For Quick Alerts
  ALLOW NOTIFICATIONS  
  For Daily Alerts

  ಸಲಾರ್ ಚಿತ್ರಕ್ಕಾಗಿ ಶ್ರುತಿ ಹಾಸನ್‌ಗೆ ಇಷ್ಟು ದೊಡ್ಡ ಸಂಭಾವನೆ ಕೊಡಲಾಗುತ್ತಿದೆಯಾ?

  |

  ಕೆಜಿಎಫ್ ಚಾಪ್ಟರ್ 2 ಬಳಿಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಸಲಾರ್ ಸಿನಿಮಾ ಆರಂಭಕ್ಕೂ ಮುನ್ನವೇ ಹೆಚ್ಚು ಸದ್ದು ಮಾಡ್ತಿದೆ. ಕೆಜಿಎಫ್ ಹಾಗೂ ಬಾಹುಬಲಿ ಸಿನಿಮಾಗಳನ್ನು ಮೀರಿಸಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಪ್ರಭಾಸ್ ಅವರ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ಸಲಾರ್ ಸಿನಿಮಾ ದಾಖಲೆ ನಿರ್ಮಿಸುವ ಸುಳಿವು ನೀಡಿದೆ.

  ಚಿತ್ರದ ಮುಹೂರ್ತ ಸಹ ಮುಗಿದಿದ್ದು, ಚಿತ್ರೀಕರಣ ಆರಂಭಿಸುವ ತಯಾರಿಯಲ್ಲಿದೆ. ಈ ನಡುವೆ ಸಲಾರ್ ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಬಾಲಿವುಡ್ ನಟಿಯರು, ಹೊಸ ನಾಯಕಿ ಎಂದೆಲ್ಲ ಸುದ್ದಿಯಾಗಿತ್ತು. ಆದರೆ, ಸರ್ಪ್ರೈಸ್ ಎಂಬಂತೆ ಶ್ರುತಿ ಹಾಸನ್ ಹೆಸರು ಪ್ರಕಟವಾಗಿದೆ. ಇದೀಗ, ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್ ಪಡೆದುಕೊಳ್ಳುತ್ತಿರುವ ಸಂಭಾವನೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ, ಶ್ರುತಿ ಹಾಸನ್ ಸಂಭಾವನೆ ಎಷ್ಟು? ಮುಂದೆ ಓದಿ...

  'ಸಲಾರ್' ಚಿತ್ರಕ್ಕೆ ಶ್ರುತಿ ಪಡೆದ ಸಂಭಾವನೆ ಎಷ್ಟು?

  'ಸಲಾರ್' ಚಿತ್ರಕ್ಕೆ ಶ್ರುತಿ ಪಡೆದ ಸಂಭಾವನೆ ಎಷ್ಟು?

  ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಮೆಗಾ ಸಿನಿಮಾ 'ಸಲಾರ್' ಚಿತ್ರಕ್ಕೆ ಶ್ರುತಿ ಹಾಸನ್ ನಾಯಕಿಯಾಗಿದ್ದಾರೆ. ಶ್ರುತಿ ಹುಟ್ಟುಹಬ್ಬದ ಪ್ರಯುಕ್ತ ಸಲಾರ್ ಚಿತ್ರತಂಡ ಈ ಸುದ್ದಿಯನ್ನು ಪ್ರಕಟಿಸಿದೆ. ಪ್ರಭಾಸ್ ಚಿತ್ರಕ್ಕೆ ಶ್ರುತಿ ಹೀರೋಯಿನ್ ಎಂದು ಪ್ರಕಟವಾದ ಬೆನ್ನಲ್ಲೆ ಅವರ ಸಂಭಾವನೆ ವಿಚಾರವೂ ಹೆಚ್ಚು ಚರ್ಚೆಯಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಶ್ರುತಿ ಸಲಾರ್ ಚಿತ್ರಕ್ಕೆ 1 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

  ಹೊಸ ಬಾಯ್ ಫ್ರೆಂಡ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ರುತಿ ಹಾಸನ್?ಹೊಸ ಬಾಯ್ ಫ್ರೆಂಡ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ರುತಿ ಹಾಸನ್?

  ಅತಿ ಹೆಚ್ಚು ಸಂಭಾವನೆ ಎನ್ನಲಾಗಿದೆ?

  ಅತಿ ಹೆಚ್ಚು ಸಂಭಾವನೆ ಎನ್ನಲಾಗಿದೆ?

  ಶ್ರುತಿ ವೃತ್ತಿ ಜೀವನದಲ್ಲಿ ಸಲಾರ್ ಚಿತ್ರಕ್ಕೆ ಪಡೆದ ಸಂಭಾವನೆಯೇ ದೊಡ್ಡದು ಎನ್ನಲಾಗುತ್ತಿದೆ. ಇದುವರೆಗು ಶ್ರುತಿ ಹಾಸನ್ ಯಾವ ಚಿತ್ರಕ್ಕೂ ಒಂದು ಕೋಟಿಗೆ ಮೀರಿ ಸಂಭಾವನೆ ಪಡೆದಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಆದ್ರೆ, ಶ್ರುತಿ ಹಾಸನ್ ಅವರ ಅಭಿಮಾನಿಗಳು ಇದನ್ನು ನಿರಾಕರಿಸುತ್ತಿದ್ದಾರೆ. ಶ್ರುತಿ ಸಂಭಾವನೆ ಇದಕ್ಕಿಂತ ಹೆಚ್ಚಿದೆ. ಇಂಡಸ್ಟ್ರಿಗೆ ಬಂದಿರುವ ಹೊಸಬರೇ ಒಂದು ಕೋಟಿ ಪಡೆಯುತ್ತಾರೆ ಎಂದು ಹೇಳುತ್ತಿದ್ದಾರೆ.

  ಚಿತ್ರೀಕರಣಕ್ಕೆ ಸಜ್ಜಾದ ಸಲಾರ್

  ಚಿತ್ರೀಕರಣಕ್ಕೆ ಸಜ್ಜಾದ ಸಲಾರ್

  ಜನವರಿ 29 ರಿಂದಲೇ ಸಲಾರ್ ಚಿತ್ರೀಕರಣ ಪ್ರಾರಂಭಿಸಲು ಯೋಜಿಸಲಾಗಿದೆಯಂತೆ. ಆರಂಭದಲ್ಲಿ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡಲು ಸಿದ್ಧತೆ ನಡೆದಿದೆ. ಸಲಾರ್ ಚಿತ್ರದಲ್ಲಿ ಬರೋಬ್ಬರಿ ಆರು ಆಕ್ಷನ್ ದೃಶ್ಯಗಳಿದ್ದು, ದುಬಾರಿಯಾಗಿ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನುಳಿದಂತೆ

  ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್

  'ಕ್ರ್ಯಾಕ್' ಹಿಟ್ ಆಯ್ತು

  'ಕ್ರ್ಯಾಕ್' ಹಿಟ್ ಆಯ್ತು

  ರವಿತೇಜ ನಟನೆಯ ಕ್ರ್ಯಾಕ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಿತ್ತು. ಬಹಳ ದಿನಗಳ ನಂತರ ರವಿತೇಜ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಶ್ರುತಿ ಹಾಸನ್‌ಗೂ ಈ ಗೆಲುವು ಖುಷಿ ತಂದಿದೆ.

  English summary
  Hombale Films Makers Paid rs 1 Crore remuneration to Shruti Haasan for Salaar Movie. Prabhas playing Lead Role in this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X