ಮತ್ತೆ ಚಾಲೆಂಜಿಂಗ್‌ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ? ಹೊಸ ಸಿನಿಮಾ ಹೀರೊ ಯಾರು? ಟೈಟಲ್ ಏನು?

ಸದ್ದಿಲ್ಲದೇ ಅನುಷ್ಕಾ ಶೆಟ್ಟಿ ನಟನೆಯ ಹೊಸ ಸಿನಿಮಾ ಚಿತ್ರೀಕರಣ ನಡೀತಿದೆ. ಒಡಿಶಾದಲ್ಲಿ ಕಳೆದೊಂದು ವಾರದಿಂದ ಸಿನಿಮಾ ಸೆರೆಹಿಡಿಯುವ ಕೆಲಸ ನಡೀತಿದೆ. ಸ್ವೀಟಿ ಜೊತೆಗೆ ರಮ್ಯಾಕೃಷ್ಣ ಸಹ ಶೂಟಿಂಗ್‌ನಲ್ಲಿ ಭಾಗಿ ಆಗಿದ್ದಾರೆ. ಕ್ರಿಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಮಿಸ್ ಶೆಟ್ಟಿ & ಮಿಸ್ಟರ್ ಪೊಲಿಶೆಟ್ಟಿ' ಬಳಿಕ ಅನುಷ್ಕಾ ಶೆಟ್ಟಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. 'ಭಾಗಮತಿ- 2' ಚಿತ್ರದಲ್ಲಿ ಬಣ್ಣ ಹಚ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದು ನಿಜವಾಗಲಿಲ್ಲ. ಇದೀಗ ಕ್ರಿಶ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರದಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ.

Makers finalised this title for Anushka shetty and Krishs new movie

ಈ ಹಿಂದೆ ಕ್ರಿಶ್ ನಿರ್ದೇಶನದ 'ವೇದಂ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದರು. ವೇಶ್ಯೆ ಸರೋಜಾ ಪಾತ್ರದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ ಕ್ರಿಶ್ ಹಾಗೂ ಸ್ವೀಟಿ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಆ ಬಳಿಕ ಇಬ್ಬರೂ ಮತ್ತೆ ಒಟ್ಟಿಗೆ ಕೆಲಸ ಮಾಡಲ್ಲ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಸೈಲೆಂಟ್ ಆಗಿ ಹೊಸ ಚಿತ್ರಕ್ಕೆ ಜೊತೆಯಾಗಿದ್ದಾರೆ.

ಕ್ರಿಶ್ ಜೊತೆಗೆ ಮತ್ತೆ ಸಿನಿಮಾ ಮಾಡುವ ವಿಚಾರ ಸುಖಾಸುಮ್ಮನೆ ಚರ್ಚೆಗೆ ಗ್ರಾಸವಾಗುತ್ತದೆ ಎನ್ನುವ ಕಾರಣಕ್ಕೆ ಗುಟ್ಟಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನುವ ಗುಮಾನಿಯೂ ಕೆಲವರಿಗಿದೆ. ಸದ್ಯ ಒಡಿಶಾದಲ್ಲಿ ಚಿತ್ರೀಕರಣ ನಡೆಯುತ್ತಿರುವ ಸಿನಿಮಾ ಹೆಸರೇನು? ಹೀರೊ ಯಾರು? ಕಥೆಯೇನು? ಏನು ಎನ್ನುವ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.

ಕ್ರಿಶ್- ಅನುಷ್ಕಾ ಶೆಟ್ಟಿ ಹೊಸ ಚಿತ್ರಕ್ಕೆ 'ಶೀಲವತಿ' ಎನ್ನುವ ಟೈಟಲ್ ಪರಿಶೀಲನೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಆಕೆ ವೇಶ್ಯೆಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಶುರುವಾಗಿದೆ. ಒಡಿಶಾದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಅದೇ ಕಾರಣಕ್ಕೆ ಅಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಪ್ರಭಾಸ್ ಹೋಂ ಬ್ಯಾನರ್‌ ಯುವಿ ಕ್ರಿಯೇಷನ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇ ಹಿಂದೆ ಇದೇ ಸಂಸ್ಥೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರಕ್ಕೆ ಬಂಡವಾಳ ಹೂಡಿತ್ತು. ಕಳೆದ ವರ್ಷ ತೆರೆಗೆ ಕಂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲಲಿಲ್ಲ.

ಒಡಿಶಾದ ಕೋರಾಪುಟ್ ಜಿಲ್ಲೆಯ ಡಿಯೋಮಾಲಿನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ಜೇಪೋರ್ ಪಟ್ಟಣದ ಮುಖ್ಯ ರಸ್ತೆ, ಸೂರ್ಯ ಮಹಲ್, ಜಗನ್ನಾಥ ಸಾಗರ್ ಬಳಿಯ ಉದ್ಯಾನವನದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ ಎನ್ನಲಾಗುತ್ತಿದೆ. ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕೆ ಇರಲಿದೆ.

Makers finalised this title for Anushka shetty and Krishs new movie

'ಬಾಹುಬಲಿ' ಸರಣಿ ಬಳಿಕ ಕರಾವಳಿ ಚೆಲುವೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. 'ಸೈಜ್ ಜೀರೊ' ಚಿತ್ರಕ್ಕೆ ತೂಕ ಹೆಚ್ಚಿಸಿಕೊಂಡು ಬಳಿಕ ಮೊದಲಿನಂತಾಗದೇ ಸ್ವೀಟಿಗೆ ಅವಕಾಶಗಳು ಕಮ್ಮಿ ಆಯಿತು ಎನ್ನುವವರು ಇದ್ದಾರೆ. ಆದರೆ ತಾನಾಗಿಯೇ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾಗಿ ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದರು.

ವರ್ಷಾಂತ್ಯಕ್ಕೆ ಕ್ರಿಶ್- ಅನುಷ್ಕಾ ಶೆಟ್ಟಿ ಕಾಂಬಿನೇಷನ್‌ 2ನೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿಲ್ಲ.

More from Filmibeat

English summary
Interesting titles under consideration for Anushka shetty's next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X