»   » ಕುರುಡಿಯಾದ ಕ್ಯೂಟ್ ಹುಡುಗಿ ಕೃತಿ ಖರಬಂಧ

ಕುರುಡಿಯಾದ ಕ್ಯೂಟ್ ಹುಡುಗಿ ಕೃತಿ ಖರಬಂಧ

Posted By:
Subscribe to Filmibeat Kannada

ಮುದ್ದು ಮುಖದ ಬೆಡಗಿ ಕೃತಿ ಖರಬಂಧ ಕುರುಡಿಯಾಗಿದ್ದಾರೆ..! ಅರೆರೆ...ಚೆಲುವಾಂತ ಚೆಲುವೆ ಕೃತಿಗೆ ಇದೇನಾಯ್ತಪ್ಪಾ ಅಂತ ಗಾಬರಿಯಾಗಬೇಡಿ. ನಾವು ಹೇಳುತ್ತಿರುವುದು ರೀಲ್ ಸುದ್ದಿ ಅಷ್ಟೆ.

ಕೃತಿ ಖರಬಂಧ ಕುರುಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅಷ್ಟೇ ಅಲ್ಲ, ಆರ್ಕೆಸ್ಟ್ರಾ ಸಿಂಗರ್ ಕೂಡ ಆಗಿ ನಿಮ್ಮಲ್ಲರನ್ನ ರಂಜಿಸಲಿದ್ದಾರೆ. ಇಂತಹ ಚಾಲೆಂಜಿಂಗ್ ಪಾತ್ರವನ್ನ ಕೃತಿ ನಿಭಾಯಿಸುವುದು 'ಸಂಜು ಮತ್ತು ಗೀತಾ ಪಾರ್ಟ್-2' ಚಿತ್ರದಲ್ಲಿ. [ಹೊಸ ಸಂಜು ಮತ್ತು ಗೀತಾ ಯಾರು ಗೊತ್ತಾ?]

Kriti Kharbanda to play blind orchestra singer in Sanju Mattu Geetha Part-2

ಕೆಲ ದಿನಗಳ ಹಿಂದೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದಂತೆ 'ಸಂಜು ಮತ್ತು ಗೀತಾ ಪಾರ್ಟ್-2' ಚಿತ್ರದ ಸ್ಕ್ರಿಪ್ಟಿಂಗ್ ವರ್ಕ್ ಗೆ ಚಾಲನೆ ಸಿಕ್ಕಿದೆ. ಹೀರೋ ಪಾತ್ರದಲ್ಲಿ ಶ್ರೀನಗರ ಕಟ್ಟಿ ಬದಲಾಗಿ ನಾಗಶೇಖರ್ ಮತ್ತು ನಾಯಕಿ ಗೀತಾ ಪಾತ್ರಧಾರಿಯಾಗಿ ರಮ್ಯಾ ಜಾಗಕ್ಕೆ ಕೃತಿ ಎಂಟ್ರಿಕೊಟ್ಟಿರುವ ಬಗ್ಗೆ ನಾವೇ ನಿಮಗೆ ಹೇಳಿದ್ವಿ.

ಇದೀಗ ಕಥೆಯಲ್ಲಿ ಕೊಂಚ ಟ್ವಿಸ್ಟ್ ಕೊಟ್ಟಿರುವ ನಾಗಶೇಖರ್, ನಾಯಕಿಯನ್ನ ಕುರುಡಿ ಮಾಡಿದ್ದಾರಂತೆ. ಸೆಂಟಿಮೆಂಟ್ ಲವ್ ಸ್ಟೋರಿಯಾಗಿರುವ ಕಾರಣ ಬ್ಲೈಂಡ್ ಆರ್ಕೆಸ್ಟ್ರಾ ಸಿಂಗರ್ ಪಾತ್ರದಲ್ಲಿ ಕೃತಿ ಮಿಂಚಲಿದ್ದಾರೆ.

Kriti Kharbanda to play blind orchestra singer in Sanju Mattu Geetha Part-2

ಅಸಲಿಗೆ ಪಾತ್ರ ಇಷ್ಟು ಚಾಲೆಂಜಿಂಗ್ ಆಗಿರುವುದಕ್ಕೆ 'ಸಂಜು ಮತ್ತು ಗೀತಾ ಪಾರ್ಟ್-2' ಚಿತ್ರಕ್ಕೆ ಕೃತಿ ಗ್ರೀನ್ ಸಿಗ್ನಲ್ ನೀಡಿದ್ದಂತೆ. ಸದ್ಯಕ್ಕೆ ಕೃತಿ ಕುರುಡಿ ಅನ್ನುವುದು ಬಿಟ್ಟರೆ, ನಾಗಶೇಖರ್ ಪಾತ್ರ ಇನ್ನೂ ಗುಟ್ಟಾಗಿದೆ. ['ಸಂಜು ವೆಡ್ಸ್ ಗೀತಾ' ಭಾಗ 2ಕ್ಕೆ ನಾಗಶೇಖರ್ ರೆಡಿ]

ತಮ್ಮದೇ ಹೋಮ್ ಬ್ಯಾನರ್ 'ನಾಗಶೇಖರ್ ಮೂವೀಸ್'ನಲ್ಲಿ 'ಸಂಜು ಮತ್ತು ಗೀತಾ ಪಾರ್ಟ್-2' ತಯಾರಾಗಲಿದೆ. ನಾಗಶೇಖರ್ ಸಹೋದರ ರಾಮ್ ಚಿರು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದು.

ಚಿತ್ರಕಥೆ ರಚಿಸುವಲ್ಲಿ ನಾಗಶೇಖರ್ ಬಿಜಿಯಾಗಿದ್ದು, ಕೆಲವೇ ದಿನಗಳಲ್ಲಿ 'ಸಂಜು ಮತ್ತು ಗೀತಾ ಪಾರ್ಟ್-2'ಗೆ ಮುಹೂರ್ತ ಫಿಕ್ಸ್ ಆಗಲಿದೆ. (ಏಜೆನ್ಸೀಸ್)

English summary
Director turned Hero Nagashekar and Kriti Kharbanda are roped into play lead in Sanju Mattu Geetha Part-2. According to the reports, Kriti Kharbanda will be playing a blind orchestra singer in the movie, which is directed by his brother Ramchiru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada