ತೆಲುಗು ಚಿತ್ರರಂಗಕ್ಕೆ ಕೆವಿಎನ್ ಸಂಸ್ಥೆ ಎಂಟ್ರಿ; ಯಾವ ಸಿನಿಮಾ? ಹೀರೋ ಯಾರು?

ಕನ್ನಡ ಚಿತ್ರರಂಗ ಅಂದರೆ ಚಿಕ್ಕ ಇಂಡಸ್ಟ್ರಿ ಎಂದೇ ಇವತ್ತಿಗೂ ಪರಭಾಷಿಕರು ಮಾತನಾಡುತ್ತಾರೆ. ಕನ್ನಡದಲ್ಲಿ ಭಾರೀ ಬಜೆಟ್ ಸಿನಿಮಾಗಳನ್ನು ಯಾರು ನಿರ್ಮಾಣ ಮಾಡುವುದಿಲ್ಲ ಎನ್ನುವ ಲೆಕ್ಕಾಚಾರ ಅವ್ರದ್ದು. ಆದರೆ ಹೊಂಬಾಳೆ ಫಿಲ್ಮ್ಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಆ ಮಾತನ್ನು ಸುಳ್ಳಾಗಿಸುತ್ತಿದೆ. ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ.

ಒಂದು ಸಿನಿಮಾ ನಿರ್ಮಾಣವಾಗಿ ಬಿಡುಗಡೆ ಆಗುವವರೆಗೆ ಕಾಯುತ್ತಿಲ್ಲ. ಒಂದರ ಹಿಂದೆ ಒಂದು ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಆರಂಭಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಿತ್ರ ನಿರ್ಮಾಣ ಮಾಡಿದೆ. ಈಗಾಗಲೇ ಹೃತಿಕ್ ರೋಷನ್ ನಟನೆಯ ಚಿತ್ರ ಘೋಷಿಸಿದೆ. ಪ್ರಭಾಸ್ ಜೊತೆಗೆ 3 ಸಿನಿಮಾಗಳು ಕನ್ಫರ್ಮ್ ಆಗಿದೆ. 'ಕಾಂತಾರ-1', 'ರಿಚರ್ಡ್ ಆಂಟನಿ', 'ಕೆಜಿಎಫ್-3' ಸಿನಿಮಾ ಲಿಸ್ಟ್‌ನಲ್ಲಿವೆ. ಹೊಂಬಾಳೆ ಹಾದಿಯಲ್ಲೇ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಾಗಿದೆ.

KVN joins hands with Chiranjeevi and Bobby for their next big venture

ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಕೆವಿಎನ್ ಸಂಸ್ಥೆ ಹಣ ಹೂಡಿದೆ. ಧ್ರುವ ಹಾಗೂ ಪ್ರೇಮ್ ಜೋಡಿಯ 'ಕೆಡಿ' ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರ ನಿರ್ಮಾಣ ಮಾಡ್ತಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. 'ಟಾಕ್ಸಿಕ್' ಚಿತ್ರದ ಬಜೆಟ್ ಕೂಡ ಇದಕ್ಕಿಂತ ಜಾಸ್ತಿನೇ ಇದೆ. ಇದೀಗ ಸಂಸ್ಥೆ ಟಾಲಿವುಡ್ ಕಡೆ ಮುಖ ಮಾಡಿದೆ.

ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಮೊದಲಿನಿಂದಲೂ ತೆಲುಗಿನಲ್ಲಿ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದೆ. ರಾಮ್‌ಚರಣ್ ಹಾಗೂ ನರ್ತನ್ ಕಾಂಬಿನೇಷನ್ ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಅದು ಇನ್ನು ಫೈನಲ್ ಆಗಿಲ್ಲ. ಈ ನಡುವೆ ಚಿರಂಜೀವಿ ನಟನೆಯ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಹಣ ಹೂಡುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಬಾಬಿ ನಿರ್ದೇಶನದ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಚಿರು ನಟಿಸಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದು ಕೆವಿಎನ್ ಸಂಸ್ಥೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಹೇಳಲಾಗ್ತಿದೆ.

KVN joins hands with Chiranjeevi and Bobby for their next big venture

ಮೆಗಾಸ್ಟಾರ್ ಚಿರಂಜೀವಿಗೆ ಭಾರೀ ಕ್ರೇಜ್ ಇದೆ. ಆದರೆ ಯಾಕೋ ಚಿರು ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. 'ವಾಲ್ತೇರು ವೀರಯ್ಯ' ಸಿನಿಮಾ ಮಾತ್ರ ತಕ್ಕಮಟ್ಟಿಗೆ ಗೆದ್ದಿತ್ತು. ಹಾಗಾಗಿ ಅದೇ ಕಾಂಬೋ ರಿಪೀಟ್ ಮಾಡುವ ಪ್ರಯತ್ನ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ರಾಮ್‌ಚರಣ್‌ಗೂ ಮುನ್ನ ಅವರ ತಂದೆ ಚಿರಂಜೀವಿ ಚಿತ್ರವನ್ನು ಕೆವಿಎನ್ ಸಂಸ್ಥೆ ನಿರ್ಮಿಸುವಂತಾಗುತ್ತದೆ.

ಕೆವಿಎನ್ ಸಂಸ್ಥೆ ನಿರ್ಮಾಣದ ಯಾವುದೇ ದೊಡ್ಡ ಸಿನಿಮಾ ಇನ್ನು ತೆರೆಗೆ ಬಂದಿಲ್ಲ. ಆದರೆ ದೊಡ್ಡ ಸಿನಿಮಾಗಳನ್ನು ಸಂಸ್ಥೆ ವಿತರಣೆ ಮಾಡಿ ಸಕ್ಸಸ್ ಕಂಡಿದೆ. ಗಣೇಶ್ ನಟಿಸಿದ 'ಸಖತ್' ಸಂಸ್ಥೆ ನಿರ್ಮಿಸಿದ ಮೊದಲ ಸಿನಿಮಾ. ಬಳಿಕ 'ಬೈ2' ಸಿನಿಮಾ ಬಂದಿತ್ತು. 3 ವರ್ಷಗಳ ಹಿಂದೆ ಸೆಟ್ಟೇರಿದ 'ಕೆಡಿ' ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಇನ್ನು ಈಗಾಗಲೇ ಒಂದು ಮಲಯಾಳಂ ಸಿನಿಮಾ ನಿರ್ಮಾಣಕ್ಕೆ ಸಂಸ್ಥೆ ಕೈ ಹಾಕಿದೆ. ಕಾರ್ತಿ ಹಾಗೂ ಲೋಕೇಶ್ ಕನಕರಾಜ್ ಜೋಡಿಯ 'ಕೈದಿ'-2 ಚಿತ್ರವನ್ನು ಕೂಡ ಇದೇ ಸಂಸ್ಥೆ ನಿರ್ಮಾಣ ಮಾಡಲಿದೆ.

'ಟಾಕ್ಸಿಕ್' ಸಿನಿಮಾ ನಿರ್ಮಾಣಕ್ಕೆ ಯಶ್ ಕೂಡ ಕೈ ಜೋಡಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಜನವರಿ 9ಕ್ಕೆ ಸಂಕ್ರಾಂತಿ ಸಂಭ್ರಮದಲ್ಲಿ 'ಜನ ನಾಯಗನ್' ಸಿನಿಮಾ ಬಿಡುಗಡೆ ಆಗಬೇಕಿದೆ. 'ಕೆಡಿ' ಸಿನಿಮಾ ಇನ್ನೆರಡು ತಿಂಗಳ ಪ್ರೇಕ್ಷಕರ ಮುಂದೆ ಬರಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X