'ಅನಿಮಲ್'-2 ಚಿತ್ರಕ್ಕೆ ನಾಯಕಿ ಆಯ್ಕೆ? ಈಕೆ ಕನ್ನಡ ಚಿತ್ರದಲ್ಲೂ ನಟಿಸಿದ್ಲು!

ಬಾಕ್ಸಾಫೀಸ್‌ನಲ್ಲಿ 'ಅನಿಮಲ್' ಆರ್ಭಟ ಮುಂದುವರೆದಿದೆ. 13 ದಿನಕ್ಕೆ 770 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ ಸಿನಿಮಾ ಸದ್ದು ಮಾಡ್ತಿದೆ. ಸಂದೀಪ್ ರೆಡ್ಡಿ ವಂಗಾ ಟೇಕಿಂಗ್, ರಣ್‌ಬೀರ್‌ ಕಪೂರ್ ಪರ್ಫಾರ್ಮನ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಕ್ರೌರ್ಯ, ಸ್ತ್ರೀದ್ವೇಷದ ಸನ್ನಿವೇಶಗಳು ಅತಿಯಾಯಿತು ಎನ್ನುತ್ತಲೇ ಜನ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.

ಅಲ್ಲು ಅರ್ಜುನ್ ಸೇರಿದಂತೆ ಸಾಕಷ್ಟು ನಟ, ನಟಿಯರು ಹಾಗೂ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಚಿತ್ರತಂಡದ ಶ್ರಮ ರಣ್‌ಬೀರ್ ನಟನೆಯನ್ನು ಹಾಡಿ ಕೊಂಡಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗೆ ತೃಪ್ತಿ ದಿಮ್ರಿ ಬೋಲ್ಡ್ ನಟನೆಗೂ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಕೆಲವರು ಇದೂ ಒಂದು ಸಿನ್ಮಾನಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ನಾಗಾಲೋಟ ಮುಂದುವರೆದಿದೆ.

Malavika Mohanan likely to play female lead in Ranbir Kapoor Animal Part-2

ಸಿನಿಮಾ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ಸೀಕ್ವೆಲ್ ಮಾಡುವಂತೆ ಬೇಡಿಕೆ ಹೆಚ್ಚಾಗಿದೆ. ಸಿನಿಮಾ ನೋಡಿದವರು 'ಅನಿಮಲ್' ಭಾಗ-2 ಮಾಡಿ ಎಂದು ಕೇಳುತ್ತಿದ್ದಾರೆ. 'ಅನಿಮಲ್ ಪಾರ್ಕ್' ಹೆಸರಿನಲ್ಲಿ ಮುಂದಿನ ಸಿನಿಮಾ ಬರುವ ಸಾಧ್ಯತೆಯಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮುಂದಿನ ವರ್ಷ ತಮ್ಮ ಹೊಸ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಎನ್ನುವ ಸಿನಿಮಾ ಘೋಷಣೆ ಮಾಡಿದ್ದಾರೆ.

ಈಗಾಗಲೇ 'ಸ್ಪಿರಿಟ್' ಕಥೆ ಸಿದ್ಧವಾಗಿದ್ದು ಮುಂದಿವ ವರ್ಷದ ಕೊನೆಯಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ನಡೀತಿದೆ. ಇದರ ನಡುವೆ 'ಅನಿಮಲ್ ಪಾರ್ಕ್' ಸಿನಿಮಾ ಮಾಡಿ ಮುಗಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಅಧಿಕೃತವಾಗಿ 'ಅನಿಮಲ್' ಸೀಕ್ವೆಲ್ ಘೋಷಣೆ ಆಗಿಲ್ಲ. ಆದರೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಈ ಬಗ್ಗೆ ಚಿತ್ರತಂಡ ಚಿಂತನೆ ನಡೆಸುತ್ತಿದೆ ಎನ್ನಲಾಗ್ತಿದೆ. ಮುಂದಿನ ವರ್ಷ ರಣ್‌ಬೀರ್ 'ರಾಮಾಯಣ' ಚಿತ್ರದಲ್ಲಿ ನಟಿಸಬೇಕಿದೆ. ಅದಕ್ಕೂ ಮುನ್ನ 'ಅನಿಮಲ್ ಪಾರ್ಕ್'ಗೆ ಎಂಟ್ರಿ ಕೊಡ್ತಾರಾ? ಕಾದು ನೋಡಬೇಕಿದೆ.

ಡಿಸೆಂಬರ್ 1ಕ್ಕೆ ಬಿಡುಗಡೆಯಾಗಿದ್ದ 'ಅನಿಮಲ್' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 3 ಗಂಟೆ 12 ನಿಮಿಷಗಳ ಸುದೀರ್ಘ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಫಲವಾಗಿತ್ತು. ಸೆಟ್ಟೇರಿದ ದಿನದಿಂದಲೂ ಅಷ್ಟೇನು ನಿರೀಕ್ಷೆ ಮೂಡಿಸದ ಸಿನಿಮಾ ಟ್ರೈಲರ್ ರಿಲೀಸ್ ಬಳಿಕ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿತ್ತು.

Malavika Mohanan likely to play female lead in Ranbir Kapoor Animal Part-2

'ಅನಿಮಲ್ ಪಾರ್ಕ್' ಸಿನಿಮಾ ಘೋಷಣೆ ಆಗದಿದ್ದರೂ ಮಾಳವಿಕಾ ಮೋಹನನ್ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದ್ಯಾಕೋ ಬಿಂದಾಸ್ ಬ್ಯೂಟಿ ಮಾಳವಿಕಾಗೆ ಒಳ್ಳೆ ಅವಕಾಶಗಳು ಸಿಗುತ್ತಿಲ್ಲ. ಇದೀಗ ಸೂಪರ್ ಹಿಟ್ 'ಅನಿಮಲ್' ಸೀಕ್ವೆಲ್‌ನಲ್ಲಿ ಆಕೆ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಚಿತ್ರದಲ್ಲಿ ನೆಗೆಟಿವ್ ರೋಲ್‌ನಲ್ಲಿ ಆಕೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.

ಕೇರಳದಲ್ಲಿ ಹುಟ್ಟಿಬೆಳೆದ ಮಾಳವಿಕಾ 2013ರಲ್ಲಿ ಚಿತ್ರರಂಗಕ್ಕೆ ಬಂದರು. 'ನಾನು ಮತ್ತು ವರಲಕ್ಷ್ಮಿ' ಎನ್ನುವ ಕನ್ನಡ ಚಿತ್ರದಲ್ಲೂ ನಟಿಸಿದ್ದರು. ತಮಿಳಿನ 'ಪೇಟಾ', 'ಮಾಸ್ಟರ್' ಚಿತ್ರದಲ್ಲಿ ಮಿಂಚಿದರೂ ಪ್ರಯೋಜನವಾಗಲಿಲ್ಲ. ಬೋಲ್ಡ್ ಫೋಟೊಶೂಟ್‌ಗಳಿಂದ ಮಾಳವಿಕಾ ಗಮನ ಸೆಳೆಯುತ್ತಿರುತ್ತಾರೆ. ಆದರೆ ಒಳ್ಳೆ ಬ್ರೇಕ್ ಮಾತ್ರ ಆಕೆಗೆ ಸಿಗುತ್ತಿಲ್ಲ.

'ಬಿಯಾಂಡ್ ದಿ ಕ್ಲೌಡ್ಸ್' ಹಿಂದಿ ಚಿತ್ರದಲ್ಲಿ ಈಗಾಗಲೇ ಮಾಳವಿಕಾ ನಟಿಸಿದ್ದಾರೆ. 'ಯುದ್ರ' ಎನ್ನುವ ಮತ್ತೊಂದು ಸಿನಿಮಾ ಚಿತ್ರೀಕರಣ ನಡೀತಿದೆ. 'ಅನಿಮಲ್ ಪಾರ್ಕ್' ಸಿನಿಮಾ ನಿಜಕ್ಕೂ ನಿರ್ಮಾಣವಾಗುತ್ತಾ? ಮಾಳವಿಕಾ ವಿಲನ್ ಆಗಿ ನಟಿಸುತ್ತಾರಾ? ಕಾದು ನೋಡಬೇಕಿದೆ.

More from Filmibeat

English summary
Malavika Mohanan to be part of Animal sequel;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X