ಅಲ್ಲು ಅರ್ಜುನ್- ಅಟ್ಲಿ ಕ್ರೇಜಿ ಪ್ರಾಜೆಕ್ಟ್‌ಗೆ ಟೈಟಲ್ ಸಿಕ್ಕೇಬಿಡ್ತಾ?

ಅಟ್ಲಿ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟನೆಯ ಸಿನಿಮಾ ಘೋಷಣೆಯಾಗಿದೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಯಾವುದೇ ಸಿನಿಮಾ ಆಗಿದ್ದರೂ ಟೈಟಲ್ ಬಹಳ ಮುಖ್ಯ. ಕಥೆಗೆ ಸೂಕ್ತವಾದ, ಬಹಳ ಕ್ಯಾಚಿಯಾದ ಹೆಸರನ್ನೇ ಅದಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ಕೆಲವರು ಮೊದಲೇ ಟೈಟಲ್ ಅನೌನ್ಸ್ ಮಾಡಿಬಿಟ್ಟರೆ ಮತ್ತೆ ಕೆಲವರು ನಿಧಾನವಾಗಿ ಹುಡುಕಿ ಫಿಕ್ಸ್ ಮಾಡುತ್ತಿದ್ದಾರೆ. ಅಂದಹಾಗೆ ಇದು ಅಲ್ಲು ಅರ್ಜುನ್ ನಟನೆಯ 22ನೇ ಸಿನಿಮಾ. ಅದೇ ರೀತಿ ಅಟ್ಲಿ ನಿರ್ದೇಶನದ 6ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ AA22xA6 ಎಂಬ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ.

Makers considering two titles for Allu Arjun and Atlee s AA22xA6

ಸದ್ಯ ಚಿತ್ರದ ಟೈಟಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೀತಿದೆ. ಈಗಾಗಲೇ ಎರಡು ಟೈಟಲ್‌ಗಳನ್ನು ಅಟ್ಲಿ ಪರಿಶೀಲನೆ ನಡೆಸುತ್ತಿದ್ದು ಶೀಘ್ರದಲ್ಲೇ ಟೈಟಲ್ ಘೋಷಣೆ ಆಗುತ್ತದೆ ಎನ್ನಲಾಗ್ತಿದೆ. 'ಪುಷ್ಪ'-2 ಬಳಿಕ ವಾಟ್ ನೆಕ್ಸ್ಟ್ ಎನ್ನುತ್ತಿದ್ದವರಿಗೆ ಹುಟ್ಟುಹಬ್ಬದ ದಿನ ಬನ್ನಿ ಸರ್‌ಪ್ರೈಸ್ ಕೊಟ್ಟಿದ್ದರು. ಅಟ್ಲಿ ಕಾಂಬಿನೇಷನ್‌ನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ಘೋಷಿಸಿದ್ದರು.

ಅಚ್ಚರಿ ಎನ್ನುವಂತೆ ತಮಿಳು ಚಿತ್ರ ನಿರ್ಮಾಣ ಸಂಸ್ಥೆ AA22xA6 ಚಿತ್ರಕ್ಕೆ ಹಣ ಹೂಡುತ್ತಿದೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಭಾರೀ ಮೊತ್ತದ ಸಂಭಾವನೆಯನ್ನು ಈ ಚಿತ್ರಕ್ಕಾಗಿ ಪಡೆಯುತ್ತಿದ್ದಾರೆ. ಸದ್ಯ ಭಾರತೀಯ ಚಿತ್ರರಂಗ ಪ್ಯಾನ್ ಇಂಡಿಯಾ ಬಿಟ್ಟು ಪ್ಯಾನ್ ವರ್ಲ್ಡ್ ಸಿನಿಮಾಗಳತ್ತ ಹೊರಳುತ್ತಿದೆ. ಯಶ್ ನಟನೆಯ 'ಟಾಕ್ಸಿಕ್', ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಹಾಗೂ ರಾಜಮೌಳಿ- ಮಹೇಶ್ ಬಾಬು ಸಿನಿಮಾಗಳನ್ನು ವಿದೇಶದ ಪ್ರೇಕ್ಷಕರನ್ನು ಟಾರ್ಗೆಟ್ ಮಾಡಿ ಕಟ್ಟಿಕೊಡಲಾಗುತ್ತಿದೆ. ಇದೇ ಲಿಸ್ಟ್‌ಗೆ ಅಲ್ಲು-ಅಟ್ಲಿ ಸಿನಿಮಾ ಸೇರಿಕೊಳ್ಳಲಿದೆ.

ಈಗಾಗಲೇ ಹಾಲಿವುಡ್ ಗ್ರಾಫಿಕ್ಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸೈನ್ಸ್ ಫಿಕ್ಷನ್ ಸೂಪರ್ ಹೀರೊ ರೀತಿಯ ಕಥೆಯನ್ನು AA22xA6 ಚಿತ್ರದಲ್ಲಿ ಹೇಳಲಾಗುತ್ತಿದೆ. ಅದಕ್ಕಾಗಿ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಹಾಲಿವುಡ್ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ನಟಿಸಲಿದ್ದಾರೆ. ಮೃಣಾಲ್ ಠಾಕೂರ್, ಜಾನ್ವಿ ಕಪೂರ್, ಅನನ್ಯಾ ಪಾಂಡೆ ಹೆಸರು ನಾಯಕಿ ಪಾತ್ರಕ್ಕೆ ಕೇಳಿಬರ್ತಿದೆ.

ಇದೀಗ ಸಿನಿಮಾ ಟೈಟಲ್ ಏನು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. 'ಐಕಾನ್' ಅಥವಾ 'ಸೂಪರ್ ಹೀರೊ' ಈ ಎರಡೂ ಟೈಟಲ್‌ಗಳನ್ನು ಅಟ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾವುದಾದರೂ ಒಂದು ಫೈನಲ್ ಆಗಬಹುದು ಎನ್ನಲಾಗ್ತಿದೆ. ಈಗಾಗಲೇ ಅಲ್ಲು ಅರ್ಜುನ್‌ಗೆ ಅಭಿಮಾನಿಗಳು 'ಐಕಾನ್' ಸ್ಟಾರ್ ಎಂಬ ಬಿರುದು ಕೊಟ್ಟಿದ್ದಾರೆ. ಹಾಗಾಗಿ ಇದೇ ಟೈಟಲ್ ಫಿಕ್ಸ್ ಆಗುತ್ತದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. 1500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಚಿತ್ರ ಗಮನ ಸೆಳೆದಿತ್ತು. ಮತ್ತೊಮ್ಮೆ ಪುಷ್ಪರಾಜ್ ಆಗಿ ಸ್ಟೈಲಿಶ್ ಸ್ಟಾರ್ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಕರ್ನಾಟಕದಲ್ಲಿ ಕೂಡ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಹಾಗಾಗಿ ಅವರ ಮುಂದಿನ ಸಿನಿಮಾ ಬಗ್ಗೆ ಬಹಳ ನಿರೀಕ್ಷೆಯಿದೆ.

ಇನ್ನು ಈ ಚಿತ್ರಕ್ಕೆ ಸಾಯಿ ಅಭಯಂಕರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಹೆಚ್ಚು ಕಮ್ಮಿ 2 ವರ್ಷ ಬೇಕಾಗಬಹುದು. ಆಧುನಿಕ ತಂತ್ರಜ್ಞಾನ ಬಳಸಿ ಹೊಸ ಪ್ರಪಂಚವನ್ನೇ ಕಟ್ಟಿಕೊಡಲು ಅಟ್ಲಿ ಮುಂದಾಗಿದ್ದಾರೆ.

More from Filmibeat

English summary
AA22xA6; Interesting title in consideration for Allu Arjun and Atlee film
Read more about: allu arjun tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X