For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ: ಏನಂತಾರೆ ಪ್ರಿನ್ಸ್ ಫ್ಯಾನ್?

  |

  ಟಾಲಿವುಡ್ ಸೂ‍ಪರ್‌ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳಿಗೆ ಒಂದೊಂದೇ ಕಹಿ ಸುದ್ದಿ ಎದುರಾಗುತ್ತಿದೆ. ಇತ್ತೀಚೆಗೆಷ್ಟೇ ಮಹೇಶ್ ಬಾಬು ಸಹೋದರ ರಮೇಶ್ ಬಾಬು ನಿಧನ ಹೊಂದಿದ್ದರು. ಆ ನೋವಿನಿಂದಲೇ ಮಹೇಶ್ ಬಾಬು ಕುಟುಂಬ ಇನ್ನೂ ಹೊರಬಂದಿಲ್ಲ. ಇನ್ನೊಂದು ಕಡೆ ಮಹೇಶ್ ಬಾಬು ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದು, ಕ್ವಾರಂಟೈನ್‌ನಲ್ಲಿ ಇದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಕಹಿ ಸುದ್ದಿ ಎದುರಾಗಿದೆ.

  ಟಾಲಿವುಡ್‌ನಲ್ಲಿ ಮಹೇಶ್ ಬಾಬು ಅಭಿಮಾನಿಗಳ ದೊಡ್ಡ ಆರ್ಮಿನೇ ಇದೆ. ಸೂಪರ್‌ಸ್ಟಾರ್ ನಟಿಸುವ ಪ್ರತಿಯೊಂದು ಸಿನಿಮಾದ ಆರಂಭ ಹಾಗೂ ಬಿಡುಗಡೆಯ ಮೇಲೆ ಕಣ್ಣಿಟ್ಟಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಿನ್ಸ್ ಸಿನಿಮಾಗಳ ಮಾಹಿತಿ ಹಂಚಿಕೊಳ್ಳುತ್ತಾರೆ. ಆದರೆ, ಕಳೆದ ಒಂದು ವರ್ಷದಿಂದ ಮಹೇಶ್ ಬಾಬು ಸಿನಿಮಾ ಬಿಡುಗಡೆಯಾಗಿಲ್ಲ. ಕಳೆದೊಂದು ವಾರದಿಂದ ಪ್ರಿನ್ಸ್ ಕುಟುಂಬದ ವಿಷಯ ಆತಂಕ ಸೃಷ್ಟಿಸಿದ್ದರೆ. ಈ ಬಾರಿ 'ಸರ್ಕಾರು ವಾರಿ ಪಾಟ' ನಿರಾಸೆ ಮೂಡಿಸಿದೆ.

  ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೆ ನಿರಾಸೆ

  ಮಹೇಶ್ ಬಾಬು ಅಭಿಮಾನಿಗಳಿಗೆ ಮತ್ತೆ ನಿರಾಸೆ

  ಟಾಲಿವುಡ್ ಸೂಪರ್‌ಸ್ಟಾರ್ ಅಭಿಮಾನಿಗಳು 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆಗೆ ಕಾದು ಕೂತಿದ್ದಾರೆ. ಆದರೆ, ಯಾಕೆ ಈ ಸಿನಿಮಾಗೆ ಬಿಡುಗಡೆ ಭಾಗ್ಯ ಸದ್ಯಕ್ಕಿಲ್ಲ ಅಂತ ಅನಿಸುತ್ತಿದೆ. ಟಾಲಿವುಡ್ ಮೂಲಗಳ ಪ್ರಕಾರ ಈ ಸಿನಿಮಾ ಮತ್ತೆ ಪೋಸ್ಟ್‌ಪೋನ್ ಆಗಿದೆ. ಕೆಲವು ದಿನಗಳ ಹಿಂದೆ ಚಿತ್ರತಂಡ ಎರಡನೇ ರಿಲೀಸ್ ಡೇಟ್ ಘೋಷಣೆ ಮಾಡಿತ್ತು. ಏಪ್ರಿಲ್ 01ರಂದು ಸಿನಿಮಾ ರಿಲೀಸ್ ಆಗೇ ಆಗುತ್ತೆ ಎಂದು ಹೇಳಿದ್ದರು. ಆದ್ರೀಗ ಏಪ್ರಿಲ್‌ನಲ್ಲೂ ಸಿನಿಮಾ ಬಿಡುಗಡೆಯಾಗುವುದು ಅನುಮಾನ ಎನ್ನಲಾಗುತ್ತಿದ್ದು ಎರಡು ಕಾರಣ ನೀಡಲಾಗುತ್ತಿದೆ.

  ಪ್ರಿನ್ಸ್‌ಗೆ ಕೊರೊನಾ ಶೂಟಿಂಗ್ ಮುಂದೂಡಿಕೆ

  ಪ್ರಿನ್ಸ್‌ಗೆ ಕೊರೊನಾ ಶೂಟಿಂಗ್ ಮುಂದೂಡಿಕೆ

  ಇತ್ತೀಚೆಗೆ ಮಹೇಶ್ ಬಾಬು ದುಬೈಗೆ ಪಯಣ ಬೆಳೆಸಿದ್ದರು. ಇವರೊಂದಿಗೆ ಟಿಟೌನ್ ನಿರ್ದೇಶಕ ತ್ರಿವಿಕ್ರಮ್ ಹಾಗೂ ಸಂಗೀತ ನಿರ್ದೇಶಕ ತಮನ್ ಕೂಡ ತೆರಳಿದ್ದರು. ಅಲ್ಲಿಂದ ಟಾಲಿವುಡ್ ಪ್ರಿನ್ಸ್ ಹಿಂತಿರುಗುತ್ತಿದ್ದಂತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸಿನಿಮಾದ ನಿರ್ದೇಶಕ ಪುರುಷೋತ್ತಮ್ 'ಸರ್ಕಾರು ವಾರಿ ಪಾಟ' ಚಿತ್ರವನ್ನು ಮುಂದೂಡಿದ್ದಾರೆ. ಶೂಟಿಂಗ್ ನಿಲ್ಲಿಸಿದ್ದು, ಪೋಸ್ಟ್‌ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

  ಆಂಧ್ರದಲ್ಲಿ ಕೋವಿಡ್ ಆತಂಕ

  ಆಂಧ್ರದಲ್ಲಿ ಕೋವಿಡ್ ಆತಂಕ

  ಒಂದು ಕಡೆ ಮಹೇಶ್ ಬಾಬುಗೆ ಕೊರೊನಾ. ಇನ್ನೊಂದು ಕಡೆ ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ 'ಸರ್ಕಾರು ವಾರು ಪಾಟ' ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಹಾಗಲಾಗಿದೆಯಂತೆ. ಬೇರೆ ಕಡೆ ಶೂಟಿಂಗ್‌ಗೆ ಮುಂದಾದರೂ ಅಲ್ಲೂ ಕೊರೊನಾ ಸೋಂಕಿನ ಭೀತಿ ಇರುವುದರಿಂದ ಶೂಟಿಂಗ್ ನಿಂತಿದೆ ಎನ್ನಲಾಗಿದೆ. ಹೀಗಾಗಿ ಏಪ್ರಿಲ್ 01ರಂದು ಈ ಸಿನಿಮಾ ಮಾಡಲು ಸಾಧ್ಯವೇ ಇಲ್ಲವೆಂದು ಚಿತ್ರತಂಡ ನಿರ್ಧರಿಸಿದ್ದು, ಮತ್ತೆ ಸಿನಿಮಾ ಮುಂದೂಡಿದೆ ಎನ್ನಲಾಗಿದೆ.

  ಸಂಕ್ರಾಂತಿಗೆ ರಿಲೀಸ್ ಆಗಬೇಕಿತ್ತು ಸಿನಿಮಾ

  ಸಂಕ್ರಾಂತಿಗೆ ರಿಲೀಸ್ ಆಗಬೇಕಿತ್ತು ಸಿನಿಮಾ

  ಇದೇ ಸಂಕ್ರಾಂತಿಗೆ ಜನವರಿ 13ರಂದು 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ರಾಜಮೌಳಿಯ RRR, ಪ್ರಭಾಸ್ 'ರಾಧೆ ಶ್ಯಾಮ್', ಪವನ್ ಕಲ್ಯಾಣ್ 'ಭೀಮ್ಲಾ ನಾಯಕ್' ಸಿನಿಮಾಗಳು ಸಂಕ್ರಾಂತಿ ರಿಲೀಸ್‌ಗೆ ಕಾದು ಕೂತಿದ್ದವು. ಹೀಗಾಗಿ ಏಪ್ರಿಲ್ 01 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ನಿರ್ಧರಿಸಿತ್ತು. ಆದ್ರೀಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಂದ ಏಪ್ರಿಲ್‌ಗೂ ರಿಲೀಸ್ ಮಾಡುವುದು ಬೇಡವೆಂದು ತಂಡ ನಿರ್ಧರಿಸಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ.

  ಸಂಕ್ರಾಂತಿ ಹಬ್ಬ ಮಹೇಶ್ ಬಾಬುಗೆ ಅದೃಷ್ಟ

  ಸಂಕ್ರಾಂತಿ ಹಬ್ಬ ಮಹೇಶ್ ಬಾಬುಗೆ ಅದೃಷ್ಟ

  ಟಾಲಿವುಡ್‌ಗೆ ಸಂಕ್ರಾಂತಿ ಹೇಗೆ ಲಕ್ಕಿನೋ ಹಾಗೇ ಮಹೇಶ್ ಬಾಬುಗೂ ಅದೃಷ್ಟದ ಹಬ್ಬ. ಸಂಕ್ರಾಂತಿ ವೇಳೆ ರಿಲೀಸ್ ಆದ ಮಹೇಶ್ ಬಾಬು ಸಿನಿಮಾಗಳಿಗೆ ಸಕ್ಸಸ್ ಸಿಕ್ಕಿದೆ. ಕಳೆದ ವರ್ಷ 'ಸರಿಲೇರು ನೀಕೆವ್ವರು' ಚಿತ್ರ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಕೂಡ ಚಂದಿ ಉಡಾಯಿಸಿತ್ತು. ಹೀಗಾಗಿ ಇದೇ ಸಂಕ್ರಾಂತಿಗೇ 'ಸರ್ಕಾರು ವಾರಿ ಪಾಟ' ಬಿಡುಗಡೆ ಮಾಡಬೇಕು ಎಂದು ಶತಪ್ರಯತ್ನ ನಡೆಸಿದ್ದರು. ಆದರೆ, ಸಿನಿಮಾ ಶೂಟಿಂಗ್ ವಿಳಂಬದಿಂದ ಇದು ಸಾಧ್ಯವಾಗಿರಲಿಲ್ಲ.

  English summary
  Mahesh Babu and Keerti Suresh Starrer Sarkaru Vaari Paata postponed again. Tollywood sources says that due to increase covid numbers movie will not possible to release on April 1st.
  Wednesday, January 12, 2022, 14:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X