»   » ಮಹೇಶ್ ಭಟ್ಟರ ಮಗಳೇ ನನ್ನ ಪತ್ನಿ ಕಣ್ರಿ!

ಮಹೇಶ್ ಭಟ್ಟರ ಮಗಳೇ ನನ್ನ ಪತ್ನಿ ಕಣ್ರಿ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹೈವೇ ಬೊಂಬೆ ಆಲಿಯಾ ಭಟ್ ಗೆ ಶುಕ್ರದೆಸೆ ತಿರುಗಿದೆ ಎನ್ನುವಾಗವೇ ಶನಿ ಕಾಟ ಶುರುವಾಗಿದೆ. ಬಾಲಿವುಡ್ ಜಗತ್ತಿನ ಸ್ವಯಂ ಘೋಷಿತ ಸ್ಟಾರ್, ವಿಮರ್ಶಕ, ಮಾರುಕಟ್ಟೆ ತಜ್ಞ ಕಮಲ್ ರಶೀದ್ ಖಾನ್ ಈಗ ಆಲಿಯಾ ಬೆನ್ನ ಹಿಂದೆ ಬಿದ್ದಿದ್ದಾನೆ.

ಹೈವೇ ಚಿತ್ರ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದರ ಬಗ್ಗೆ ಏನಾದರೂ ಉಲ್ಟಾ ಸೀದಾ ಮಾತನಾಡಿದ್ದರೂ ಪರ್ವಾಗಿಲ್ಲ. ಮಹೇಶ್ ಭಟ್ ರ ಮಗಳ ಅಭಿನಯದ ಬಗ್ಗೆಯೂ ಸೊಲ್ಲೆತ್ತಿಲ್ಲ. ಆದರೆ, ಕಮಲ್ ನೇರವಾಗಿ ಆಲಿಯಾ ನನ್ನ ಭಾವಿ ಪತ್ನಿ ಕಣ್ರಿ. ಮಹೇಶ್ ಭಟ್ಟರ ಮಗಳೇ ನನ್ನ ಮುದ್ದಿನ ಅರಗಿಣಿ ಎಂದೆಲ್ಲ ಟ್ವೀಟ್ ಮಾಡಿ ಸುದ್ದಿಯಾಗಿದ್ದಾನೆ.

ಇಮ್ತಿಯಾಜ್ ಅಲಿ ಅವರ ಹೈವೇ ಚಿತ್ರದ ಅಭಿನಯಕ್ಕೆ ಸಿಕ್ಕಿರುವ ಪ್ರಶಂಸೆ ಸುರಿಮಳೆಯಲ್ಲಿ ತೋಯುತ್ತಿದ್ದ ಮುದ್ದು ಮುಖದ ಆಲಿಯಾ ಕಿರಿಕ್ ಸ್ಟಾರ್ ಕೆಆರ್ ಕೆ ಕಾಟಕ್ಕೆ ಬೆಚ್ಚಿದ್ದಾಳೆ. ಹೈವೇ ಚಿತ್ರದ ನಂತರ ಆಲಿಯಾ ಚೇತನ್ ಭಗತ್ ಕಾದಂಬರಿ ಆಧಾರಿತ 2 ಸ್ಟೇಟ್ಸ್ ನಲ್ಲಿ ನಾಯಕಿಯಾಗಿದ್ದಾಳೆ.

ಕಿರಿಕ್ ಕೆಆರ್ ಕೆ ಸಂದೇಶಗಳಿಂದ ಬೇಸತ್ತಿರುವ ಭಟ್ಟರ್ ಗ್ಯಾಂಗ್ ಈಗ ಕಮಲ್ ರನ್ನು ತಮ್ಮ ಸಂಸ್ಥೆ ಚಿತ್ರಗಳಿಂದ ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್ ಅವರ ಕಸಿನ್ ಮೋಹಿತ್ ಸೂರಿ ನಿರ್ದೇಶನದ 'ವಿಲನ್' ಚಿತ್ರದಲ್ಲಿ ಅಭಿನಯಿಸುತ್ತಿರುವ 'ಬಹುಮುಖ' ಪ್ರತಿಭೆ ಕಮಲ್ ಖಾನ್ ಈಗ ಆಲಿಯಾ ಪಾಲಿಗೆ ವಿಲನ್ ಆಗಿ ಕಾಡುತ್ತಿದ್ದಾನೆ.
 

KRK Says Alia Bhatt Is His Future Wife; Bhatt Gang Furious

ಕಮಲ್ ಖಾನ್ ಕಿರಿಕ್ ಇಲ್ಲಿಗೆ ನಿಲ್ಲುವುದಿಲ್ಲ. ಆಲಿಯಾ ಭಟ್ ಳನ್ನು ಹೇಗೆಲ್ಲ ಕಿಸ್ ಮಾಡುತ್ತೇನೆ ಎಂದು ಬರೆದಿದ್ದನಂತೆ. ಕಮಲ್ ಖಾನ್ ಟ್ವೀಟ್ಸ್ ಈಗ ಡಿಲೀಟ್ ಮಾಡಲಾಗಿದೆ. ಆದರೆ ಭಟ್ಟರ ಕ್ಯಾಂಪಿಗೆ ಈಗಾಗಲೇ ಕಮಲ್ ಖಾನ್ ಟ್ವೀಟ್ಸ್ ಪ್ರತಿ ತಲುಪಿದೆಯಂತೆ. ಆದರೆ, ಟ್ವಿಟ್ಟರ್ ನಲ್ಲಿ ಕಮಲ್ ಖಾನ್ ಹೆಸರಿನಲ್ಲಿ ಅನೇಕ ಖಾತೆಗಳಿದ್ದು ಇದು ಫೇಕ್ ಐಡಿಯಿಂದ ಕಳಿಸಿದ್ದು ಎಂದು ಕಮಲ್ ಖಾನ್ ವಾದಿಸಿದ್ದಾನೆ.

ಬಾಲಿವುಡ್ ಮಂದಿ ಕೆಲವರು ಕಮಲ್ ಹೇಳಿಕೆಯನ್ನು ಸಮರ್ಥಿಸಿದ್ದು ಕಮಲ್ ಹೆಸರು ಕೆಡಿಸಲು ಯಾರೋ ಈ ರೀತಿ ಮಾಡಿದ್ದಾರೆ. ಈ ಹಿಂದೆ ಮಾಜಿ ಪೋರ್ನ್ ಸ್ಟಾರ್ ಹಾಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ವರ್ಣನೆ ಮಾಡಲು ಹೋಗಿದ್ದಾಗ ಕೂಡಾ ಇದೇ ರೀತಿ ಸಮಸ್ಯೆ ಕಮಲ್ ಖಾನ್ ಎದುರಿಸಿದ್ದರು ಎನ್ನಲಾಗಿದೆ.

"Rape is not a crime, it's just surprise sex". ಎಂಬ ಸನ್ನಿ ಟ್ವೀಟ್ ಗೆ ಸಮರ್ಥನೆ ನೀಡಲು ಹೋದ ಕಮಲ್ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು. ಆಗ ಕೂಡಾ ಎಲ್ಲವೂ ಫೇಕ್ ಖಾತೆ ಕೈವಾಡ ಎಂದು ಖಾನ್ ವಾದಿಸಿದ್ದ. ಸದ್ಯಕ್ಕೆ ಮಹೇಶ್ ಭಟ್ ಕ್ಯಾಂಪಿನ ವಿಲನ್ ಸಿನಿಮಾ ಬಿಟ್ಟರೆ ಖಾನ್ ಗೆ ಮಾಡಲು ಬೇರೆ ಕೆಲಸವಿಲ್ಲ. ಟ್ವೀಟ್ ಯಾರೂ ಮಾಡುತ್ತಿದ್ದಾರೋ ಗೊತ್ತಿಲ್ಲ ಆಲಿಯಾ ಮಾನ ಅಪಮಾನದ ಪ್ರಶ್ನೆಯಾಗಿರುವುದರಿಂದ ಭಟ್ಟರ ತಂಡ ಕಠಿಣ ಕ್ರಮಕ್ಕೆ ಮುಂದಾಗಿದೆ.

English summary
Kamaal Rashid Khan did it again ! The self proclaimed star, who also term himself as a critic and film trade expert, has gone to greater level of twitter mania by saying that Alia Bhatt is his future wife. He even went on to call Mahesh Bhatt, Alia's father as her father in law. It is rumoured that the Bhatt camp is furious about this and may kick KRK out from their upcoming project, Villain, to be directed by Mohit Suri who is Alia's cousin.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada