'ಕಿಸ್' ಬೆಡಗಿಯ ಐಟಂ ಸಾಂಗ್? 'ಕಜರಾರೇ ಕಜರಾರೇ' ಎಂದು ಕುಣಿತ್ತಾರಾ ಶ್ರೀಲೀಲಾ?

ನಟಿ ಶ್ರೀಲೀಲಾ ಐಟಂ ಸಾಂಗ್‌ಗೆ ಹೆಜ್ಜೆ ಹಾಕುತ್ತಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಕನ್ನಡದ 'ಕಿಸ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬೆಡಗಿ 'ಪೆಳ್ಳಿ ಸಂದD' ಚಿತ್ರದಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೂ ಪರಿಚಿತರಾದರು. ತೆಲುಗಿನ ಸ್ಟಾರ್ ನಟರ ಜೊತೆ ನಟಿಸೋ ಅವಕಾಶಗಳು ಸಿಗುತ್ತಿದೆ. ಈಗ ಸ್ಪೆಷಲ್ ಸಾಂಗ್‌ವೊಂದಕ್ಕೆ ಶ್ರೀ ಹೆಜ್ಜೆ ಹಾಕ್ತಾರೆ ಎನ್ನಲಾಗ್ತಿದೆ.

ಒಂದ್ಕಡೆ ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ನಟ ಪವನ್ ಕಲ್ಯಾಣ್ ಮತ್ತೊಂದು ಕಡೆ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 3 ದಿನಗಳ ಹಿಂದೆ ತಮಿಳಿನ 'ವಿನೋದಯ ಸಿತಂ' ರೀಮೆಕ್‌ಗೆ ಮುಹೂರ್ತ ನೆರವೇರಿತ್ತು. ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಜೊತೆ ಸಾಯಿ ಧರಮ್ ತೇಜ್ ಕೂಡ ನಟಿಸ್ತಿದ್ದಾರೆ. ಮೂಲ ಚಿತ್ರ ಕಟ್ಟಿಕೊಟ್ಟಿದ್ದ ನಿರ್ದೇಶಕ ಸಮುದ್ರ ಖನಿ ತೆಲುಗು ರೀಮೆಕ್‌ಗೂ ಆಕ್ಷನ್ ಕಟ್ ಹೇಳ್ತಿದ್ದಾರೆ.

makers-are-planning-to-rope-sreeleela-for-a-special-song-in-pawan-kalyan-s-vinodhaya-sitham-remake

ಇನ್ನು ಹೆಸರಿಡದ ಈ ಚಿತ್ರಕ್ಕಾಗಿ ಪವನ್ ಕಲ್ಯಾಣ್ 25 ದಿನ ಕಾಲ್‌ಶೀಟ್ ಕೊಟ್ಟಿದ್ದಾರೆ. 4 ಸಿನಿಮಾಗಳು ಪವರ್ ಸ್ಟಾರ್ ಕೈಯಲ್ಲಿದ್ದು ಎಲ್ಲವನ್ನು ಬೇಗ ಮುಗಿಸಬೇಕು ಎಂದುಕೊಂಡಿದ್ದಾರೆ. 'ವಿನೋದಯ ಸಿತಂ' ಚಿತ್ರದಲ್ಲಿ ಸಮುದ್ರ ಖನಿ ಹಾಗೂ ತಂಬಿ ರಾಮಯ್ಯ ನಟಿಸಿದ್ದರು. ಅದೇ ಕಥೆಯನ್ನು ಕೊಂಚ ಬದಲಿಸಿ ತೆಲುಗು ಪ್ರೇಕ್ಷಕರು ಮುಂದೆ ಇಡುತ್ತಿದ್ದಾರೆ. ಇನ್ನು ಚಿತ್ರಕ್ಕಾಗಿ ಒಂದು ಸ್ಪೆಷಲ್ ಸಾಂಗ್ ಕೂಡ ಪ್ಲ್ಯಾನ್ ಮಾಡ್ತಿದ್ದಾರೆ. ಆ ಸಾಂಗ್‌ನಲ್ಲಿ ಶ್ರೀಲೀಲಾ ಕುಣಿತ್ತಾರೆ ಎನ್ನಲಾಗ್ತಿದೆ.

makers-are-planning-to-rope-sreeleela-for-a-special-song-in-pawan-kalyan-s-vinodhaya-sitham-remake

ಬಾಲಿವುಡ್‌ನ 'ಬಂಟಿ ಔರ್ ಬಬ್ಲಿ' ಚಿತ್ರದ 'ಕಜರಾರೇ ಕಜರಾರೇ' ಸ್ಪೆಷಲ್ ಸಾಂಗ್‌ಗೆ ಐಶ್ವರ್ಯ ಹೆಜ್ಜೆ ಹಾಕಿದ್ದರು. ಈ ಹಾಡನ್ನು ಬಾಲಿವುಡ್ ಸಿನಿರಸಿಕರು ಇನ್ನು ಮರೆತ್ತಿಲ್ಲ. ಇದೇ ಹಾಡನ್ನು ರೀಮಿಕ್ಸ್ ಮಾಡಿ ಪವನ್ ಕಲ್ಯಾಣ್ ಚಿತ್ರಕ್ಕೆ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೀತಿದೆ. ಬಿಂದಾಸ್ ಸಾಂಗ್‌ಗೆ ಶ್ರೀಲೀಲಾ ಅಷ್ಟೇ ಬಿಂದಾಸ್ ಆಗಿ ಕುಣಿತ್ತಾರೆ ಎನ್ನಲಾಗ್ತಿದೆ. ಶ್ರೀಲೀಲಾ ಟಾಲಿವುಡ್‌ನಲ್ಲಿ ಫುಲ್ ಶೈನ್ ಆಗ್ತಿದ್ದಾರೆ. ಆಕೆಯ ಡ್ಯಾನ್ಸ್‌ಗೂ ಭಾರೀ ಕ್ರೇಜ್ ಇದೆ.

ರವಿತೇಜಾ ಜೊತೆ ನಟಿಸಿದ 'ಧಮಾಕ' ಚಿತ್ರದಲ್ಲೂ ಶ್ರೀ ಡ್ಯಾನ್ಸ್ ಹೈಲೆಟ್ ಆಗಿತ್ತು. ಹಾಗಾಗಿ ಪವನ್ ಕಲ್ಯಾಣ್ ಜೊತೆ 'ಕಿಸ್‌' ಬೆಡಗಿ ಹೆಜ್ಜೆ ಹಾಕಿದ್ರೆ, ಹಿಟ್ ಆಗೋದು ಗ್ಯಾರೆಂಟಿ. ಇದರಿಂದ ಚಿತ್ರಕ್ಕೆ ಒಳ್ಳೆ ಕ್ರೇಜ್ ಬರುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ. ಸದ್ಯ ಇದು ಬರೀ ಅಂತೆಕಂತೆ ಸುದ್ದಿ ಅಷ್ಟೆ. ಇದರಲ್ಲಿ ಎಷ್ಟು ನಿಜ ಇದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಪವರ್ ಸ್ಟಾರ್ ಜೊತೆ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ರೆ, ಶ್ರೀಲೀಲಾಗೆ ಕ್ರೇಜ್ ಹೆಚ್ಚಾಗೋದ್ರಲ್ಲಿ ಎರಡು ಮಾತಿಲ್ಲ.

More from Filmibeat

English summary
Makers are planning to rope Sreeleela for a Special song in Pawan Kalyan's vinodhaya sitham Remake. Mega Hero Sai Dharam Tej is playing a key role in the movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X