₹4000 ಕೋಟಿ ಕುಬೇರನ ಜೊತೆ ಪ್ರೀತಿಯಲ್ಲಿ ಬಿದ್ದ ₹82 ಕೋಟಿ ಆಸ್ತಿಯನ್ನೊಂದಿರುವ ಸ್ಟಾರ್ ನಟಿ..!

ಪ್ರೀತಿ ಎನ್ನುವುದು ಗುರು ಇಲ್ಲದೆ ಕಲಿಯುವ ವಿದ್ಯೆ ಎಂದು ಹೇಳುತ್ತಾರೆ. ಯಾರು ಹೇಳಿ ಕೊಡದ ಈ ವಿದ್ಯೆಯನ್ನು ಬಾಲಿವುಡ್‌ನ ಸ್ಟಾರ್ ನಾಯಕಿ ಕೃತಿ ಸನೋನ್ ಕೂಡ ಕಲಿತಿದ್ದಾರೆ, ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ನ್ಯೂಸೊಂದು ಸದ್ಯ ಹೊರ ಬಿದ್ದಿದೆ. ಮುಂದಿನ ವರ್ಷ ಕೃತಿ ಸನೋನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮಾಯಾನಗರಿ ಮುಂಬೈನಲ್ಲಿ ಗುಲ್ಲಾಗಿದೆ.

ಹೌದು, ಹೀರೋಂಪತಿ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಕೃತಿ ಮೊದಲ ಚಿತ್ರದಲ್ಲಿಯೇ ತನ್ನ ಅಂದ ಚೆಂದದಿಂದ ಕಣ್ಮನ ಸೆಳೆದಿದ್ದರು. ಆ ನಂತರ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲೇರಿದರು. ಇನ್ನೂ.. ಹಿಂದಿ ಉದ್ಯಮದಲ್ಲಿ ಲವ್ವು-ನೋವು ಎರಡು ತುಂಬಾ ಮಾಮೂಲು. ಇದಕ್ಕೆ ಕೈಗನ್ನಡಿ ಎಂಬಂತೆ ವೃತ್ತಿಯ ಆರಂಭದಲ್ಲಿಯೇ ತನ್ನ ಮೊದಲ ಚಿತ್ರ ಹೀರೋಪಂತಿಯ ಹೀರೋ ಟೈಗರ್ ಶ್ರಾಫ್ ಜೊತೆ ಕೃತಿ ಹೆಸರು ಕೇಳಿ ಬಂದಿತ್ತು. ಆ ನಂತರ ಸುರಸುಂದರಾಂಗ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೃತಿ ಸನೋನ್ ಪ್ರೀತಿ ಮಾಡುತ್ತಿದ್ದಾರೆ ಎಂದು ಬಾಲಿವುಡ್‌ ಮಾತನಾಡಿಕೊಂಡಿತ್ತು.

Kriti Sanon and Kabir Bahia to Tie the Knot in 2025 Family Event Photos Spark Speculation

ಆದರೆ ಅಷ್ಟರಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದರು. ಬಾರದ ಲೋಕಕ್ಕೆ ತೆರಳಿದರು. ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ಅಗಲಿಕೆಯಿಂದ ಕೃತಿ ದಿಗ್ಬ್ರಾಂತರಾಗಿದ್ದರು. ಸುಶಾಂತ್ ನೆನೆದು ಅನೇಕ ಬಾರಿ ಕಣ್ಣೀರು ಕೂಡ ಹಾಕಿದ್ದರು. ಈ ಕಾರಣಕ್ಕೆ ನಿಜವಾಗಿಯೂ ಕೃತಿ ಮತ್ತು ಸುಶಾಂತ್ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ಎಲ್ಲರು ಅಂದುಕೊಂಡರು. ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯ ನಂತರ ಕೃತಿ ಸನೋನ್ ಹೆಸರು ಪ್ರಭಾಸ್ ಸೇರಿ ಇನ್ನೂ ಮೂರು ನಾಲ್ಕು ಜನರ ಜೊತೆ ಕೇಳಿ ಬಂತು. ಆದರೆ ಆ ಸುದ್ದಿಗಳೆಲ್ಲ ಅಂತೆ-ಸಂತೆಯಲ್ಲಿಯೇ ಮಾಯವಾದವು. ಈ ಕಾರಣಕ್ಕೆ ಕೃತಿ ಸದ್ಯಕ್ಕೆ ಏಕಾಂಗಿಯಾಗಿರಬಹುದು ಎಂದು ಮಾಯನಗರಿ ಮುಂಬೈನಲ್ಲಿರುವ ಚಿತ್ರ ಪಂಡಿತರು ಅಂದಾಜಿಸಿದ್ದರು.

ಆದರೆ ಈಗ ಕೃತಿ ಸನೋನ್ ಯುಕೆ ಮೂಲದ ಉದ್ಯಮಿ ಕಬೀರ್ ಬಾಹಿಯಾ ಅವರ ಪ್ರೇಮಪಾಶದಲ್ಲಿ ಸಿಲುಕಿದ್ದಾರೆ. ಮುಂದಿನ ವರ್ಷ ಮದ್ವೆ ಕೂಡ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಹಲವು ಬಾರಿ ಈ ಹಿಂದೆ ಕ್ಯಾಮರಾ ಕಣ್ಣಿನಲ್ಲಿ ಕಬೀರ್ ಜೊತೆ ಸೆರೆಯಾದ ಕೃತಿ ಸದ್ಯ ದುಬೈನಲ್ಲಿ ಕಬೀರ್ ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಪಿಂಕ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ಕಬೀರ್ ಅವರ ಕುಟುಂಬದ ಸದಸ್ಯರ ಜೊತೆ ಖುಷಿ ಖುಷಿಯಾಗಿ ಕಾಲವನ್ನು ಕಳೆದಿದ್ದಾರೆ.

ಇನ್ನು ಕೃತಿ ಸನೋನ್ ಹೃದಯ ಗೆದ್ದಿರುವ ಈ ಕಬೀರ್ ಬಹಿಯಾ ಮತ್ತು ಭಾರತ ತಂಡದ ಮಾಜಿ ಕ್ರಿಕೆಟ್ ಪ್ಲೇಯರ್ ಮತ್ತು ಕ್ಯಾಪ್ಟನ್ ಎಂ.ಎಸ್.ಧೋನಿ ನಡುವೆ ಗಳಸ್ಯ ಕಂಠಸ್ಯ ಸ್ನೇಹ ಇದೆ. ಹೀಗಾಗಿ ಸ್ನೇಹಿತನ ಮನೆಯ ಮದುವೆ ಸಮಾರಂಭಕ್ಕೆ ತಮ್ಮ ಪತ್ನಿ ಸಾಕ್ಷಿ ಜೊತೆ ಧೋನಿ ಕೂಡ ಹೋಗಿದ್ದಾರೆ. ಮದುವೆ ಸಮಾರಂಭದಲ್ಲಿ ಸಾಕ್ಷಿ ಜೊತೆ ಕೃತಿ ಗಹನವಾದ ಚರ್ಚೆಯನ್ನು ಮಾಡಿದ್ದಾರೆ. ಇವರ ಈ ಮಾತುಕಥೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಧೋನಿ, ಸಾಕ್ಷಿ ಮತ್ತು ಕೃತಿ ಇರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೇವಲ ಎಂ.ಎಸ್.ಧೋನಿ ಮಾತ್ರ ಅಲ್ಲ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯಗೆ ಕೂಡ ಕಬೀರ್ ಬಹಿಯಾಗೆ ಅತ್ಯಾಪ್ತರು. ಇನ್ನೂ ಕ್ರೀಡೆ ಅಂದರೆ ಇವರಿಗೆ ಅಚ್ಚು ಮೆಚ್ಚು. ಯುಕೆ ಅಲ್ಲಿ ಸೌತ್ ಹಾಲ್ ಟ್ರಾವೆಲ್ಸ್‌ ಹೆಸರಿನಲ್ಲಿ ಟ್ರಾವೆಲ್ ಏಜೆನ್ಸಿ ಹೊಂದಿರುವ ಕಬೀರ್ ಅವರ ತಂದೆ ಕುಲ್ಜಿಂದರ್ ಬಹಿಯಾ ಯುಕೆ ಅಲ್ಲಿರುವ ಕೋಟ್ಯಾಧಿಪತಿಗಳಲ್ಲಿ ಒಬ್ಬರು. ಒಂದು ಮೂಲದ ಪ್ರಕಾರ ಇವರ ಒಟ್ಟು ಆಸ್ತಿ 4000 ಕೋಟಿ. ಆ ಪೈಕಿ 82 ಕೋಟಿ ಕಬೀರ್ ಬಾಹಿಯಾ ತಮ್ಮ ಸ್ವಂತ ಬಲದಿಂದ ಸಂಪಾದಿಸಿದ್ದಾರೆ.

ಅಂದ್ಹಾಗೇ ಕೃತಿ ಸನೋನ್ ಜೊತೆ ಮದುವೆಗೆ ಅಣಿಯಾಗಿದ್ದಾರೆ ಎನ್ನಲಾದ ಕಬೀರ್ ಅವರ ವಯಸ್ಸು ಕೇವಲ 24. ಆದರೆ ಕೃತಿಗೆ ಈಗ 33ರ ಹರೆಯ. ಈ ಕಾರಣಕ್ಕೆ ತಮಗಿಂತ ಒಂಬತ್ತು ವರ್ಷ ಚಿಕ್ಕವನ ಜೊತೆ ಸಪ್ತಪದಿಯನ್ನು ಕೃತಿ ತುಳಿಯುತ್ತಾರಾ ಎನ್ನುವ ಪ್ರಶ್ನೆ ಕೂಡ ಸದ್ಯ ಅನೇಕರಲ್ಲಿದೆ. ಉಳಿದಂತೆ ಕೃತಿ ಸನೋನ್ ಸದ್ಯ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ತಾವು ನಿರ್ಮಾಣ ಮಾಡಿದ ಮೊದಲ ಚಿತ್ರ ದೊ ಪತ್ತಿಗೆ ನೆಟ್‌ಪ್ಲಿಕ್ಸ್‌ನಲ್ಲಿ ಸಿಕ್ತಿರುವ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿದ್ದಾರೆ.

More from Filmibeat

English summary
Bollywood actress Kriti Sanon recently attended a family wedding, fueling rumors about her relationship with businessman Kabir Bahia. The images have sparked widespread speculation among fans, hinting at the possibility of a wedding in 2025.
Read more about: kriti sanon gossip bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X