ಮಹೇಶ್ ಬಾಬು 'ಕಲಾವತಿ' v/s ವಿಜಯ್ 'ಅರೇಬಿಕ್ ಕುತು': ದಾಖಲೆ ಬರೆದಿದ್ದು ಯಾರು?

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಸಿನಿಮಾರಂಗದಲ್ಲಿ ಸಾಲು, ಸಾಲು ಬೆಳವಣಿಗೆಗಳು ಆಗಿವೆ. ಕನ್ನಡದಲ್ಲೂ ಅನೇಕ ಲವ್ ಸಾಂಗ್ಸ್ ರಿಲೀಸ್ ಆಗಿವೆ. ಜೊತೆಗೆ ತಮಿಳು, ತೆಲುಗಿನಲ್ಲೂ ಕೂಡ ಸಾಕಷ್ಟು ಸಿನಿಮಾ ಹಾಡು, ಟೀಸರ್ ಟ್ರೇಲರ್ ರಿಲೀಸ್ ಆಗಿವೆ. ಈ ಸಾಲಿನಲ್ಲಿ ಹೆಚ್ಚಾಗಿ ಸದ್ದು ಮಾಡಿದ್ದು, ಮಾಡುತ್ತಾ ಇರುವುದು ತಮಿಳು ಮತ್ತು ತೆಲುಗು ಸಿನಿಮಾದ ಎರಡು ಹಾಡುಗಳು.

ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಮತ್ತು ತಮಿಳು ನಟ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾದ ಹಾಡುಗಳು ಹಲವು ಕಾರಣಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಹಾಡುಗಳು ರಿಲೀಸ್ ಆಗುವ ಮುನ್ನವೇ ಸಾಕಷ್ಟು ಗಮನ ಸೆಳೆದಿದ್ದವು. ಅದಕ್ಕೆ ಕಾರಣ ಈ ಇಬ್ಬರು ನಟರ ಅಭಿಮಾನಿಗಳು.

Recommended Video

ಸಮಂತಾ ಹಾಡಿನ ದಾಖಲೆ ಹೆಚ್ಚು ದಿನ ಉಳಿಯೋಕೆ ಬಿಡಲಿಲ್ಲ ಮಹೇಶ್ ಬಾಬು

ಈ ಹಾಡುಗಳ ವಿಚಾರವಾಗಿ ಮಹೇಶ್ ಬಾಬು ಮತ್ತು ವಿಜಯ್ ಅವರ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ವಾರ್ ಶುರು ಮಾಡಿದ್ರು. ತಮ್ಮ ನೆಚ್ಚಿನ ನಟರಿಗೆ ಜೈಕಾರ ಹಾಕುತ್ತಾ ಮತ್ತೊಬ್ಬರನ್ನು ತೆಗಳಿದ್ದರು. ಎರಡೂ ಹಾಡುಗಳು ಒಂದೇ ದಿನ ರಿಲೀಸ್ ಆದ ಕಾರಣ ಯಾರು ದಾಖಲೆ ಮಾಡುತ್ತಾರೆ ಎನ್ನುವ ವಿಚಾರಕ್ಕೆ ಅಭಿಮಾನಿಗಳು ಜಗಳ ಆರಂಭಿಸಿದ್ದರು.

ಮಹೇಶ್ ಬಾಬು 'ಕಲಾವತಿ' ಮಾಡಿರುವ ದಾಖಲೆ ಏನು?

ನಟ ಮಹೇಶ್ ಬಾಬು ಮತ್ತು ಕೀರ್ತಿ ಸುರೇಶ್ ಅಭಿನಯದ 'ಸರ್ಕಾರು ವಾರಿ ಪಾಟ' ಚಿತ್ರದ ಹಾಡು 'ಕಮಾನ್ ಕಮಾನ್ ಕಲಾವತಿ' ಪ್ರೇಮಿಗಳ ದಿನದ ಪ್ರಯುಕ್ತ ರಿಲೀಸ್ ಆಗಿದೆ. ಫೆಬ್ರವರಿ 14ಕ್ಕೆ ರಿಲೀಸ್ ಆಗಬೇಕಿದ್ದ ಹಾಡು ಲೀಕ್ ಆದ ಕಾರಣ ಒಂದು ದಿನ ಮುಂಚಿತವಾಗಿ ಫೆಬ್ರವರಿ 13ಕ್ಕೆ ರಿಲೀಸ್ ಆಗಿದೆ. ಈ ಹಾಡು ರಿಲೀಸ್ ಆಗುತ್ತಿದ್ದ ಹಾಗೆ ಸಿಕ್ಕಾಪಟ್ಟೆ ವೈರ್ ಆಗಿದೆ. ಸಿನಿಪ್ರಿಯರ ಮನಸ್ಸಲ್ಲಿ ಈ ಹಾಡು ಸ್ಥಾನ ಗಿಟ್ಟಿಸಿಕೊಂಡಿದೆ. ಇನ್ನು ಈ ಹಾಡು ಈ ಹಾಡು ರಿಲೀಸ್ ಆಗಿ 24 ಗಂಟೆ ಒಳಗೆ 1 ಕೋಟಿ 6 ಲಕ್ಷ ವೀವ್ಸ್ ಪಡೆದುಕೊಂಡಿದೆ. ಪ್ರಸ್ತುತ ಈ ಹಾಡು 19 ಮಿಲಿಯನ್ ವೀವ್ಸ್ ಪಡೆದು ದಾಖಲೆ ಮಾಡಿದೆ.

ನಟ ವಿಜಯ್ ಹಾಡು ಮಾಡಿದ ದಾಖಲೆ!

ವಿಜಯ್ ಅಭಿನಯದ 'ಬೀಸ್ಟ್' ಚಿತ್ರ 'ಅರೇಬಿಕ್ ಕುತು' ಹಾಡು ದಾಖಲೆ ಬರೆದು ಬೀಗಿದೆ. ಈ ಹಾಡಿಗಾಗಿ ವಿಜಯ್ ಅಭಿಮಾನಿಗಳು ಜಪ ಮಾಡುತ್ತಾ ಇದ್ದರು. ಹಾಗಾಗಿ ಹಾಡು ರಿಲೀಸ್ ಅದ ಕೂಡ ವೈರಲ್ ಆಗಿದೆ. ಈ ಹಾಡಿನಲ್ಲಿ ಅರೇಬಿಕ್ ಸಂಗೀತ ಮತ್ತು ಲಿರಿಕ್ಸ್ ಕೂಡ ಇದೆ. ವಿಶೇಷವಾಗಿ ಗಮನ ಸೆಳೆದ 'ಬೀಸ್ಟ್' ಹಾಡು ರಿಲೀಸ್ ಆದ 9 ಗಂಟೆಯಲ್ಲೇ 1 ಕೋಟಿ 5 ಲಕ್ಷ ವೀವ್ಸ್ ಪಡೆದುಕೊಂಡು ದಾಖಲೆ ಮಾಡಿದೆ. ಹಾಗಾಗಿ ಈ ಹಾಡು 24 ಗಂಟೆ ಆಗುವಷ್ಟರಲ್ಲಿ 20ಮಿಲಿಯನ್ ವೀಕ್ಷಣೆ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಮಹೇಶ್ ಬಾಬು ದಾಖಲೆ ಮುರಿದ ವಿಜಯ್!

ಮಹೇಶ್ ಬಾಬು ದಾಖಲೆ ಮುರಿದ ವಿಜಯ್!

ಸದ್ಯ ಹೊರ ಬಂದಿರುವ ಅಂಕಿ ಅಂಶಗಳ ಪ್ರಕಾರ 'ಬೀಸ್ಟ್' ಚಿತ್ರದ ಹಾಡಿನ ದಾಖಲೆ ಹೆಚ್ಚಿದೆ. ಈ ಹಾಡು ತಡವಾಗಿ ರಿಲೀಸ್ ಆದರೂ ಕೂಡ ದಾಖಲೆಯಲ್ಲಿ ಮುಂದೆ ಇದೆ. ಹಾಗಾಗಿ ಮಹೇಶ್ ಬಾಬು ಅವರ ಕಲಾವತಿ ಹಾಡನ್ನು ಹಿಂದಿಕ್ಕಿದೆ. ಬೀಸ್ಟ್ ಚಿತ್ರದ ಹಾಡಿಗೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರ ಸಂಗೀತ ಇದೆ. ಜೊತೆಗೆ ಅವರೇ ಈ ಹಾಡನ್ನು ಹಾಡಿದ್ದಾರೆ. ತೆಲುಗಿನ 'ಕಲಾವತಿ' ಹಾಡಿಗೆ ತಮನ್ ಸಂಗೀತವಿದ್ದು, ಸಿದ್ ಶ್ರೀರಾಮ್ ಹಾಡಿದ್ದಾರೆ.

ಹಾಡು ರಿಲೀಸ್‌ಗೂ ಮುನ್ನವೇ ಶುರುವಾಗಿತ್ತು ಫ್ಯಾನ್ ವಾರ್!

ಹಾಡು ರಿಲೀಸ್‌ಗೂ ಮುನ್ನವೇ ಶುರುವಾಗಿತ್ತು ಫ್ಯಾನ್ ವಾರ್!

ಹಾಡುಗಳು ರಿಲೀಸ್ ಆಗುವ ಮುನ್ನ ವಿಜಯ್ ಮತ್ತು ಮಹೇಶ್ ಬಾಬು ಅಭಿಮಾನಿಗಳು ವಾರ್‌ಗೆ ಇಳಿದು ಬಿಟ್ಟಿದ್ದರು. ಎರಡೂ ಹಾಡುಗಳು ಒಂದೇ ದಿನ ರಿಲೀಸ್ ಆಗುತ್ತವೆ ಎಂದು ಪ್ರಕಟ ಮಾಡಿದ ಕಾರಣ ಯಾರು ಮೊದಲು ದಾಖಲೆ ಮಾಡುತ್ತಾರೆ ಎನ್ನುವ ಕುತೂಹಲ, ಪೈಪೋಟಿ ಅಭಿಮಾನಿ ಬಳಗದಲ್ಲಿ ಮೂಡಿತ್ತು. ಈಗ ಅದು ತಿಳಿಯಾಗಿದೆ. ಯಾಕೆಂದರೆ ಮಹೇಶ್ ಬಾಬು ಅವರ 'ಸರ್ಕಾರು ವಾರಿ ಪಾಟ' ಚಿತ್ರದ ಹಾಡು 'ಬೀಸ್ಟ್' ಹಾಡಿಗಿಂತ ಒಂದು ದಿನ ಮೊದಲೇ ರಿಲೀಸ್ ಆಗಿದೆ. ಹಾಗಾಗಿ ಈಗ 24 ಗಂಟೆಯ ದಾಖಲೆಯ ಬಗ್ಗೆ ಮಾತನಾಡಲಾಗುತ್ತಿದೆ.

More from Filmibeat

English summary
Mahesh Babu's Kalavathi And Vijay's Arabic Kuthu Big Record From Vijay Only,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X