»   » ಲಕ್ಷ್ಮಿ ವಿನಯ್ ಒಂದೇ ರೂಮಿನಲ್ಲಿ ಇದ್ರಂತೆ!

ಲಕ್ಷ್ಮಿ ವಿನಯ್ ಒಂದೇ ರೂಮಿನಲ್ಲಿ ಇದ್ರಂತೆ!

Posted By:
Subscribe to Filmibeat Kannada

ಹೇಳಿಕೊಳ್ಳೋಕೆ ಇಬ್ಬರೂ ನಮ್ಮೂರಿನ ಹುಡುಗ ಹುಡ್ಗಿ ಕಣ್ರಿ, ಏನೋ ಹೊಟ್ಟೆಪಾಡು ಪಕ್ಕದಮನೆಯಲ್ಲಿ ಬೆಳೆಯುತ್ತಾ ಇದ್ದಾರೆ. ಕರ್ನಾಟಕ ಮೂಲದ ಲಕ್ಷ್ಮಿ ರೈ ಹಾಗೂ ವಿನಯ್ ರೈ ಈಗ ತಮಿಳು ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿರುವ ನಟ, ನಟಿ. ವಿನಯ್ ರೈ ಇನ್ನೂ ಬೆಳೆಯುತ್ತಿರುವ ಪ್ರತಿಭೆ. ಲಕ್ಷ್ಮಿ ರೈ ಈಗಾಗಲೇ ದೊಡ್ಡ ಸ್ಟಾರ್ ಗಳ ಜೊತೆ ಕುಣಿದಾಡಿರುವ ಬೆಡಗಿ ಅದರೆ, ಇತ್ತೀಚೆಗೆ ಇವರಿಬ್ಬರ ನಡುವೆ ಏನೋ ಗುಸು ಗುಸು ಪಿಸುಪಿಸು ನಡೆಯುತ್ತಿದೆ ಎಂದು ಗುಲ್ಲೋ ಗುಲ್ಲು.

ಇಬ್ಬರು 'ಒನ್ಬಧುಲೆ ಗುರು' ಎಂಬ ತಮಿಳು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಆದರೆ, ಶೂಟಿಂಗ್ ನಲ್ಲಾಗಲಿ, ವಿರಾಮದಲ್ಲಾಗಲಿ ಇವರಿಬ್ಬರ ಸರಸ ಹಲವರ ಕಣ್ಣು ಕುಕ್ಕಿದೆ. ಇಬ್ಬರು ಜೊತೆ ಜೊತೆಯಲ್ಲಿ ಎಂದು ಹಾಡಿ ಕುಣಿಯುವುದನ್ನು ಕಂಡು ಕೆಲವರು ಕೇಳಿದ್ದಾರೆ. ಏನ್ರಪ್ಪಾ ಇದೆಲ್ಲ ಅಂತಾ? ಅದಕ್ಕೆ ಇಬ್ಬರು ಒಂದೇ ಊರು ಕಷ್ಟ ಸುಖ ಮಾತಾಡಿಕೊಳ್ಳುತ್ತಿದ್ದೇವೆ ಅಷ್ಟೇ ಎಂದಿದ್ದಾರೆ.

ತಮಿಳು ಚಿತ್ರದ ಶೂಟಿಂಗ್ ನಲ್ಲಿ ಇಬ್ಬರು ಒಟ್ಟಿಗೆ ಸೇರಿದಾಗ ತಮಿಳು ಬಿಟ್ಟು ಕನ್ನಡ, ತುಳು, ಇಂಗ್ಲೀಷ್ ನಲ್ಲಿ ಹರಟೆ ಹೊಡೆಯುವುದು ಅಲ್ಲಿದ್ದವರಿಗೆ ಸ್ವಲ್ಪ ಇರಸು ಮುರುಸು ತಂದಿದೆಯಂತೆ. ಆದ್ರೆ, ಆನ್ ಸ್ಕ್ರೀನ್ ರೋಮಾನ್ಸ್ ನ ರೂಮ್ ತನಕ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಲಕ್ಷ್ಮಿ ರೈ ಹಿಂದೆ ಬಿದ್ದವರು ಅನೇಕ ಮಂದಿ ಹೌದೇ ನಿಜವೇ ವಿನಯ್ ರೈ ಜೊತೆ ಲಕ್ಷ್ಮಿ ರೂಮ್ ಶೇರ್ ಮಾಡಿಕೊಂಡಿದ್ಲಾ ಎಂದು ಪ್ರಶ್ನಿಸಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿದೆ.

ಕಾಲಿವುಡ್ ನಲ್ಲಿ ಕನ್ನಡಿಗರ ಕುಚ್ ಕುಚ್

ಆದರೆ, ತಮಿಳು, ತೆಲುಗು ಚಿತ್ರರಂಗದಲ್ಲಿ ನಟಿ, ನಟಿಯರು ಒಂದೇ ರೂಮಿನಲ್ಲಿ ಇರೋದು ಹೊಸ ವಿಷ್ಯವಲ್ಲ. ಕಮಲ್ ಹಾಸನ್ ರಿಂದ ಹಿಡಿದು ಅವರ ಮಗಳು ಶ್ರುತಿ ಹಾಸನ್ ಕೂಡಾ ಲಿವ್ ಇನ್ ಸಂಬಂಧದಲ್ಲೇ ಕಾಲ ಕಳೆದಿದ್ದದ್ದು ತಮಿಳರು ಸಹಿಸಿಕೊಂಡಿದ್ದಾರೆ ಕೂಡಾ.

ಕಾಲಿವುಡ್ ನಲ್ಲಿ ಕನ್ನಡಿಗರ ಕುಚ್ ಕುಚ್

ಆದರೆ, 'ತಲಾ' ಅಜಿತ್ ಅವರ ಮಂಕಾತಾದಲ್ಲಿ ಕುಣಿದಾಡಿದ್ದ ಬೆಳಗಾವಿ ಬೆಡಗಿ ಲಕ್ಷ್ಮಿ ರೈ, ಮಂಗಳೂರು ಕಮ್ ಬೆಂಗಳೂರು ಮೂಲದ ವಿನಯ್ ರೈ ಎಂಬ ಎಳೆ ಹುಡುಗನ ಬುಟ್ಟಿಗೆ ಹಾಕಿಕೊಂಡಳಾ ಎಂದು ಅನೇಕರು ಹೊಟ್ಟೆಕಿಚ್ಚು ಪಡುತ್ತಿದ್ದಾರಂತೆ.

ಕಾಲಿವುಡ್ ನಲ್ಲಿ ಕನ್ನಡಿಗರ ಕುಚ್ ಕುಚ್

ಈ ಬಗ್ಗೆ ಚಿತ್ರತಂಡವನ್ನು ನಮ್ಮ ತಂಡ ವಿಚಾರಿಸಿದಾಗ, ಅವತ್ತು ವಿನಯ್ ರೈ ಶೂಟಿಂಗ್ ಇರಲಿಲ್ಲ. ಲಕ್ಷ್ಮಿ ರೈ ಅವರ ಶೂಟಿಂಗ್ ಇತ್ತು. ಸಡನ್ ಆಗಿ ವಿನಯ್ ಬಂದಿದ್ದರಿಂದ ಉಳಿದುಕೊಳ್ಳಲು ಬೇರೆ ರೂಮ್ ಅರೇಂಜ್ ಮಾಡಲು ಆಗಲಿಲ್ಲ. ಹಾಗಾಗಿ ಅವರು ಲಕ್ಷ್ಮಿ ರೈ ಜೊತೆ... ಮುಂದೇನಾಯ್ತು ಓದುತ್ತಾ ಹೋಗಿ

ಕಾಲಿವುಡ್ ನಲ್ಲಿ ಕನ್ನಡಿಗರ ಕುಚ್ ಕುಚ್

ಚಿತ್ರತಂಡ ಲಕ್ಷ್ಮಿ ರೈಗೆ ಸ್ಟಾರ್ ಹೋಟೆಲ್ ನಲ್ಲಿ ಐಷಾರಾಮಿ ರೂಮ್ ಬುಕ್ ಮಾಡಿತ್ತು. ಆದರೆ, ವಿನಯ್ ಗೆ ಸ್ಟಾರ್ ಹೋಟೆಲ್ ಅಲ್ಲದ ಸಾಧಾರಣ ರೂಮ್ ಸಿಕ್ಕಿತ್ತು. ಇದ್ಯಾಕೆ ಹೀಗೆ ಎಂದು ಪ್ರಶ್ನಿಸಿದ ವಿನಯ್ ನೇರ ಲಕ್ಷ್ಮಿ ರೈ ರೂಮ್ ಗೆ ತೆರಳಿದ್ದಾರೆ.

ಕಾಲಿವುಡ್ ನಲ್ಲಿ ಕನ್ನಡಿಗರ ಕುಚ್ ಕುಚ್

ಲಕ್ಷ್ಮಿ ರೈ ಜೊತೆ ಕಿತ್ತಾಟವಾಡಬಹುದು ಎಂದು ಎನಿಸಿದ್ದ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಒಳಗೆ ಹೋದ ವಿನಯ್ ಹೊರಗೆ ಬರುವ ಸೂಚನೆಯೇ ಸಿಗದಿದ್ದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ರಾತ್ರಿ ಡಿನ್ನರ್ ಒಟ್ಟಿಗೆ ಮಾಡಿದರು ನಂತರ ಅದೇ ಸಿಂಗಲ್ ಬೆಡ್ ರೂಮ್ ನಲ್ಲಿ ಒಬ್ಬರು ಸೇರಿಕೊಂಡರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

ಕಾಲಿವುಡ್ ನಲ್ಲಿ ಕನ್ನಡಿಗರ ಕುಚ್ ಕುಚ್

ನಂತರ ಇಡೀ ಚಿತ್ರತಂಡಕ್ಕೆ ಲಕ್ಷ್ಮಿ ರೈ 'ಭರ್ಜರಿ ಪಾರ್ಟಿ' ಕೊಡಿಸಿದ್ದಾರೆ. ವಿನಯ್ ಕೂಡಾ ಮುಂಚಿಗಿಂತಲೂ ಹಸನ್ಮುಖಿಯಾಗಿದ್ದು ಚಿತ್ರತಂಡಕ್ಕೆ ಕಂಡು ಬಂದಿದೆ. ತಮಿಳು ಮಾಧ್ಯಮಗಳ ಬಗ್ಗೆ ಬಂದ ಬಿಂದಾಸ್ ವರದಿಗಳ ಬಗ್ಗೆ ಲಕ್ಷ್ಮಿ ರೈ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿನಯ್ ನಾನು ಉತ್ತಮ ಗೆಳೆಯರಷ್ಟೇ ಎನ್ನುವುದನ್ನು ಮಾತ್ರ ಮರೆಯಲಿಲ್ಲ. ಪಿಟಿ ಸೆಲ್ವ ಕುಮಾರ್ ನಿರ್ದೇಶನದ ಈ ಚಿತ್ರದ ಪ್ರಚಾರಕ್ಕಾಗಿ ಏನಾದರೂ ಈ ರೀತಿ ಗಿಮಿಕ್ ಮಾಡಿದ್ದಾರಾ ಎಂಬ ಅನುಮಾನವೂ ಸುಳಿದಾಡಿದ್ದಂತೂ ನಿಜ.

English summary
Lakshmi Rai and Vinay Rai, who are acting together in forthcoming Tamil movie Onbadhule Guru, seem to be bonding big time. In the recent times, there were many rumours on their relationship getting closer with the each passing day. It was also said that the actors' were taking their on-screen relationship to off-screen too. Now, yet another report has come, which could be shocking news for many.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada