»   » ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಚಾನ್ಸ್ ಈಕೆಗೆ ಸಿಗ್ಬಹುದಾ.?

ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಚಾನ್ಸ್ ಈಕೆಗೆ ಸಿಗ್ಬಹುದಾ.?

Posted By:
Subscribe to Filmibeat Kannada

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರ 'ಬಹದ್ದೂರ್' ನಿರ್ದೇಶಕ ಚೇತನ್ ಜೊತೆ ಅನೌನ್ಸ್ ಆಗಿದೆ. ನಿನ್ನೆಯಷ್ಟೇ (ಏಪ್ರಿಲ್ 2) ಇನ್ನೂ ಹೆಸರಿಡದ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಕೂಡ ನೆರವೇರಿದೆ. [ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?]

ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ 'ಜಾಗ್ವಾರ್' ಅಬ್ಬರ ಜೋರಾಗಿ ಇದ್ದಿದ್ರಿಂದ ನಿಖಿಲ್ ಅಭಿನಯದ ಎರಡನೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಹಾಗೇ, ನಿಖಿಲ್ ಜೊತೆ ಡ್ಯುಯೆಟ್ ಹಾಡುವ ಹುಡುಗಿಯ ಹುಡುಕಾಟ ಕೂಡ ನಡೆಯುತ್ತಲಿದೆ.

ಈಕೆ ಹೀರೋಯಿನ್ ಆಗಬಹುದಾ.?

ನಿಖಿಲ್ ಕುಮಾರ್-ಚೇತನ್ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಈ ಚಿತ್ರದ ನಾಯಕಿಯ ಪಾತ್ರಕ್ಕೆ ಈ ಹಿಂದೆ ಆಡಿಷನ್ ನಡೆದಿತ್ತು. ಆದ್ರೀಗ, ಲತಾ ಹೆಗಡೆ ಎಂಬ ಯುವ ನಟಿಯ ಮೇಲೆ ಚಿತ್ರತಂಡದ ಕಣ್ಣು ಬಿದ್ದಿದೆ.

ಯಾರೀ ಲತಾ ಹೆಗಡೆ.?

ಚೇತನ್ ನಾಯಕ ನಟರಾಗಿ ಅಭಿನಯಿಸುತ್ತಿರುವ ಮಹೇಶ್ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಇನ್ನೂ ಹೆಸರಿಡದ ಕನ್ನಡ ಚಿತ್ರಕ್ಕೆ ಲತಾ ಹೆಗಡೆ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ 70% ರಷ್ಟು ಮುಗಿದಿದ್ದು, ಸಾಂಗ್ ಶೂಟಿಂಗ್ ಮಾತ್ರ ಬಾಕಿ ಇದೆ. ಹೀಗಿರುವಾಗಲೇ, ಲತಾ ಹೆಗಡೆಗೆ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ. ಅಲ್ಲದೇ, ಕಾಲಿವುಡ್ ಹಾಗೂ ಟಾಲಿವುಡ್ ನಿಂದ ಆಫರ್ಸ್ ಹುಡುಕ್ಕೊಂಡು ಬರುತ್ತಿವೆ.

ನಿಖಿಲ್, ಚೇತನ್ ಕಣ್ಣು ಈಕೆ ಮೇಲೆ.!

ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದೇ ಬೇಡಿಕೆ ಕಂಡುಕೊಳ್ಳುತ್ತಿರುವ ಲತಾ ಹೆಗಡೆ ಈಗ 'ಬಹದ್ದೂರ್' ಚೇತನ್ ಹಾಗೂ ನಿಖಿಲ್ ಕುಮಾರ್ ಕಣ್ಣು ಕುಕ್ಕಿದ್ದಾರೆ. ಮೂಲಗಳ ಪ್ರಕಾರ, ಈಗಾಗಲೇ ಲತಾ ಹೆಗಡೆ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ. ಸಂಭಾವನೆ ಮ್ಯಾಟರ್ ಪಕ್ಕಾ ಆಗಬೇಕು ಅಷ್ಟೆ.

ಎಲ್ಲವೂ ಅಂದುಕೊಂಡಂತೆ ಆದ್ರೆ...

ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ನಿಖಿಲ್ ಕುಮಾರ್ ಅಭಿನಯದ ಎರಡನೇ ಚಿತ್ರಕ್ಕೆ ಕನ್ನಡತಿ ಲತಾ ಹೆಗಡೆ ನಾಯಕಿ ಆಗಲಿದ್ದಾರೆ. ಎಲ್ಲ ಮ್ಯಾಟರ್ ಪಕ್ಕಾ ಆದ್ಮೇಲೆ ಚಿತ್ರತಂಡದಿಂದ ಅಫೀಶಿಯಲ್ ಅನೌನ್ಸ್ ಮೆಂಟ್ ಹೊರಬೀಳಲಿದೆ.

ಚಿತ್ರೀಕರಣ ಯಾವಾಗ.?

ಮೇ ತಿಂಗಳಿನಿಂದ ನಿಖಿಲ್ ಎರಡನೇ ಚಿತ್ರದ ಚಿತ್ರೀಕರಣ ಶುರು ಆಗಲಿದೆ. ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಲಿದ್ದಾರೆ.

English summary
According to the Grapevine, Latha Hegde to pair opposite Nikhil Kumar in the yet-to-be-titled movie directed by Chethan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada