For Quick Alerts
  ALLOW NOTIFICATIONS  
  For Daily Alerts

  ಬಾಹುಬಲಿ ವಿರುದ್ಧ ರಂಗಿತರಂಗ ತಂಡದಿಂದ ದೂರು

  By ಜೇಮ್ಸ್ ಮಾರ್ಟಿನ್
  |

  ಇಡೀ ವಿಶ್ವವೇ ಎದುರು ನೋಡುತ್ತಿರುವ ಸಿನಿಮಾ ಎನಿಸಿಕೊಂಡಿರುವ ಬಹು ಭಾಷಾ ಚಿತ್ರ 'ಬಾಹುಬಲಿ' ಬಿಡುಗಡೆಯಿಂದ ಕನ್ನಡದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಬಾಹುಬಲಿ ಎಂಬ ಬಿಗ್ ಬಜೆಟ್ ಚಿತ್ರದ ಮುಂದೆ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿಗೆ ಮಲ್ಟಿಪ್ಲೆಕ್ಸ್ ಮಾಲೀಕರು ದೂಡುತ್ತಿದ್ದಾರೆ. ಪರಿಸ್ಥಿತಿಯ ಅರಿವಿದ್ದರೂ ಒಗ್ಗಟ್ಟಿಲ್ಲದ ಕನ್ನಡ ಚಿತ್ರರಂಗ ಇಂಗು ತಿಂದ ಮಂಗನಂತಾಗಿದೆ.

  ಕನ್ನಡ ಚಿತ್ರರಂಗದ ನಿರ್ಮಾಪಕರೇ ಬಾಹುಬಲಿ ಚಿತ್ರದ ವಿತರಣೆ ಹಕ್ಕು ಪಡೆದಿದ್ದಾರೆ. ಮಲ್ಟಿಪ್ಲೆಕ್ಸ್ ಗಳು ಮೊದಲಿನಿಂದಲೂ ಮಲತಾಯಿ ಧೋರಣೆ ಅನುಸರಿಸುತ್ತಾ ಕನ್ನಡ ಚಿತ್ರಗಳಿಗೆ ಹೆಚ್ಚಿನ ಸ್ಕ್ರೀನ್ ಹಂಚಲು ಹಿಂದು ಮುಂದು ನೋಡುತ್ತಿವೆ. ಚಿತ್ರ ಚೆನ್ನಾಗಿ ಓಡುತ್ತಿದ್ದು, ದುಡ್ಡು ಮಾಡುವಾಗಲೇ ತೊಂದರೆ ಮಾಡಿದರೆ ಬೆಳೆವಣಿಗೆ ಕಾಣಬೇಕಾಗಿರುವ ನಮ್ಮ ಪ್ರತಿಭೆಯನ್ನು ಮೊಳಕೆಯಲ್ಲೇ ಚಿವುಟಿ ಹಾಕಿದ್ದಂತಾಗುವುದಿಲ್ಲವೇ? [ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಬಾಹುಬಲಿ]

  ಕೆಎಫ್ ಸಿಸಿಗೆ ದೂರು: ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಂದ ಅನ್ಯಾಯವಾಗಿ ರಂಗಿತರಂಗ ಚಿತ್ರವನ್ನು ಎತ್ತಂಗಡಿ ಮಾಡಿ ಬಾಹುಬಲಿಗೆ ಮಣೆ ಹಾಕಿರುವುದನ್ನು ಖಂಡಿಸಿ ಕ್ರಮ ಜರುಗಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ರಂಗಿತರಂಗದ ನಿರ್ಮಾಪಕರಲ್ಲಿ ಒಬ್ಬರಾದ ಪ್ರಕಾಶ್ ಅವರು ದೂರು ನೀಡಿದ್ದಾರೆ.

  ನಿರ್ದೇಶಕ ಅನೂಪ್ ಅಳಲು: ನಿರ್ದೇಶಕ ಅನೂಪ್ ಭಂಡಾರಿ ಅವರು ಫಿಲ್ಮಿ ಬೀಟ್ ಕನ್ನಡ ಪ್ರತಿನಿಧಿ ಜತೆ ಮಾತನಾಡುತ್ತಾ, ನಾವು ಬಾಹುಬಲಿ ಚಿತ್ರದ ವಿರೋಧಿಗಳಲ್ಲ. [ರಂಗಿತರಂಗ' ಚಿತ್ರಕ್ಕೆ ವಿಮರ್ಶಕರು ಜೈ ಅಂದ್ರಾ?]

  ಚೆನ್ನಾಗಿ ಓಡುತ್ತಿರುವ ಕನ್ನಡ ಚಿತ್ರವನ್ನು ನಮ್ಮವರೇ ಕಡೆಗಣಿಸಿದರೆ ನಾವು ಏನು ಮಾಡಬೇಕು ಹೇಳಿ, ಪಿವಿಆರ್ ಸೇರಿದಂತೆ ಪ್ರಮುಖ ಮಲ್ಟಿಪ್ಲೆಕ್ಸ್ ಗಳಲ್ಲಿ ರಂಗಿತರಂಗದ ದೊಡ್ಡ ಪೋಸ್ಟರ್ ಹಾಕಿ ಪ್ರಚಾರ ನೀಡುತ್ತಿಲ್ಲ. ಅದರೂ ಜನರ ಬೆಂಬಲದಿಂದ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದರೆ, ಈ ರೀತಿ ಶೋಗಳನ್ನು ರದ್ದು ಪಡಿಸುವುದು ಬೇರೆ ಭಾಷೆ ಚಿತ್ರಕ್ಕೆ ಮಹತ್ವ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

  ಕೆಎಫ್ ಸಿಸಿ ಕದ ತಟ್ಟಿದ ರಂಗಿತರಂಗದ ನಿರ್ಮಾಪಕ

  ಕೆಎಫ್ ಸಿಸಿ ಕದ ತಟ್ಟಿದ ರಂಗಿತರಂಗದ ನಿರ್ಮಾಪಕ

  ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಂದ ಅನ್ಯಾಯವಾಗಿ ರಂಗಿತರಂಗ ಚಿತ್ರವನ್ನು ಎತ್ತಂಗಡಿ ಮಾಡಿ ಬಾಹುಬಲಿಗೆ ಮಣೆ ಹಾಕಿರುವುದನ್ನು ಖಂಡಿಸಿ ಕ್ರಮ ಜರುಗಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ರಂಗಿತರಂಗದ ನಿರ್ಮಾಪಕರಲ್ಲಿ ಒಬ್ಬರಾದ ಪ್ರಕಾಶ್ ಅವರು ದೂರು ನೀಡಿದ್ದಾರೆ.

  ಫೇಸ್ ಬುಕ್ ನಲ್ಲಿ ಸಿನಿಪ್ರಿಯರಿಂದ ಮಾಹಿತಿ

  ಫೇಸ್ ಬುಕ್ ನಲ್ಲಿ ಸಿನಿಪ್ರಿಯರಿಂದ ಮಾಹಿತಿ

  ಆನ್ ಲೈನ್ ಬುಕ್ಕಿಂಗ್ ನಲ್ಲಿ ಕನ್ನಡ ಚಿತ್ರಗಳ ಕ್ರೇಜ್ ಬಗ್ಗೆ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಕನ್ನಡ ಸಿನಿಪ್ರಿಯರಿಂದ ಮಾಹಿತಿ.

  ಸರಿಯಾದ ನಿಯಮವೇ ಇಲ್ಲದಿದ್ದರೆ ...

  ಸರಿಯಾದ ನಿಯಮವೇ ಇಲ್ಲದಿದ್ದರೆ ...

  ಈ ಮುಂಚೆ ಪರ ಭಾಷಾ ಚಿತ್ರಗಳು ಬಿಡುಗಡೆಯಾದ ನಾಲ್ಕು ವಾರಗಳ ನಂತರ ಕರ್ನಾಟಕದಲ್ಲಿ ರಿಲೀಸ್ ಮಾಡಬೇಕು ಎಂಬ ನಿಯಮವಿತ್ತು. ಆದರೆ, ಈಗ ಈ ನಿಯಮ ತೆಗೆದು ಹಾಕಲಾಗಿದ್ದು, ವಿತರಕರ ಕೆಪಾಸಿಟಿ ಮೇಲೆ ಎಷ್ಟು ಚಿತ್ರಮಂದಿರಗಳಲ್ಲಿ ಪರ ಭಾಷಾ ಚಿತ್ರ ರಿಲೀಸ್ ಆಗಲಿದೆ ಎಂಬುದು ನಿರ್ಧಾರವಾಗಲಿದೆ. ಪರಿಸ್ಥಿತಿ ಹೀಗಿರುವಾಗ ಬೇಲಿ ಇಲ್ಲದಿದ್ದರೆ ನಿಮ್ಮ ಹೊಲಕ್ಕೆ ಎಲ್ಲಾ ದನಗಳು ನುಗ್ಗದೆ ಏನು ಮಾಡುತ್ತವೆ. ಬೇಲಿ ಕಟ್ಟುವ ಗಂಡು ಯಾರು ಎಂಬುದು ಈಗಿನ ಪ್ರಶ್ನೆ.

  ಕರ್ನಾಟಕದಲ್ಲಿ ಬಾಹುಬಲಿ

  ಕರ್ನಾಟಕದಲ್ಲಿ ಬಾಹುಬಲಿ

  ಕರ್ನಾಟಕದಲ್ಲಿ ಬಾಹುಬಲಿ ಸರಿ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದ್ದು, 35ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ಪ್ರದರ್ಶನ ಗೊಳ್ಳಲಿದೆ. ಜೊತೆಗೆ ಮೊದಲ ವಾರದ ಮುಂಗಡ ಬುಕ್ಕಿಂಗ್ ಈಗಾಗಲೇ ಮುಗಿದಿದೆಯಂತೆ. ವಿಶ್ವದೆಲ್ಲೆಡೆ ಸೇರಿ 4000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಜುಲೈ 10 ರಂದು ಚಿತ್ರ ಪ್ರದರ್ಶನಗೊಳ್ಳಲಿದೆ.

  ಬೇರೆ ಭಾಷೆ ಚಿತ್ರಕ್ಕೆ 500% ತೆರಿಗೆ ವಿಧಿಸಿ

  ಬೇರೆ ಭಾಷೆ ಚಿತ್ರಕ್ಕೆ 500% ತೆರಿಗೆ ವಿಧಿಸಿ

  ನಿಮಗೆ ಹೇಗಿದ್ದರೂ ದುಡ್ಡು ತಾನೇ ಬೇಕು. ಪರಭಾಷೆ ಸಿನಿಮಾಗಳಿಗೆ 500% ತೆರಿಗೆ ವಿಧಿಸಿರಿ, ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಒಂದಿಷ್ಟು ಹಣ ಬರುತ್ತದೆ. ಹೀಗೆ ಮಾಡಿದರೆ ಪರ ಭಾಷೆ ಪ್ರಾಬಲ್ಯ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎಂದು ಸಂಗೀತ ನಿರ್ದೇಶಕ ಅಭಿಷೇಕ್ ಎಸ್ ಎನ್ ಪ್ರತಿಕ್ರಿಯಿಸಿದ್ದಾರೆ.

  ರಂಗಿತರಂಗ ನಿರ್ಮಾಪಕರಿಂದ ದೂರು

  ರಂಗಿತರಂಗ ನಿರ್ಮಾಪಕರಿಂದ ದೂರು ಸ್ವೀಕರಿಸುತ್ತಿರುವ ಬಾಮಾ ಹರೀಶ್

  ಬಾಹುಬಲಿ ಚಿತ್ರ ಫ್ಲಾಪ್ ಆಗಲಿ

  ಬಾಹುಬಲಿ ಚಿತ್ರ ಫ್ಲಾಪ್ ಆಗಲಿ, ಕನ್ನಡ ಚಿತ್ರದ ವಿರುದ್ಧ ಬರುವ ಎಲ್ಲಾ ಚಿತ್ರಗಳು ತೋಪಾಗಲಿ ಎಂದು ಅಭಿಮಾನಿಗಳಿಂದ ಆಕ್ರೋಶದ ನುಡಿ.

  English summary
  Makers of the Kannada Thriller Rangitaranga filed a complaint against Baahubhali movie in KFCC. RangiTaranga is running houseful in multiplexes on weekdays. Top 3 in Bengaluru, top 1 in Mysuru Bookmyshow and yet weekend shows are being reduced. Kannada films are being neglected by Multi screen theatres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X