ಮಲೈಕಾ ಅರೋರ, ಅರ್ಜುನ್ ಕಪೂರ್ ರಿಜಿಸ್ಟರ್ ಮದುವೆ ಆಗ್ತಿದ್ದಾರಂತೆ!

ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಪ್ರಣಯ ಪಕ್ಷಿಗಳಂತೆ ಸುತ್ತುತ್ತಿರುವ ಮಲೈಕಾ ಮತ್ತು ಅರ್ಜುನ್ ಲವ್ ಕಹಾನಿ ಎಲ್ಲರಿಗೂ ಗೊತ್ತೇ ಇದೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಈಗ ತಮ್ಮ ಸಂಬಂಧವನ್ನು ಮದುವೆಯಲ್ಲಿ ಬಂಧಿಸಲು ಹೊರಟಿದೆ.

ಬಾಲಿವುಡ್‌ನಲ್ಲಿ ಈಗ ಇದೇ ಸುದ್ದಿ ಆಗಿ ಬಿಟ್ಟಿದೆ. ಒಬ್ಬರಾಗೇ ಬಾಲಿವುಡ್ ತಾರೆಯರು ಮದುವೆಯಾಗುತ್ತಿದ್ದಾರೆ. ಈಗ ಮಲೈಕಾ ಮತ್ತು ಅರ್ಜುನ್ ಸರದಿ ಎನ್ನಲಾಗುತ್ತಿದೆ. ಬಾಲಿವುಡ್‌ನ ಹಲವು ಪೋರ್ಟಲ್‌ನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಮಾಹಿತಿಯ ಪ್ರಕಾರ ಇದೇ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಲೈಕಾ ಮತ್ತು ಅರ್ಜುನ್ ಕಪೂರ್ ಮದುವೆ ಆಗುತ್ತಾರೆ ಎನ್ನಲಾಗಿದೆ.

ಇನ್ನು ಜೋಡಿಯ ಮದುವೆ, ಮುಂಬೈನಲ್ಲಿ ನಡೆಯಲಿದೆಯಂತೆ. ಹೆಚ್ಚು ಜನರಿಗೆ ಆಹ್ವಾನ ನೀಡದೆ. ಅವರ ಕುಟುಂಬ ಮತ್ತು ಆಪ್ತ ಸ್ನೇಹಿತರಿಗೆ ಮಾತ್ರ ಆಮಂತ್ರಣ ಇರಲಿದೆಯಂತೆ. ಅದ್ದೂರಿಯಾಗಿ ಮದುವೆಯನ್ನು ಏರ್ಪಡಿಸುವ ಯೋಜನೆಗಳು ಮಾಡಲಾಗುತ್ತಿದೆಯಂತೆ.

Malaika Arora, Arjun Kapoor Getting Registered Marriage

ಈ ರೀತಿಯ ಸುದ್ದಿ ಬಾಲಿವುಡ್‌ನಲ್ಲಿ ಹಬ್ಬುತ್ತಲೇ, ನಟ ಅರ್ಜುನ್ ಕಪೂರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅರ್ಜುನ್ ಕಪೂರ್ "ನನ್ನ ಜೀವನದ ಬಗ್ಗೆ ನನಗಿಂತ ಹೆಚ್ಚಾಗಿ ಬೇರೆಯವರಿಗೆ ಆಸಕ್ತಿ ಇರುವು ಕಂಡು ಖುಷಿಯಾಗುತ್ತದೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅರ್ಜುನ್ ಕಪೂರ್ ಏನೆ ಪ್ರತಿಕ್ರಿಯೆ ಕೊಟ್ಟರೂ. ಇವರ ಮದುವೆ ಸುದ್ದಿ ಮಾತ್ರ ಜೋರಾಗಿದೆ. ಈ ಜೋಡಿ ರಿಜಿಸ್ಟರ್ ಮ್ಯಾರೇಜ್ ಆಗುತ್ತೆ ಎನ್ನುವ ಸುದ್ದಿಯೂ ಬಂದಿದೆ. ಮದುವೆ ರಿಜಿಸ್ಟರ್ ಆದ ಬಳಿಕ, ಮದುವೆ ಪಾರ್ಟಿಯನ್ನು ಆಯೋಜಿಸುವ ಯೋಜನೆ ಮಾಡಲಾಗಿದೆಯಂತೆ. ಈ ಪಾರ್ಟಿಗೆ ಉದ್ಯಮದ ಹೆಸರಾಂತ, ಖ್ಯಾತ ಕಲಾವಿದರು, ನಿಕಟ ಸದಸ್ಯರು ಮತ್ತು ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ. ಸದಸ್ಯರು ಇಡೀ ಕಪೂರ್ ಕುಟುಂಬ ಮತ್ತು ಮಲೈಕಾ ಅವರ ಪೋಷಕರನ್ನು ಒಳಗೊಂಡಂತೆ, ಕರೀನಾ ಕಪೂರ್ ಖಾನ್ ಕುಟುಂಬ ಮತ್ತು ಇತರರು ಇರಲಿದ್ದಾರಂತೆ.

ಇನ್ನು ಮದುವೆ ನೋಂದಣಿ ದಿನದಂದು ಮಲೈಕಾ ಸರಳವಾದ ಸೀರೆಯನ್ನು ತೊಡಲಿದ್ದಾರಂತೆ. ಅರ್ಜುನ್ ಸರಳವಾದ ಕುರ್ತಾವನ್ನು ಧರಿಸುತ್ತಾರೆ ಎಂದು ವರದಿ ಆಗಿದೆ.

More from Filmibeat

English summary
Malaika Arora, Arjun Kapoor Getting Registered Marriage, Know About Arjun Kapoor reaction,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X