»   » 'ಮಫ್ತಿ' ನಿರ್ದೇಶಕನ ಮುಂದಿನ ಸಿನಿಮಾಗೆ 'ಯಶ್' ನಾಯಕ

'ಮಫ್ತಿ' ನಿರ್ದೇಶಕನ ಮುಂದಿನ ಸಿನಿಮಾಗೆ 'ಯಶ್' ನಾಯಕ

Posted By:
Subscribe to Filmibeat Kannada

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸವಾರಿ ಮಾಡ್ತಿದೆ. ಹೀಗಿರುವಾಗ, ಮಫ್ತಿ ನಿರ್ದೇಶಕನ ಮುಂದಿನ ಸಿನಿಮಾ ಯಾವುದು ಮತ್ತು ಯಾವ ನಟನ ಜೊತೆ ಎಂಬ ಕುತೂಹಲ ಗಾಂಧಿನಗರದಲ್ಲಿ ಹೆಚ್ಚಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮಫ್ತಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಮೂಡಿಸಿರುವ ನಿರ್ದೇಶಕ ನರ್ತನ್, ತಮ್ಮ ಮುಂದಿನ ಚಿತ್ರವನ್ನ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಮಾಡಲಿದ್ದಾರೆ ಎಂಬ ಗುಸಗುಸು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ.

'ಮಫ್ತಿ' ನಂತರ ಮತ್ತೊಂದು ಚಿತ್ರದಲ್ಲಿ ಒಂದಾಗಲಿದೆ ಯಶಸ್ವಿ ಜೋಡಿ!

Mafti Director Narthan Next movie with Yash

ಸದ್ಯ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಂತರ ನರ್ತನ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

'ಮಫ್ತಿ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಜಯಣ್ಣ-ಬೋಗೇಂದ್ರ ಅವರೇ ನರ್ತನ್ ಅವರ ಎರಡನೇ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರಂತೆ. ಮೂಲಗಳ ಪ್ರಕಾರ, ಯಶ್ ಹುಟ್ಟುಹಬ್ಬದಂದು ಈ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

English summary
The latest buzz in Gandhinagar has it that director Narthan, who scored a box-office success with his first film Mufti starring Sri murali and Shivarajkumar, has caught Yash’s attention.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X