Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Madhuri Dixit: 12 ಲಕ್ಷಕ್ಕೆ ಬಾಡಿಗೆ ಪಡೆದ ಮಾಧುರಿ ದೀಕ್ಷಿತ್ ಅಪಾರ್ಟ್ಮೆಂಟ್‌ನಲ್ಲಿ ಏನೇನಿದೆ?
ಸ್ಟಾರ್ ಸೆಲೆಬ್ರೆಟಿಗಳು ಅಂದ್ಮೇಲೆ ಐಶಾರಾಮಿ ಜೀವನ ಸಹಜ. ತಾವು ವಾಸಿಸುವ ಮನೆ, ತಾವು ಓಡಾಡುವ ಕಾರು, ಬಳಸುವ ವಸ್ತು ಎಲ್ಲಾವೂ ಒಂದಕ್ಕಿಂತ ಒಂದು ದುಬಾರಿ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಸೆಲೆಬ್ರೆಟಿಗಳು ಈಗಾಗಲೇ ತಮ್ಮ ಜೀವನ ಶೈಲಿ ರೂಪಿಸಿಕೊಂಡಿದ್ದಾರೆ.
ಅದರಲ್ಲೂ ಬಾಲಿವುಡ್, ಹಾಲಿವುಡ್ ತಾರೆಯರ ಲೆವೆಲ್ ಇನ್ನೂ ಸ್ವಲ್ಪ ಮೇಲೆಯೇ. ಒಬ್ಬರಿಗಿಂತ ಮತ್ತೊಬ್ಬರು ಹೈ ಫೈ ಜೀವನಕ್ಕೆ ಒಗ್ಗಿಕೊಂಡಿರುತ್ತಾರೆ. ಇನ್ನು ಇವರು ವಾಸಿಸುವ ಮನೆಯ ಬಗ್ಗೆ ಅಂತೂ ಮಾತನಾಡೋದೆ ಬೇಡ ಅಷ್ಟು ಐಶಾರಾಮಿಯಾಗಿ ಇರುತ್ತೆ.
Deepika
Padukone:
ದೀಪಿಕಾ
ಪಡುಕೋಣೆ
'ಮಧ್ಯದ
ಬೆರಳು'
ತೋರಿಸಿದ್ದಕ್ಕೆ
ಟಾಂಗ್
ಕೊಟ್ಟ
ನೆಟ್ಟಿಗರು
ಇದೀಗ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಇಂತಹದ್ದೇ ವಿಚಾರಕ್ಕೆ ಎಲ್ಲರ ಹುಬ್ಬೇರಿಸಿದ್ದಾರೆ. ಹೊಸದಾದ ಅಪಾರ್ಟ್‌ಮೆಂಟ್ ಒಂದನ್ನು ತಿಂಗಳ ಬಾಡಿಗೆಗೆ ಮಾಧುರಿ ದೀಕ್ಷಿತ್ ಪಡೆದುಕೊಂಡಿದ್ದಾರೆ. ಈ ಅಪಾರ್ಟ್‌ಮೆಂಟ್ ಒಳಗೆ ಏನಿದೆ ಅಂತ ಗೊತ್ತಾದರೆ, ನೀವು ಹೌಹಾರುವುದು ಗ್ಯಾರಂಟಿ

ಇದು ಅಪಾರ್ಟ್‌ಮೆಂಟ್ ಅಲ್ಲ ಅರಮನೆ
ಮಾಧುರಿ ದೀಕ್ಷಿತ್ ದಶಕಗಳಿಂದಲೂ ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ. ಅದೆಷ್ಟೋ ಹಿಟ್ ಸಿನಿಮಾಗಳು, ಸಾಲು ಸಾಲು ಸ್ಟಾರ್ ನಟರ ಜೊತೆ ನಟನೆ, ಸೇರಿದಂತೆ ತನ್ನದೇ ನಟನಾ ಕೌಶಲ್ಯದಿಂದ ಬೆಳೆದು ಬಂದಿರುವ ನಟಿ. ಮಾಧುರಿ ದೀಕ್ಷಿತ್ ಎಂದರೆ ಆಗ ಎಷ್ಟು ಹೈಪ್ ಇತ್ತೋ ಈಗಲೂ ಅದು ಮುಂದುವರೆದಿದೆ. ಮಾಧುರಿ ದೀಕ್ಷಿತ್ ಈಗಲೂ ತನ್ನ ಚಾರ್ಮ್ ಮತ್ತು ಬ್ಯೂಟಿಯನ್ನು ಹಾಗೇ ಉಳಿಸಿಕೊಂಡು ಯುವ ನಟಿಯರ ಹೊಟ್ಟೆ ಉರಿಸುತ್ತಿದ್ದಾರೆ. ಬಾಲಿವುಡ್‌ನ ಈ ಬ್ಯೂಟಿ ಕ್ವೀನ್ ಈಗ ಲಕ್ಷುರಿ ಅಪಾರ್ಟ್‌ಮೆಂಟ್ ಒಂದನ್ನು ತಿಂಗಳ ಬಾಡಿಗೆ ಲೆಕ್ಕದಲ್ಲಿ ಪಡೆದುಕೊಂಡಿದ್ದಾರೆ. ಇದರ ವಿಶೇಷತೆಗಳನ್ನು ಕೇಳಿದರೆ, ಇದು ಮನೆಯಲ್ಲಾ ಅರಮನೆ ಅನಿಸುವುದು ಸಹಜ.
Bollywood
Maldives
Trip
:
ಮಾಲ್ಡೀವ್ಸ್
ಪ್ರವಾಸ
ಮುಗಿಸಿ
ಬಂದ
ಬಾಲಿವುಡ್
ತಾರೆಯರು
ತಿಂಗಳಿಗೆ Rs12.5 ಲಕ್ಷ ಬಾಡಿ
ಹೌದು, ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಶ್ರೀರಾಮ್ ನೆನೆ ಮುಂಬೈನ ವರ್ಲಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಹೊಸ ಫ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಫ್ಲ್ಯಾಟ್‌ಗೆ ತಿಂಗಳಿಗೆ Rs12.5 ಲಕ್ಷ ಬಾಡಿಗೆ ಎಂದು ವರದಿಯಾಗಿದೆ. ಇದೊಂದು ಹೊಸದಾಗಿ ನಿರ್ಮಿಸಿರುವ ಅಪಾರ್ಟ್‌ಮೆಂಟ್ ಆಗಿದ್ದು, ಇದನ್ನು ಮತ್ತೆ ಹೊಸ ವಿನ್ಯಾಸದೊಂದಿಗೆ ತಯಾರು ಮಾಡಲಾಗುತ್ತಿದೆ. ಇದೇ ವಿಚಾರ ಈಗ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತಿದೆ. ಅರಮನೆ ಮಾದರಿಯಲ್ಲೇ ಈ ಅಪಾರ್ಟ್‌ಮೆಂಟ್ ವಿನ್ಯಾಸಗೊಳ್ಳಲಿದೆಯಂತೆ.
ಬಾಲ್ಕನಿಯಿಂದ ಇಡೀ ಮುಂಬೈ ನಗರ ಪ್ರತ್ಯಕ್ಷ
ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯಲ್ಲಿದೆ. ಮಾಧುರಿ ದೀಕ್ಷಿತ್ ಈ ಹೊಸ ಫ್ಲ್ಯಾಟ್ ಬಹಳ ಎತ್ತರದಲ್ಲಿದ್ದು, ಬಾಲ್ಕನಿಯಿಂದ ನೋಡಿದರೇ ಇಡೀ ಮುಂಬೈ ನಗರವೇ ಕಣ್ಣಿಗೆ ಕಾಣಲಿದೆ. ಅದರಲ್ಲೂ ನೈಟ್ ವೀವ್ ಸಾಕಷ್ಟು ಆಕರ್ಷಕವಾಗಿದೆ. ಇನ್ನು ಹಗಲಿನ ವೇಳೆ ಸಾಕಷ್ಟು ಬೆಳಕು ಗಾಳಿ ಬರಲಿದ್ದು, ಈ ಅಪಾರ್ಟ್‌ಮೆಂಟ್‌ನಲ್ಲಿ ದೊಡ್ಡ ಸ್ಪೇಸ್ ಇದೆಯಂತೆ.
ಮರು ವಿನ್ಯಾಸ ಮಾಡಿದ್ದು ಅಪೂರ್ವ ಶ್ರಾಫ್
ಇನ್ನು ಮಾಧುರಿ ದೀಕ್ಷಿತ್ ಹೊಸ ಅಪಾರ್ಟ್‌ಮೆಂಟ್ ಕಾರ್ಪೆಟ್ ಏರಿಯಾ ಸುಮಾರು 5500 ಚದರ ಅಡಿಗಳಿಗಿಂತ ಹೆಚ್ಚು ಇದೆ. ಹೀಗಾಗಿ ಫ್ಲ್ಯಾಟ್ ಅನ್ನು ಅಪೂರ್ವ ಶ್ರಾಫ್ ಮರು ವಿನ್ಯಾಸಗೊಳಿಸಲಿದ್ದಾರೆ. ಈ ಫ್ಲ್ಯಾಟ್ ವಿನ್ಯಾಸ ಆಗುವುದಕ್ಕೂ ಮೊದಲು ತೆಗೆದ ಒಂದಷ್ಟು ಫೋಟೊವನ್ನು ಅಪೂರ್ವ ಶ್ರಾಫ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ನೋಡುಗರು ಇದೇನು ಮನೆನಾ ಅಥವಾ ಅರಮನೆನಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಅಪಾರ್ಟ್‌ಮೆಂಟ್ ಪೂರ್ಣಕೊಂಡು ಮಾಧುರಿ ದೀಕ್ಷಿತ್ ಕೈ ಸೇರಲಿದೆ.