ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್: ನಟಿ ಲಕ್ಷ್ಮಿ ರೈ ಗಡಗಡ

By ಶಂಕರ್, ಚೆನ್ನೈ

ಕರ್ನಾಟಕ ಮೂಲದ ನಟಿ ಲಕ್ಷ್ಮಿ ರೈ ತೆಲುಗು, ತಮಿಳು ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಅವರ ವೃತ್ತಿಜೀವನವೂ ಹಾಯಾಗಿ ಸಾಗುತ್ತಿದೆ. ಈಗ ಇದ್ದಕ್ಕಿದ್ದಂತೆ ಅವರ ವೃತ್ತಿಜೀವನದಲ್ಲಿ ಮಿಂಚು ಗುಡುಗು ಬಂದೆರಗಿದಂತಾಗಿದೆ.

ಈ ಭಯಕ್ಕೆ ಕಾರಣವಾಗಿರುವುದು ಐಪಿಎಲ್ ಸ್ಪಾಟ್ ಫಿಕ್ಸಿಂಗ್. ಕೇರಳ ಕ್ರಿಕೆಟರ್ ಶ್ರೀಶಾಂತ್ ಸಿಕ್ಕಿಬಿದ್ದ ಮೇಲೆ ಸ್ಪಾಟ್ ಫಿಕ್ಸಿಂಗ್ ನಲ್ಲಿ ಒಂದೊಂದೇ ಹೆಸರುಗಳು ಹೊರಬೀಳುತ್ತಿವೆ. ಶ್ರೀಶಾಂತ್ ಗೆ ಕ್ಲೋಸ್ ಆಗಿದ್ದ ಲಕ್ಷ್ಮಿ ರೈ ತನ್ನ ಹೆಸರನ್ನೂ ಎಲ್ಲಿ ತರುತ್ತಾರೋ ಎಂದು ಗಡಗಡ ಎಂದು ಶೇಖ್ ಆಗಿದ್ದಾರಂತೆ.

ಇತ್ತೀಚೆಗೆ ತಮಿಳು ಮಾಧ್ಯಮಗಳಲ್ಲಿ ಈ ಬಗ್ಗೆ ಗಾಸಿಪ್ ಸುದ್ದಿಗಳೂ ಹರಿದಾಡುತ್ತಿವೆ. ಶ್ರೀಶಾಂತ್ ಹಾಗೂ ಲಕ್ಷ್ಮಿ ರೈಗೆ ಸಂಬಂಧ ಕಲ್ಪಿಸುವ ಕಥನಗಳೂ ಬಿತ್ತರವಾಗುತ್ತಿವೆ. ಫಿಕ್ಸಿಂಗ್ ನಲ್ಲಿ ಅವರ ಪಾತ್ರವೇನಾದರೂ ಇದೆಯೇ? ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಬಂದ ಲಕ್ಷ್ಮಿ ರೈ, "ಶ್ರೀಶಾಂತ್ ಬಹಳ ದಿನಗಳಿಂದ ನನಗೆ ಟಚ್ ನಲ್ಲಿ ಇಲ್ಲ. ಆತನೊಂದಿಗೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ಐಪಿಎಲ್ ಫಿಕ್ಸಿಂಗ್ ರಾಡಿಯಲ್ಲಿ ತಮ್ಮನ್ನು ಎಳೆಯಬೇಡಿ" ಎಂದು ವಿನಂತಿಸಿಕೊಂಡಿದ್ದಾರೆ.

ಸದ್ಯಕ್ಕೆ ತಾನು ಬಿಜಿನೆಸ್ ಮ್ಯಾನ್ ಒಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ. ನನಗೂ ಶ್ರೀಶಾಂತ್ ಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಐಪಿಎಲ್ 1ರಲ್ಲಿ ನಯನತಾರಾ ಹಾಗೂ ಲಕ್ಷ್ಮಿ ರೈ ಬ್ರ್ಯಾಂಡ್ ಅಂಬಾಸಿಡರ್ಸ್ ಆಗಿ ಕಾರ್ಯನಿರ್ವಹಿಸಿದ್ದರು.

More from Filmibeat

English summary
Karnataka based actress Lakshmi Rai is literally shivering after media linked her to international cricketer Sreesanth, now jailed for spot fixing. Lakshmi Rai told the media that she was dating a good business man and requested that she be not dragged into the rut.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X