61 ವರ್ಷದ ಹಿರಿಯ ಸ್ಟಾರ್ ನಟನ ಚಿತ್ರ ತಿರಸ್ಕರಿಸಿದ ಕೃತಿ ಶೆಟ್ಟಿ!
ತೆಲುಗಿನ ಯುವ ನಟಿಯರಲ್ಲಿ ಅತಿ ವೇಗವಾಗಿ ಯಶಸ್ಸು ಪಡೆದು ಸ್ಟಾರ್ ನಟಿ ಎನಿಸಿಕೊಂಡಿದ್ದಾರೆ ನಟಿ ಕೃತಿ ಶೆಟ್ಟಿ. ಈ ಬೆಡಗಿಗೆ ಸದ್ಯ ಎಲ್ಲಿಲ್ಲದ ಬೇಡಿಕೆ ಇದೆ. ಕೃತಿ ಶೆಟ್ಟಿಗೆ ಅದಾಗಲೇ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಕೃತಿಯ ಮುಂದಿನ ಸಿನಿಮಾ ಯಾವುದು ಎಂದು ಅತ್ಯಂತ ಕುತೂಹಲದಿಂದ ಕಾಯುತ್ತಾರೆ ಅವರ ಫ್ಯಾನ್ಸ್.
ಕೃತಿಯ ಹೊಸ ಸಿನಿಮಾದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ ಅದು ಸಿನಿಮಾವನ್ನು ಒಪ್ಪಿದ್ದರ ಬಗ್ಗೆ ಅಲ್ಲ, ಬದಲಿಗೆ ತಿರಸ್ಕರಿಸಿದ್ದರ ಬಗ್ಗೆ. ನಟಿ ಕೃತಿ ಶೆಟ್ಟಿ ಸಿನಿಮಾ ಒಂದನ್ನು ತಿರಸ್ಕರಿಸಿದ್ದಾರಂತೆ. ಈ ಬಗ್ಗೆ ನಟಿ ಹೆಚ್ಚಾಗಿ ಸುದ್ದಿ ಆಗುತ್ತಿದ್ದಾರೆ. ಈ ನವ ನಾಯಕಿ ಇಂಥ ದೊಡ್ಡ ಸಿನಿಮಾ ಯಾಕೆ ತಿರಸ್ಕರಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.
ಕೃತಿ ಸಿನಿಮಾ ತಿರಸ್ಕರಿಸಿದ್ದರ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿದೆ. ಯಾಕೆಂದರೆ ಆಕೆ ಬೇಡ ಎಂದಿದ್ದು, ಸಣ್ಣ ಪುಟ್ಟ ಚಿತ್ರವಲ್ಲ. ಟಾಲಿವುಡ್‌ನ ಸ್ಟಾರ್ ನಟನ ಸಿನಿಮಾ. ಹಾಗಾಗಿ ಇದು ಅಚ್ಚರಿಗೆ ಕಾರಣವಾಗಿದೆ. ಅಷ್ಟಕ್ಕೂ ಕೃತಿ ನಟಿಸುವುದಿಲ್ಲ ಎಂದ ಆ ಚಿತ್ರ ಯಾವುದು. ಚಿತ್ರದ ನಾಯಕ ನಟ ಯಾರು, ಎನ್ನುವ ಬಗ್ಗೆ ಮುಂದೆ ಓದಿ...

ನಂದಮೂರಿ ಬಾಲಕೃಷ್ಣ ಚಿತ್ರಕ್ಕೆ ನೋ ಎಂದ ನಟಿ ಕೃತಿ ಶೆಟ್ಟಿ!
ನಂದಮೂರಿ ಬಾಲಕೃಷ್ಣ ಸದ್ಯ ಯಶಸ್ಸಿನ ಉತ್ತುಂಗದಲ್ಲಿ ಇದ್ದಾರೆ. 'ಅಖಂಡ' ಚಿತ್ರದ ಸಕ್ಸಸ್ ಬಳಿಕ ಬಾಲಯ್ಯ ತಮ್ಮ 107ನೇ ಚಿತ್ರವನ್ನು ಶುರು ಮಾಡಿದ್ದಾರೆ. ಇದೆ ಚಿತ್ರಕ್ಕಾಗಿ ನಟಿ ಕೃತಿ ಶೆಟ್ಟಿಯ ಕಾಲ್ ಶೀಟ್ ಕೇಳಲಾಗಿದೆಯಂತೆ. ಈ ಚಿತ್ರವನ್ನು ನಿರ್ದೇಶಕ ಗೋಪಿಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದು, ದೊಡ್ಡ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಇಂಥಹ ಆಫರ್ ಬಂದರೆ ಕಣ್ಣು ಮುಚ್ಚಿ ಓಕೆ ಅನ್ನುವ ಹಾಗಿದೆ. ಆದರೆ ಇದೇ ಚಿತ್ರವನ್ನು ನಟಿ ಕೃತಿ ಶೆಟ್ಟಿ ತಿರಸ್ಕರಿಸಿದ್ದಾರಂತೆ.

ಬಾಲಯ್ಯನಿಗೆ 61, ಕೃತಿಗೆ 18: ಇದೇ ಕಾರಣಕ್ಕೆ ಚಿತ್ರ ಬಿಟ್ಟ ನಟಿ!
ಕೃತಿ ಶೆಟ್ಟಿ ಸಿನಿಮಾವನ್ನು ತಿರಸ್ಕರಿಸಲು ಕಾರಣ ವಯಸ್ಸಿನ ಅಂತರ ಎನ್ನಲಾಗುತ್ತಿದೆ. ಬಾಲಯ್ಯ ಚಿತ್ರರಂಗದಲ್ಲಿ, ಅಭಿನಯದ ಅನುಭವದಲ್ಲಿ ಮಾತ್ರ ಅಲ್ಲ ವಯಸ್ಸಿನಲ್ಲೂ ಕೂಡ ಕೃತಿಗಿಂತಾ ತುಂಬಾನೇ ಸೀನಿಯರ್. ಈ ಇಬ್ಬರು ಜೋಡಿ ಆಗುತ್ತಾರೆ ಎನ್ನುವುದನ್ನು ನೆನೆದರೇ ಆ ಜೋಡಿ ಸರಿ ಹೊಂದುವುದಿಲ್ಲ ಎನಿಸುತ್ತದೆ. ಇದೆ ಕಾರಣಕ್ಕೆ ಕೃತಿ ಬಾಲಯ್ಯನ ಜೊತೆಗೆ ಅಭಿನಯಿಸುವ ಆಫರ್ ಬೇಡ ಎಂದಿದ್ದಾರಂತೆ. ಸದ್ಯಕ್ಕೆ ಕೃತಿ ಚಿತ್ರರಂಗದಲ್ಲಿ ಹೆಚ್ಚು ವಯಸ್ಸಾಗಿರುವ ಹಿರಿಯ ನಟರ ಜೊತೆಗೆ ಅಭಿನಯ ಮಾಡುವುದಿಲ್ಲ ಅಂತೆ.

ನಯವಾಗಿಯೇ ಚಿತ್ರಗಳನ್ನು ತಿರಸ್ಕರಿಸುವ ನಟಿ ಕೃತಿ ಶೆಟ್ಟಿ!
ಉಪ್ಪೇನ ಚಿತ್ರ ಖ್ಯಾತಿಯ ಈ ಬೆಡಗಿ ಸಿನಿಮಾಗಳನ್ನು ತಿರಸ್ಕರಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಎರಡು ಮೂರು ಸಿನಿಮಾಗಳನ್ನು ತಿರಸ್ಕರಿಸಿ ಸುದ್ದಿ ಆಗಿದ್ದರು. ಈ ಹಿಂದೆ ನಟ ನಿಖಿಲ್ ಅಭಿನಯದ '18 ಪೇಜಸ್' ಸಿನಿಮಾದಲ್ಲಿ ಕೃತಿಗೆ ಅತಿಥಿ ಪಾತ್ರ ಮಾಡುವಂತೆ ಕೇಳಲಾಗಿತ್ತಂತೆ. ಮತ್ತು ಸಾಯಿ ಧರಂ ತೇಜ್ ಅವರ 15ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಆಫರ್ ಬಂದಿತ್ತು. ಆದರೆ ಈ ಚಿತ್ರವನ್ನೂ ಕೂಡ ಕೃತಿ ಅಷ್ಟೇ ನಯವಾಗಿ ತಿರಸ್ಕರಿಸಿದ್ದಾರೆ.

ಬೇರೆ ನಾಯಕಿ ಹುಡುಕಾಟದಲ್ಲಿ ಬಾಲಯ್ಯ ಚಿತ್ರತಂಡ!
ಕೃತಿ ಶೆಟ್ಟಿ ಸಿನಿಮಾ ಮಾಡುವುದಿಲ್ಲ ಎಂದ ಮೇಲೆ, ಆಕೆಯ ಪಾತ್ರಕ್ಕೆ ಮತ್ತೊಬ್ಬ ನಟಿಯನ್ನು ಹುಡುಕುತ್ತಿದೆ ಚಿತ್ರತಂಡ. ಇನ್ನು ಈ ಚಿತ್ರದಲ್ಲಿ ಬಾಲಯ್ಯ ಎರಡು ಸೇಡ್‌ಗಳಲ್ಲಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಶೃತಿ ಹಾಸನ್ ಕೂಡ ಮುಖ್ಯ ಪಾತ್ರದಲ್ಲಿ ಇದ್ದಾರೆ. ಈ ಚಿತ್ರ ಕನ್ನಡದ 'ಮಫ್ತಿ' ರಿಮೇಕ್ ಎನ್ನಲಾಗುತ್ತಿದೆ. ಇದೆ ಚಿತ್ರದಲ್ಲಿ ನಟ ಸಲಗ ವಿಜಯ್ ವಿಲನ್ ಪಾತ್ರ ಮಾಡುತ್ತಿದ್ದಾರೆ.


Click it and Unblock the Notifications











