ್ರವೂ ಭಾಗ 1 ಮತ್ತು 2 ಆಗಿ ತೆರೆಗೆ ಬರ್ತಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ಅಂತ್ಯದಲ್ಲಿ 'ಪುಷ್ಪ' ಮೊದಲ ಭಾಗ ಚಿತ್ರಮಂದಿರಕ್ಕೆ ಬರುತ್ತಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ್ ಸಹ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪ ಬಹುತೇಕ ಚಿತ್ರೀಕರಣ ಮುಗಿಸಿರುವ ಅಲ್ಲು ಅರ್ಜುನ್ ಈಗ ಮುಂದಿನ ಚಿತ್ರಕ್ಕೆ ಚಾಲನೆ ಕೊಡಲು ಸಜ್ಜಾಗುತ್ತಿದ್ದಾರೆ.

ಶ್ರೀರಾಮ್ ವೇಣು ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸುತ್ತಿದ್ದು, ಈ ಚಿತ್ರಕ್ಕೆ 'ಐಕಾನ್' ಎಂದು ಹೆಸರಿಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಈ ಪ್ರಾಜೆಕ್ಟ್‌ಗಾಗಿ ಪೂರ್ವ ತಯಾರಿ ನಡೆದಿದ್ದು, ದಸರಾ ಹಬ್ಬದ ವಿಶೇಷವಾಗಿ ಸಿನಿಮಾ ಅಧಿಕೃತವಾಗಿ ಲಾಂಚ್ ಆಗಲಿದೆ ಎಂಬ ನಿರೀಕ್ಷೆ ಇದೆ. ಈ ನಡುವೆ ಅಲ್ಲು ಅರ್ಜುನ್ ಅಭಿನಯಿಸಲಿರುವ 'ಐಕಾನ್' ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಅದಕ್ಕಾಗಿ ಇಬ್ಬರು ಕನ್ನಡತಿಯರು ಅಂತಿಮವಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗ್ತಿದೆ. ಮುಂದೆ ಓದಿ...

ಪೂಜಾ ಹೆಗ್ಡೆ ಜೊತೆ ಮತ್ತೆ ಅಲ್ಲು

ಪೂಜಾ ಹೆಗ್ಡೆ ಜೊತೆ ಮತ್ತೆ ಅಲ್ಲು

'ಡಿಜೆ' ಹಾಗು 'ಅಲಾ ವೈಕುಂಠಪುರಂಲೋ' ಚಿತ್ರದ ಬಳಿಕ ನಟಿ ಪೂಜಾ ಹೆಗ್ಡೆ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ. ಶ್ರೀರಾಮ್ ವೇಣು ನಿರ್ದೇಶನದ ಐಕಾನ್ ಚಿತ್ರಕ್ಕೂ ಪೂಜಾ ಹೆಗ್ಡೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಹೊರಬಹಿದ್ದಿದೆ. ಈ ಜೋಡಿ ಕಾಣಿಸಿಕೊಂಡಿದ್ದ ಎರಡು ಚಿತ್ರಗಳು ದೊಡ್ಡ ಹಿಟ್ ಆಗಿತ್ತು. ಈಗ ಹ್ಯಾಟ್ರಿಕ್ ಸಿನಿಮಾ ಆಗಲಿದೆ.

ಉಪ್ಪೇನಾ ನಟಿಗೆ ಬಂಪರ್?

ಉಪ್ಪೇನಾ ನಟಿಗೆ ಬಂಪರ್?

ಇಬ್ಬರು ನಾಯಕಿಯರ ಪೈಕಿ ಎರಡನೇ ಹೀರೋಯಿನ್ ಆಗಲು 'ಉಪ್ಪೇನಾ' ಖ್ಯಾತಿಯ ಕೃತಿ ಶೆಟ್ಟಿಗೆ ಅವಕಾಶ ಸಿಕ್ಕಿದೆ ಎಂದು ಹೇಳಲಾಗಿದೆ. ಚೊಚ್ಚಲ ಚಿತ್ರದಲ್ಲೇ ಟಾಲಿವುಡ್ ಪ್ರೇಕ್ಷಕರನ್ನು ಮೋಡಿ ಮಾಡಿದ ಕೃತಿ ಶೆಟ್ಟಿಗೆ ಈಗ ದೊಡ್ಡ ದೊಡ್ಡ ಚಿತ್ರಗಳಿಂದ ಅವಕಾಶ ಬರ್ತಿದ್ದು, ಈಗ ಅಲ್ಲು ಅರ್ಜುನ್ ಜೊತೆ ನಟಿಸುವ ಆಫರ್ ಬಂದಿದೆಯಂತೆ. ವೈಷ್ಣವ್ ತೇಜ, ವಿಜಯ್ ಸೇತುಪತಿ ನಟಿಸಿದ್ದ ಉಪ್ಪೇನಾ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

ಇಬ್ಬರು ಕನ್ನಡತಿಯರು

ಇಬ್ಬರು ಕನ್ನಡತಿಯರು

ಪೂಜಾ ಹೆಗ್ಡೆ ಮತ್ತು ಕೃತಿ ಶೆಟ್ಟಿ ಇಬ್ಬರು ಸಹ ಮೂಲತಃ ಕರ್ನಾಟಕದವರು. ಮಂಜುನಾಥ್ ಹೆಗ್ಡೆ ಮತ್ತು ಲತಾ ಹೆಗ್ಡೆ ದಂಪತಿಯ ಪುತ್ರಿ ಪೂಜಾ. ಮೂಲತಃ ಕರ್ನಾಟಕದ ಉಡುಪಿಯವರು. ಆದರೆ, ಪೂಜಾ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿ. ಪೂಜಾ ಕನ್ನಡ, ತುಳು ಮಾತನಾಡ್ತಾರೆ. ಕೃತಿ ಶೆಟ್ಟಿ ಸಹ ಕರ್ನಾಟಕ ಮಂಗಳೂರು ಕುಟುಂಬಕ್ಕೆ ಸೇರಿದವರು. ಆದರೆ ಆಕೆ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿ.

ದಿಲ್ ರಾಜು ನಿರ್ಮಾಣ

ದಿಲ್ ರಾಜು ನಿರ್ಮಾಣ

ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಯೂತ್ ಲವ್ ಸ್ಟೋರಿ ಸಿನಿಮಾ ಆಗಿದ್ದು, ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಇದೆ. ಈ ಚಿತ್ರದ ಜೊತೆಗೆ ಮತ್ತೆರಡು ಮೆಗಾ ಸಿನಿಮಾಗಳನ್ನು ಆರಂಭಿಸುತ್ತಿದ್ದಾರೆ ದಿಲ್ ರಾಜು. ಶಂಕರ್ ಹಾಗೂ ರಾಮ್ ಚರಣ್ ತೇಜ ಕಾಂಬಿನೇಷನ್‌ನ RC15 ಹಾಗೂ ತಮಿಳು ವಿಜಯ್ ಮತ್ತು ವಂಶಿ ಪೈದಿಪಲ್ಲಿ ಜೋಡಿಯ ಚಿತ್ರಕ್ಕೂ ದಿಲ್ ರಾಜು ಬಂಡವಾಳ ಹಾಕ್ತಿದ್ದಾರೆ.

More from Filmibeat

English summary
Krithi Shetty and Pooja Hegde are the front runners for playing female lead in Allu Arjun's upcoming film ICON.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X