ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಡಿವೋರ್ಸ್? ಪೋಸ್ಟ್ ವೈರಲ್
ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆ ಸುದ್ದಿ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಇಬ್ಬರು ಮದುವೆ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರವೀಂದರ್ ದಪ್ಪ ಇದ್ದಾರೆ ಎನ್ನುವ ಕಾರಣಕ್ಕೆ ಕೆಲವರು ಬಾಡಿ ಶೇಮಿಂಗ್ ಮಾಡಿದ್ದರು. ಹಣಕ್ಕಾಗಿ ಮಹಾಲಕ್ಷ್ಮಿ ಆಗಿದ್ದಾರೆ ಎಂದು ಆಕೆಯನ್ನು ಟ್ರೋಲ್ ಮಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ವೀವ್ ಆಗಿರುವ ಮಹಾಲಕ್ಷ್ಮಿ ಫೋಟೊಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಂದಹಾಗೆ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇಬ್ಬರದ್ದು ಕೂಡ 2ನೇ ಮದುವೆ ಅಂತೆ. ಇನ್ನು ವಿನಾ ಕಾರಣ ದಂಪತಿಯನ್ನು ಕೆಲವರು ಟ್ರೋಲ್ ಮಾಡುತ್ತಿರುತ್ತಾರೆ. ಮಹಾಲಕ್ಷ್ಮಿ ಇದಕ್ಕು ಮುನ್ನ ಅನಿಲ್ ನೆರೆಡಿಮಿಲ್ಲಿ ಎಂಬುವವರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ದಂಪತಿ ಒಬ್ಬ ಮಗ ಕೂಡ ಇದ್ದಾನೆ.

ಮಹಾಲಕ್ಷ್ಮಿ ಮಗನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲ್ಲ. ಯಾವಾಗಲೂ 2ನೇ ಗಂಡನ ಜೊತೆಗಿನ ಫೋಟೊ ಹಾಕುತ್ತಾರೆ ಎಂದು ಕೆಲವರು ಮೂದಲಸುತ್ತಿರುತ್ತಾರೆ. ಮಹಾಲಕ್ಷ್ಮಿ ಕೆಲ ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ 'ಮಹಾರಸಿ' ಧಾರಾವಾಹಿಯಲ್ಲಿ ಮಿಂಚಿದ್ದರು. ಇನ್ನು ನಿರ್ಮಾಪಕ ರವೀಂದ್ರನ್ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಡಿವೋರ್ಸ್ ಗಾಸಿಪ್
ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಗಾಸಿಪ್‌ಗಳು ಹರಿದಾಡುತ್ತದೆ. ಇದ್ದಕ್ಕಿದಂತೆ ರವೀಂದರ್ ಚಂದ್ರಶೇಖರನ್ ಹಾಗೂ ಮಹಾಲಕ್ಷ್ಮಿ ದೂರಾಗುತ್ತಿದ್ದಾರೆ ಎನ್ನುವ ಸುಳ್ಳು ವದಂತಿ ಹರಿದಾಡುತ್ತಿದೆ. ಯಾವುದೇ ಆಧಾರ ಇಲ್ಲದೇ ಸುಖಾ ಸುಮ್ಮನೆ ಇಂತಹ ಸುದ್ದಿಗಳನ್ನು ತೇಲಿಬಿಡಲಾಗುತ್ತಿದೆ. ಇಬ್ಬರು ಅನ್ಯೋನ್ಯವಾಗಿ ಇದ್ದರೂ ಕೂಡ ಇಂತಹ ಸುದ್ದಿಗಳನ್ನು ಕೆಲ ಯೂಟ್ಯೂಬ್ ಚಾನಲ್‌ಗಳು ಪ್ರಸಾರ ಮಾಡುತ್ತಿವೆ.

ಮಹಾಲಕ್ಷ್ಮಿ ಪೋಸ್ಟ್ ವೈರಲ್
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈಗೊಂದು ಸುಳ್ಳು ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಮಹಾಲಕ್ಷ್ಮಿ ಒಂದು ಪೋಸ್ಟ್ ಮಾಡಿದ್ದಾರೆ. ಗಂಡನ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. "ನೀನು ನನ್ನ ಭುಜದ ಮೇಲೆ ಕೈ ಹಾಕಿದ್ದರೆ ಪ್ರಪಂಚದಲ್ಲಿ ನಾನು ಏನು ಬೇಕಾದರೂ ಮಾಡಬಲ್ಲೆ ಎನ್ನುವ ಧೈರ್ಯ ಬರುತ್ತದೆ. ನನ್ನ ಮನಸ್ಸಿನ ತುಂನಾ ನೀನೇ ಅಮ್ಮು, ಐ ಲವ್ ಯು" ಎಂದು ಪತಿಯ ಜೊತೆಗಿನ ಫೋಟೊ ಶೇರ್ ಮಾಡಿ ಸಪೋಸ್ಟ್ ಮಾಡಿದ್ದಾರೆ.
ಲವ್ ಮ್ಯಾರೇಜ್
ರವೀಂದರ್ ನಿರ್ಮಾಣದ 'ವಿಡಿಯುಮ್ ವಾರೈ ಕಾಥಿರು' ಚಿತ್ರದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಮದುವೆ ನಂತರ ತಮ್ಮಿಬ್ಬರ ಪ್ರೇಮ್ ಕಹಾನಿಯನ್ನು ಜೋಡಿ ಬಿಚ್ಚಿಟ್ಟಿತ್ತು. "ರವೀಂದರ್ ಅವರೇ ನನಗೆ ಮೊದಲು ಪ್ರಪೋಸ್ ಮಾಡಿದರು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್ ಮಾಡಿ ಕೇಳಿದ್ದರು. ಆದರೆ ಮಸೇಜ್ ನೋಡಿದ ಬಳಿಕ ನಾನು ಬಹಳ ಸಮಯ ತೆಗೆದುಕೊಂಡು, ನಂತರ ಒಪ್ಪಿಗೆ ಸೂಚಿಸಿದ್ದೆ" ಎಂದು ಹೇಳಿದರು.

ಟ್ರೋಲ್ ಬಗ್ಗೆ ಮಾತು
"ನಮ್ಮಿಬ್ಬರ ಮದುವೆ ವಿಚಾರ ಈ ಮಟ್ಟಿಗೆ ವೈರಲ್ ಆಗುತ್ತದೆ ಅಂದುಕೊಂಡಿರಲಿಲ್ಲ. ಎಲ್ಲರೂ ನಮಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ನಾವು ಮದುವೆ ಆಗಬೇಕು ಎಂದು ನಿರ್ಧರಿಸಿ ಮನೆಯಲ್ಲಿ ಹೇಳಿದ ಬಳಿಕ ಇಬ್ಬರ ಮನೆಯಲ್ಲೂ ಒಪ್ಪಿಗೆ ಸಿಕ್ಕಿತು. ಇನ್ನು ಮದುವೆ ಬಳಿಕ ನಮ್ಮಿಬ್ಬರ ಮದುವೆ ಬಳಿಕ ಬಾಡಿ ಶೇಮಿಂಗ್ ಬಗ್ಗೆ ಸಾಕಷ್ಟು ಕಾಮೆಂಟ್ ಬಂತು, "ಬೇರೆಯವರ ಜೀವನದ ಬಗ್ಗೆ ಮಾತನಾಡುವುದು ಬಹಳ ಸುಲಭ ಎಂದು ರವೀಂದರ್ ಬೇಸರ ಹೊರಹಾಕಿದರು. ಇದೇ ವಿಚಾರವಾಗಿ ಮಾತನಾಡಿದ್ದ ಮಹಾಲಕ್ಷ್ಮಿ ಇಂತಹ ಟ್ರೋಲ್‌ಗೆ ನಾನು ತಲೆ ಕೆಡಿಸಿಕೊಳ್ಳ ಎಂದಿದ್ದರು.


Click it and Unblock the Notifications











