ಎಂಗೇಜ್‌ಮೆಂಟ್‌ಗೂ ಮುನ್ನ ಚಿರು ಫ್ಯಾಮಿಲಿಗೆ ಲಾವಣ್ಯ ಹಾಕಿದ 2 ಕಂಡೀಷನ್ ಏನು?
ಟಾಲಿವುಡ್ ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಮದುವೆ ನಿಶ್ಚಿತಾರ್ಥ ಇತ್ತೀಚೆಗೆ ನೆರವೇರಿತ್ತು. ಕುಟುಂಬ ಸದಸ್ಯರು ಹಾಗೂ ಕೆಲವೇ ಆಪ್ತರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ವರುಣ್- ಲಾವಣ್ಯ ಇಬ್ಬರು ಪರಸ್ಪರ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು ಈಗ ಉಂಗುರ ಬದಲಿಸಿಕೊಂಡಿದ್ದಾರೆ. 'ಮಿಸ್ಟರ್' ಸಿನಿಮಾ ಸೆಟ್‌ನಲ್ಲಿ ಇಬ್ಬರು ಪ್ರೀತಿಲಿ ಬಿದ್ದಿದ್ದರು.
ಅಯೋಧ್ಯೆ ಮೂಲದ ನಟಿ ಲಾವಣ್ಯ ಹೈದರಾಬಾದ್ ಮನೆ ಸೊಸೆ ಆಗುತ್ತಿದ್ದಾರೆ. ಮೆಗಾ ಫ್ಯಾಮಿಲಿಗೆ ಮತ್ತೊಬ್ಬರು ಸೇರ್ಪಡೆ ಆಗುತ್ತಿದ್ದಾರೆ. ಆದರೆ ಮದುವೆಗೂ ಮುನ್ನ ಲಾವಣ್ಯ ಚಿರು ಫ್ಯಾಮಿಲಿಗೆ 2 ಕಂಡೀಷನ್ ಹಾಕಿದ್ದಾರಂತೆ. ನಾಗಬಾಬು ಕೂಡ ಭಾವಿ ಸೊಸೆ ಒಂದು ಕಂಡೀಷನ್ ಹಾಕಿದ್ದಾರೆ ಎನ್ನಲಾಗ್ತಿದೆ. ಕಂಡೀಷನ್‌ಗಳಿಗೆ ಎಲ್ಲರೂ ಒಪ್ಪಿಕೊಂಡ ನಂತರವೇ ವರುಣ್- ಲಾವಣ್ಯ ಮದುವೆಗೆ ಒಪ್ಪಿಗೆ ಸಿಕ್ಕಿದೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಗುಲ್ಲಾಗಿದೆ.

7 ವರ್ಷಗಳಿಂದ ವರುಣ್ ಹಾಗೂ ಲಾವಣ್ಯ ಪ್ರೀತಿ ಬಲೆಯಲ್ಲಿ ಬಿದ್ದಿದ್ದರು. ಆದರೆ ಮೊನ್ನೆ ಮೊನ್ನೆವರೆಗೂ ಇಬ್ಬರ ಲವ್ ಸ್ಟೋರಿ ಗುಟ್ಟಾಗಿಯೇ ಇತ್ತು. ಎಲ್ಲಿಯ ಅಯೋಧ್ಯೆ ಎಲ್ಲಿಯ ಹೈದರಾಬಾದ್ ಅಂತಲೇ ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗುಸುಗುಸು ಶುರುವಾಗಿತ್ತು. ಆದರೆ ಇಬ್ಬರು ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಕೊನೆಗೆ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಲವ್‌ಸ್ಟೋರಿ ರಿವೀಲ್ ಮಾಡಿದ್ದಾರೆ.
ಮದುವೆ ಲಾವಣ್ಯ ಕಂಡೀಷನ್?
ವರುಣ್ ತೇಜ್ ಕೈ ಹಿಡಿಯೋದಕ್ಕೆ ನಟಿ ಲಾವಣ್ಯ ಎರಡು ಕಂಡೀಷನ್ ಹಾಕಿದ್ದಾರಂತೆ. ಅದಕ್ಕೆ ಒಪ್ಪಿದರೆ ಮಾತ್ರ ಮದುವೆ ಎಂದಿದ್ದಾರಂತೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೀತಿದೆ. ಆ ಕಂಡೀಷನ್ ಏನು ಅಂದರೆ ಲಾವಣ್ಯ ಒಳ್ಳೆ ಭರತನಾಟ್ಯ ಡ್ಯಾನ್ಸರ್. ಚಿಕ್ಕಂದಿನಿಂದಲೇ ಕಲಿಯುತ್ತಿದ್ದಾರೆ. ಮದುವೆ ನಂತರ ಕೂಡ ಭರತನಾಟ್ಯ ಪ್ರದರ್ಶನ ನೀಡಲು ಒಪ್ಪಿಕೊಂಡರೆ ಮಾತ್ರ ಮದುವೆ ಎಂದರಂತೆ. ಅದಕ್ಕೆ ನಾಗಬಾಬು ಫ್ಯಾಮಿಲಿ ಓಕೆ ಎಂದಿದೆಯಂತೆ.

ಸಿನಿಮಾ ನಿರ್ಮಾಣ ಮಾಡ್ತೀನಿ?
ಲಾವಣ್ಯ ತ್ರಿಪಾಠಿ ಹಾಕಿರುವ ಮತ್ತೊಂದು ಕಂಡೀಷನ್ ಏನು ಅಂದ್ರೆ, ಮದುವೆ ನಂತರ ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಸಿನಿಮಾ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು, ಆ ಮೂಲಕ ತೆರೆಹಿಂದೆ ಆದರೂ ಚಿತ್ರರಂಗದಲ್ಲಿ ಇರ್ತೀನಿ ಎಂದಿದ್ದು ಅದಕ್ಕೂ ನಾಗಬಾಬು ಒಪ್ಪಿಗೆ ಸೂಚಿಸಿದ್ದಾರಂತೆ. ಈ ಎರಡೂ ಕಂಡೀಷನ್‌ಗೆ ಒಪ್ಪಿಗೆ ಸಿಕ್ಕಿದ ಮೇಲೆ ಎಂಗೇಜ್‌ಮೆಂಟ್‌ಗೆ ಮುಂದಾದರಂತೆ.
ಭಾವಿ ಸೊಸೆಗೆ ನಾಗಬಾಬು ಕಂಡೀಷನ್
ಬರೀ ಲಾವಣ್ಯ ಮಾತ್ರ ನಾಗಬಾಬು ಫ್ಯಾಮಿಲಿಗೆ ಕಂಡೀಷನ್ ಹಾಕಿಲ್ಲ. ಅವರು ಕೂಡ ಭಾವಿ ಸೊಸೆಗೆ ಒಂದು ಕಂಡೀಷನ್ ಹಾಕಿದ್ದಾರಂತೆ. ಅದೇನು ಅಂದರೆ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವಂತಿಲ್ಲ, ಸಿನಿಮಾಗಳಿಗೆ ಗುಡ್‌ಬೈ ಹೇಳಬೇಕು ಎಂದು ಹೇಳಿದ್ದಾರಂತೆ. ಅದಕ್ಕೆ ಆಕೆ ಕೂಡ ಸರಿ ಎಂದು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಸದ್ಯ ಆಕೆ 'ತನಲ್' ಎನ್ನುವ ತಮಿಳು ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ.
ಇಟಲಿಯಲ್ಲಿ ವರಣ್-ಲಾವಣ್ಯ ಮದುವೆ
ವರುಣ್- ಲಾವಣ್ಯ ಎಂಗೇಜ್‌ಮೆಂಟ್ ಆಗ್ತಿದಂತೆ ಮದುವೆ ಯಾವಾಗ? ಎಲ್ಲಿ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ಚಿರಂಜೀವಿ ಸಹೋದರ ನಾಗಬಾಬು ಮಗ ವರುಣ್ ತೇಜ್ ಮೆಗಾ ಪ್ರಿನ್ಸ್ ಅಂತ್ಲೇ ಟಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಇನ್ನು ಈ ವರ್ಷಾಂತ್ಯಕ್ಕೆ ಇಟಲಿಯಲ್ಲಿ ವರುಣ್- ಲಾವಣ್ಯ ಡೆಸ್ಟಿನೇಷನ್ ಮದುವೆ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











