SSMB29 Teaser: ಮೌಳಿ- ಮಹೇಶ್ ಬಾಬು ಸಿನಿಮಾ ಟೀಸರ್ ಬಿಡುಗಡೆಗೆ ಮುಹೂರ್ತ, ಸ್ಥಳ ಫಿಕ್ಸ್!

ಸದ್ಯ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾಗಳ ಟ್ರೆಂಡ್ ಶುರುವಾಗ್ತಿದೆ. ಅದರಲ್ಲಿ ಮಹೇಶ್ ಬಾಬು ಹಾಗೂ ರಾಜಮೌಳಿ ಕ್ರೇಜಿ ಕಾಂಬಿನೇಷನ್ ಸಿನಿಮಾ ಕೂಡ ಇದೆ. ಇನ್ನು ಹೆಸರಿಡದ ಈ ಚಿತ್ರದಲ್ಲಿ SSMB29 ಅಂತ ಕರೆಯಲಾಗುತ್ತಿದೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ.

ಆಗಸ್ಟ್ 9ರಂದು ಮಹೇಶ್ ಬಾಬು ಹುಟ್ಟುಹಬ್ಬ ಇತ್ತು. ಆ ದಿನವೇ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗುತ್ತದೆ ಎಂದು ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ನವೆಂಬರ್‌ನಲ್ಲಿ ಸರ್‌ಪ್ರೈಸ್ ಕೊಡುವುದಾಗಿ ಜಕ್ಕಣ್ಣ ಹೇಳಿದ್ದರು. ಇದೀಗ ಆ ಸಮಯ ಹತ್ತಿರವಾಗ್ತಿದೆ. ಅದರ ಬೆನ್ನಲ್ಲೇ ಟೀಸರ್ ರಿಲೀಸ್ ಡೇಟ್ ಹಾಗೂ ಸ್ಥಳದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

Mahesh Babu Rajamouli s Pan-World Film SSMB29 Teaser Expected Soon

SSMB29 ಚಿತ್ರದ ಗ್ಲಿಂಪ್ಸ್ ಬಿಡುಗಡೆ ಮಾಡುವ ಮುನ್ನ 'ಬಾಹುಬಲಿ: ದಿ ಎಪಿಕ್' ಚಿತ್ರವನ್ನು ರಾಜಮೌಳಿ ತೆರೆಗೆ ತರುತ್ತಿದ್ದಾರೆ. ಎರಡು ಭಾಗಳಾಗಿ ಬಂದಿದ್ದ 'ಬಾಹುಬಲಿ' ಸರಣಿ ಚಿತ್ರವನ್ನು ಒಂದಾಗಿ ಎಡಿಟ್ ಮಾಡಿ ಈ ವಾರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಕ್ರೇಜ್ ಹುಟ್ಟಾಕಿ ತಮ್ಮ ಮುಂದಿನ ಸಿನಿಮಾ ಟೀಸರ್ ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತಾರೆ ಎನ್ನಲಾಗ್ತಿದೆ. ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬರ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಎರಡು ವರ್ಷಗಳ ಹಿಂದೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ತಾರಕ್ ಹಾಗೂ ರಾಮ್‌ಚರಣ್ ನಟಿಸಿದ್ದ ಸಿನಿಮಾ ಹಾಲಿವುಡ್ ವೇದಿಕೆಗಳಲ್ಲಿ ಸದ್ದು ಮಾಡಿತ್ತು. 'ನಾಟು ನಾಟು' ಹಾಡಿಗೆ ಆಸ್ಕರ್ ಗೌರವ ಸಿಕ್ಕಿತ್ತು. ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಜೇಮ್ಸ್ ಕ್ಯಾಮರೂನ್ ಸಿನಿಮಾ ನೋಡಿ ಚಿತ್ರತಂಡವನ್ನು ಪ್ರಶಂಸಿದ್ದರು. ಅದೇ ಸಮಯದಲ್ಲಿ ಜಕ್ಕಣ್ಣ ಮುಂದೆ ಹಾಲಿವುಡ್ ರೇಂಜ್ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು.

Mahesh Babu Rajamouli s Pan-World Film SSMB29 Teaser Expected Soon

SSMB29 ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಪ್ರಿಯಾಂಕ ಚೋಪ್ರಾ ಹಾಗೂ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಇನ್ನುಳಿದಂತೆ ಕಥೆ, ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಹೈದರಾಬಾದ್, ಒರಿಸ್ಸಾ ಮಾತ್ರವಲ್ಲದೇ ಆಫ್ರಿಕಾದಲ್ಲಿ ಕೂಡ ಚಿತ್ರೀಕರಣ ಮಾಡಲಾಗಿದೆ. ನಂಬರ್ 15ಕ್ಕೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಅಭಿಮಾನಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

'ಗುಂಟೂರು ಖಾರಂ' ಬಳಿಕ ಮಹೇಶ್ ಬಾಬು ಯಾವುದೇ ಚಿತ್ರದಲ್ಲಿ ನಟಿಸಿಲ್ಲ. 'RRR' ಬಳಿಕ ಜಕ್ಕಣ್ಣ ಕೂಡ ಇದೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೊಂದು ಗ್ಲೋಬರ್ ಟ್ರಾಟರ್ ಸಿನಿಮಾ ಎನ್ನಲಾಗ್ತಿದ್ದು ದೇಶ ವಿದೇಶಗಳಲ್ಲಿ ಕಥೆ ಸಾಗಲಿದೆ. ಚಿತ್ರದಲ್ಲಿ 'ವಾರಣಾಸಿ', 'ಮಹಾರಾಜ' ಸೇರಿದಂತೆ ಕೆಲ ಟೈಟಲ್‌ಗಳ ಪರಿಶೀಲನೆಯಲ್ಲಿದೆ ಅಂತೆ ಚಿತ್ರತಂಡ.

ಇಂಗ್ಲೀಷ್ ಹಾಗೂ ತೆಲುಗು ಭಾಷೆಗಳಲ್ಲಿ SSMB29 ಚಿತ್ರ ಚಿತ್ರೀಕರಣ ನಡೆಯುತ್ತಿದೆ. ದೇಶ ವಿದೇಶದ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಈ ಸಿನಿಮಾ ಮೂಲಕ ಮಹೇಶ್ ಬಾಬು ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ಲೆಕ್ಕಾಚಾರದಲ್ಲಿದ್ದಾರೆ. ಚಿತ್ರದ ಛಾಯಾಗ್ರಾಹಕ, ಸಂಗೀತ ನಿರ್ದೇಶಕ ಯಾರು ಎನ್ನುವ ಬಗ್ಗೆ ಕೂಡ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು ಸಿನಿಮಾ ತೆರೆಗೆ ಬರಲು ಇನ್ನೆರಡು ವರ್ಷ ಬೇಕಾಗಬಹುದು.

More from Filmibeat

Read more about: mahesh babu rajamouli tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X