For Quick Alerts
  ALLOW NOTIFICATIONS  
  For Daily Alerts

  ಸೋನಮ್ ಕಪೂರ್ ಮದುವೆ ಬೆನ್ನಲ್ಲೆ ಮತ್ತೊಂದು ತಾರಾಜೋಡಿಯ ವಿವಾಹ.!

  By Bharath Kumar
  |

  ಬಾಲಿವುಡ್ ನಲ್ಲಿ ಮದುವೆಗಳ ಪರ್ವ ಆರಂಭವಾಗಿದೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆ ಆಯ್ತು. ಈಗ ಸೋನಮ್ ಕಪೂರ್ ಮತ್ತು ಆನಂದ್ ಆಹುಜಾ ವಿವಾಹ ಜರುಗಿದೆ. ಇದರ ಬೆನ್ನಲ್ಲೆ ಈಗ ಮತ್ತೊಂದು ತಾರಾ ಜೋಡಿಯ ವಿವಾಹಕ್ಕೆ ಬಾಲಿವುಡ್ ಸಜ್ಜಾಗಿದೆ.

  ಹೌದು, ಬಿಟೌನ್ ಚಿತ್ರರಂಗದ ಹ್ಯಾಂಡ್ಸಮ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ನಟಿ ಕೃತಿ ಸನನ್ ಇಬ್ಬರು ಮದುವೆ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

  ಕೃತಿ ಸನನ್ ಮತ್ತು ಸುಶಾಂತ್ ಸಿಂಗ್ ಇಬ್ಬರು ತುಂಬ ದಿನಗಳಿಂದ ಸ್ನೇಹಿತರು. ಸ್ನೇಹಕ್ಕಿಂತ ಇವರಿಬ್ಬರ ಮಧ್ಯೆ ಸಂಥಿಂಗ್ ಇದೆ ಎನ್ನಲಾಗಿದೆ. ಗೌಪ್ಯವಾಗಿ ಇಬ್ಬರ ಮನೆಯಲ್ಲೂ ಮದುವೆ ಮಾತುಕತೆ ನಡೆಯುತ್ತಿದೆ ಎಂಬ ಚರ್ಚೆ ಹಿಂದಿ ಲೋಕದಲ್ಲಿ ಹರಿದಾಡುತ್ತಿದೆ.

  ಇತ್ತೀಚಿಗಷ್ಟೆ ಕೃತಿ ಅವರ ಕುಟುಂಬದವರು ಸುಶಾಂತ್ ಮನೆಯವರನ್ನ ಭೇಟಿ ಮಾಡಿದ್ದರಂತೆ. ಅದಕ್ಕೂ ಮುಂಚೆ ಸುಶಾಂತ್ ಮನೆಯವರು ಕೃತಿ ಕುಟುಂಬ ಸದಸ್ಯರ ಜೊತೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

  ಇದ್ಯಾವುದನ್ನ ಬಿಟ್ಟುಕೊಡದ ಸುಶಾಂತ್ ಮತ್ತು ಕೃತಿ ಸೈಲೆಂಟ್ ಆಗಿ ತಮ್ಮ ಸಂಬಂಧವನ್ನ ಕಾಪಾಡಿಕೊಂಡಿದ್ದಾರೆ. ಸದ್ಯ, ಸುಶಾಂತ್ ಸಿಂಗ್ 'ಡ್ರೈವ್' ಚಿತ್ರದಲ್ಲಿ ನಟಿಸುತ್ತಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ನಾಯಕಿಯಾಗಿದ್ದರಂತೆ. ಇನ್ನು ಕೃತಿ ಸನನ್ 'ಹೌಸ್ ಫುಲ್ 4' ಹಾಗೂ 'ಪಾಣಿಪತ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  After Sonam Kapoor and Anand Ahuja are Kriti Sanon and Sushant Singh Rajput planning to get married?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X