ಅಲ್ಲು ಅರ್ಜುನ್ ದಾರಿಯಲ್ಲಿ ರಾಮ್‌ ಚರಣ್, ಮಹೇಶ್‌ ಬಾಬು: ಹಿಂದಿ ಡಬ್ಬಿಂಗ್‌ಗೆ ಸಜ್ಜು!

ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರ ರಿಲೀಸ್ ಆಗಿ, ಜನ ಮೆಚ್ಚುಗೆಯ ಜೊತೆಗೆ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮಟ್ಟದ ದಾಖಲೆ ಮಾಡಿದೆ. ಹಿಂದಿಯಲ್ಲೂ ದೊಡ್ಡ ಮಟ್ಟದ ಪ್ರಶಂಸೆ ಪಡೆದಿದ್ದ ಪುಷ್ಪ ಬಾಕ್ಸಾಫಿಸ್‌ನಲ್ಲಿ ಪ್ರತ್ಯೇಕ ದಾಖಲೆ ಮಾಡಿದೆ. ಇದು ಟಾಲಿವುಡ್ ಸ್ಟಾರ್‌ಗಳನ್ನೆಲ್ಲಾ ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದೆ.

ಈಗ ತೆಲುಗು ನಟರು ಒಬ್ಬೊಬ್ಬರಾಗಿಯೇ ಬಾಲಿವುಡ್‌ನತ್ತ ಮುಖ ಮಾಡುತ್ತಿದ್ದಾರೆ. ಅಂದರೆ ಹಿಂದಿಯಲ್ಲಿ ಸಿನಿಮಾ ರಿಲೀಸ್ ಮಾಡಿ, ಉತ್ತರ ಭಾರತದಲ್ಲಿ ತಮ್ಮ ಸಿನಿಮಾಗಳಿಗೆ ಬೇಡಿಕೆ ಸೃಷ್ಟಿ ಮಾಡಿಕೊಳ್ಳುವ ಯೋಚನೆ ಇಳಿದಿದ್ದಾರೆ. ಅಲ್ಲು ಅರ್ಜುನ್ ನಂತರ ಅದೇ ದಾರಿಯಲ್ಲಿ ಸಾಗುವ ಯೋಚನೆಯಲ್ಲಿ ಇದ್ದಾರೆ ನಟ ಮಹೇಶ್‌ ಬಾಬು.

ಮಹೇಶ್‌ ಬಾಬು ಮುಂದಿನ ಸಿನಿಮಾಗಳು ತೆಲುಗಿನ ಜೊತೆಗೆ ಹಿಂದಿಯಲ್ಲೂ ಕೂಡ ರಿಲೀಸ್ ಆಗಲಿವೆಯಂತೆ. ಈ ವಿಚಾರ ಮಹೇಶ್‌ ಬಾಬು ಬಳಗದಿಂದ ಕೇಳಿ ಬರುತ್ತಿದೆ. ಮಹೇಶ್‌ ಬಾಬು ಅವರ ಮುಂದಿನ ಸಿನಿಮಾ ಸರ್ಕಾರು ವಾರಿ ಪಾಠ. ಈ ಚಿತ್ರ ತೆಲುಗಿನಲ್ಲಿ ಮಾತ್ರ ಬರಲಿದೆ ಎಂದು ಪ್ರಕಟ ಆಗಿದೆ.

'ಪುಷ್ಪ' ನಂತರ 'ಸರ್ಕಾರು ವಾರಿ ಪಾಠ' ಚಿತ್ರ ಹಿಂದಿಯಲ್ಲಿ ರಿಲೀಸ್!

'ಪುಷ್ಪ' ನಂತರ 'ಸರ್ಕಾರು ವಾರಿ ಪಾಠ' ಚಿತ್ರ ಹಿಂದಿಯಲ್ಲಿ ರಿಲೀಸ್!

ಪುಷ್ಪ ಸಿನಿಮಾ ಯಶಸ್ಸಿನ ಬಳಿಕ ಮಹೇಶ್‌ ಬಾಬು ಅವರ 'ಸರ್ಕಾರು ವಾರಿ ಪಾಠ' ಚಿತ್ರವನ್ನೂ ಕೂಡ ಹಿಂದಿಯಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದೆ. ಹಿಂದಿ ಪ್ರೇಕ್ಷಕರಿಗೆ ಸೌತ್‌ ಸಿನಿಮಾಗಳು ರುಚಿಸುತ್ತಿವೆ. ಹಾಗಾಗಿ ಧೈರ್ಯವಾಗಿ ಸೌತ್‌ ಸ್ಟಾರ್‌ ನಟರು ತಮ್ಮ ಸಿನಿಮಾಗಳನ್ನು ಹಿಂದಿಯಲ್ಲೂ ರಿಲೀಸ್‌ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅದೃಷ್ಟ ಪರೀಕ್ಷೆಗಿಳಿಯಲಿರುವ ಮಹೇಶ್‌ ಬಾಬು!

ಅದೃಷ್ಟ ಪರೀಕ್ಷೆಗಿಳಿಯಲಿರುವ ಮಹೇಶ್‌ ಬಾಬು!

ಪ್ರಿನ್ಸ್‌ ಮಹೇಶ್‌ ಬಾಬು ಅವರಿಗೂ ಕೂಡ ಸೌತ್‌ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇಲ್ಲಿ ರಿಲೀಸ್‌ ಆಗುವ ಅವರ ಬಹುತೇಕ ಸಿನಿಮಾಗಳು ಹಿಟ್‌ ಲಿಸ್ಟ್ ಸೇರುತ್ತವೆ, ಹಾಗಾಗಿ ನಾರ್ತ್ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲ್ಲು ನಟ ಮಹೇಶ್‌ ಬಾಬು ಮುಂದಾಗಿದ್ದಾರೆ. ಹಾಗಾಗಿ ಸರ್ಕಾರು ವಾರಿ ಪಾಠ ಚಿತ್ರ ತೆಲುಗಿನ ಜೊತೆಗೆ ಹಿಂದಿಯಲ್ಲೂ ಕೂಡ ಈ ಚಿತ್ರ ತೆರೆಗೆ ಬರಲಿದೆ.

ಸಾಲು, ಸಾಲು ಸಿನಿಮಾಗಳು ಹಿಂದಿಗೆ ಡಬ್ಬಿಂಗ್!

ಸಾಲು, ಸಾಲು ಸಿನಿಮಾಗಳು ಹಿಂದಿಗೆ ಡಬ್ಬಿಂಗ್!

ಪುಷ್ಪ ಚಿತ್ರದ ಬಳಿಕ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಟ ಪುರಮುಲೋ' ಚಿತ್ರ ಹಿಂದಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಿಂದಿ ಟ್ರೇಲರ್ ಕೂಡ ರಿಲೀಸ್ ಆಗಿದೆ. ಇದರೊಂದಿಗೆ ತೆಲುಗಿನ ಮತ್ತೊಂದು ಹಿಟ್‌ ಸಿನಿಮಾ 'ರಂಗಸ್ಥಳಂ' ಕೂಡ ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ರಾಮ್‌ ಚರಣ್ ಮತ್ತು ಸಮಂತಾ ಅಭಿನಯಿಸಿದ್ದು, ಸುಕುಮಾರ್‌ ನಿರ್ದೇಶನ ಮಾಡಿದ್ದಾರೆ.

ಸೌತ್‌ ಸಿನಿಮಾಗಳಿಗೆ ಬಾಲಿವುಡ್‌ನಲ್ಲಿ ಹೆಚ್ಚಿತು ಬೇಡಿಕೆ!

ಸೌತ್‌ ಸಿನಿಮಾಗಳಿಗೆ ಬಾಲಿವುಡ್‌ನಲ್ಲಿ ಹೆಚ್ಚಿತು ಬೇಡಿಕೆ!

ಪುಷ್ಪ ಸಿನಿಮಾ ಗೆದ್ದ ಬಳಿಕ, ಬಾಲಿವುಡ್‌ ವಿತರಕರಿಂದ ಸೌತ್‌ ಸಿನಿಮಾಗಿಗೆ ಬೇಡಿಕೆ ಹೆಚ್ಚಾಗಿದೆ. ದಕ್ಷಿಣದ ಸಿನಿಮಾಗಳಿಗೆ ಹೆಚ್ಚಿನ ಪ್ರೇಕ್ಷಕರು ಇದ್ದಾರೆ. ಸೌತ್‌ ಸಿನಿಮಾಗಳನ್ನು ಜನ ನೋಡುತ್ತಾರೆ ಎಂದು ತಿಳಿದ ಅಲ್ಲಿನ ವಿತರಕರು, ಪ್ರದರ್ಶಕರು ಸೌತ್‌ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿಸಿದೆ. ಈ ಮೂಲಕ ದಕ್ಷಿಣ ಸಿನಿಮಾಗಳಿಗೆ ನಾರ್ತ್‌ನಲ್ಲಿ ಹೊಸ ವೇದಿಕೆ ಸಿಕ್ಕಂತಾಗಿದೆ.

More from Filmibeat

English summary
Mahesh Babu's Sarkaru vaari paata Movie will Dub To Hindi; Mahesh Babu Taking Chance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X