ಯಶ್ 19ಗೆ ಈ ಮಲಯಾಳಂ ನಟಿಯ ನಿರ್ದೇಶನ? ಈಕೆ ನಿರ್ದೇಶಿಸಿರುವ 2 ಚಿತ್ರಗಳು ಹೇಗಿವೆ?

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟಿಸಲಿರುವ ಯಾವ ಚಿತ್ರವೂ ಸಹ ಘೋಷಣೆಯಾಗಿಲ್ಲ. ನಿನ್ನೆಗೆ ( ಏಪ್ರಿಲ್ 14 ) ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡು ಒಂದು ವರ್ಷ ಕಳೆದಿದ್ದು, ಚಿತ್ರದ ಮೊದಲ ವರ್ಷದ ವಾರ್ಷಿಕೋತ್ಸವದ ಆಚರಣೆ ನಡೆದರೂ ಸಹ ಯಶ್ ನಟನೆಯ ಮುಂದಿನ ಚಿತ್ರ ಯಾವುದೆಂಬುದು ಮಾತ್ರ ತಿಳಿದುಬಂದಿಲ್ಲ.

ಇನ್ನು ಯಶ್ ಅಭಿನಯದ ಮುಂದಿನ ಚಿತ್ರದ ಬಗ್ಗೆ ಹಲವು ದಿನಗಳಿಂದಲೂ ಸಹ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಕೆಜಿಎಫ್ ಚಾಪ್ಟರ್ 3 ಘೋಷಣೆಯಾಗುತ್ತೆ, ಯಶ್ ತಮ್ಮ ಮುಂದಿನ ಚಿತ್ರವನ್ನು ಅವರೇ ನಿರ್ದೇಶನ ಮಾಡಿಕೊಳ್ಳಲಿದ್ದಾರಂತೆ, ತೆಲುಗು ನಿರ್ದೇಶಕ ಆಕ್ಷನ್ ಕಟ್ ಹೇಳ್ತಾರಂತೆ, ತಮಿಳಿನ ನಿರ್ದೇಶಕರು ಯಶ್‌ಗೆ ಸಿನಿಮಾ ಮಾಡ್ತಾರಂತೆ, ಯಶ್ ಬಾಲಿವುಡ್‌ಗೆ ಹೋಗ್ತಾರಂತೆ ಎಂಬೆಲ್ಲಾ ಸುದ್ದಿಗಳು ದೊಡ್ಡ ಮಟ್ಟದಲ್ಲಿಯೇ ಹರಿದಾಡಿದ್ದವು.

Malayalam actress and director Geetu Mohandas likely to direct Yash next film

ಅದೇ ರೀತಿಯ ಮತ್ತೊಂದು ವಿಚಾರ ಈಗ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅದೇನೆಂದರೆ ಮಲಯಾಳಂ ಚಿತ್ರರಂಗದ ನಟಿಯೊಬ್ಬರು ಯಶ್ 19ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು. ಹೌದು, ಮಲಯಾಳಂ ನಟಿ ಗೀತು ಮೋಹನ್‌ದಾಸ್ ಎಂಬುವವರು ಯಶ್ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟಿಯಾಗಲಿ ಅಥವಾ ಯಶ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಕುರಿತು ಸಾಕಷ್ಟು ಮೀಮ್ ಹಾಗೂ ಸುದ್ದಿ ಹರಿದಾಡುತ್ತಿವೆ.

ಹೀಗೆ ಯಶ್ 19 ಜತೆ ತಳುಕು ಹಾಕಿಕೊಂಡಿರುವ ಈ ನಟಿ ಯಾರು ಹಾಗೂ ಆಕೆ ನಿರ್ದೇಶಿಸಿರುವ ಚಿತ್ರಗಳು ಹೇಗಿವೆ ಎಂಬ ಮಾಹಿತಿ ಇಲ್ಲಿದೆ. ಗೀತು ಮೋಹನ್‌ದಾಸ್ ನಿಜವಾದ ಹೆಸರು ಗಾಯತ್ರಿ ದಾಸ್. 1986ರಲ್ಲಿ ತೆರೆಗೆ ಬಂದ ಮೋಹನ್ ಲಾಲ್ ನಟನೆಯ ಒಣ್ಣು ಮುದಲ್ ಪೂಜ್ಯಂ ವರೆ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ 2009ರವರೆಗೂ ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದರು.

Malayalam actress and director Geetu Mohandas likely to direct Yash next film

ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಬಳಿಕ ನಟನೆಯಿಂದ ದೂರ ಉಳಿದ ಗೀತು ಮೋಹನ್‌ದಾಸ್ 2009ರಲ್ಲಿಯೇ 'ಕೇಲ್ಕುನ್ನುಂಡೋ' ಎಂಬ ಕಿರು ಚಿತ್ರ ನಿರ್ದೇಶನ ಮಾಡಿದ್ದರು ಹಾಗೂ 2013ರಲ್ಲಿ 'ಲೈಯರ್ಸ್ ಡೈಸ್' ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ನವಾಜುದ್ದೀನ್ ಸಿದ್ದಿಕಿ ಹಾಗೂ ಗೀತಾಂಜಲಿ ತಾಪಾ ನಟಿಸಿದ್ದ ಈ ಚಿತ್ರ ಗ್ರಾಮದಿಂದ ನಗರಕ್ಕೆ ವಲಸೆ ಬರುವ ದಂಪತಿಗಳ ಕಥೆಯಾಗಿತ್ತು. ನಾಯಕಿ ನಾಪತ್ತೆಯಾದ ತನ್ನ ಪತಿಯನ್ನು ನಗರದಲ್ಲಿ ಹುಡುಕುವ ಚಿತ್ರವಾಗಿತ್ತು. ಕಥೆ ವಿಚಾರವಾಗಿ, ಕಲಾವಿದರ ನಟನೆ ವಿಚಾರವಾಗಿ ಈ ಚಿತ್ರ ದೊಡ್ಡಮಟ್ಟದ ಪ್ರಶಂಸೆ ಗಿಟ್ಟಿಸಿಕೊಂಡಿತ್ತು.

ಚಿತ್ರದಲ್ಲಿನ ನಟನೆಗೆ ಗೀತಾಂಜಲಿ ತಾಪಾ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು ಹಾಗೂ ಛಾಯಾಗ್ರಾಹಕ ರಾಜೀವ್ ರವಿ ಛಾಯಾಗ್ರಹಣಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಹೀಗೆ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದ ಮೊದಲ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಅಲ್ಲದೇ ಈ ಚಿತ್ರ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಈ ಚಿತ್ರ ಐಎಂಡಿಬಿಯಲ್ಲಿ 6.7 ರೇಟಿಂಗ್ ಪಡೆದುಕೊಂಡಿದೆ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ಮೊದಲ ನಿರ್ದೇಶನದ ಬಳಿಕ ತುಸು ಹೆಚ್ಚೇ ಗ್ಯಾಪ್ ತೆಗೆದುಕೊಂಡ ಗೀತು ಮೋಹನ್‌ದಾಸ್ 2019ರಲ್ಲಿ ನಿವಿನ್ ಪೌಲಿಗೆ 'ಮೂತ್ತೋನ್' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರವೂ ಸಹ ಹುಡುಕಾಟದ ಕಥೆಯಾಗಿತ್ತು. 14 ವರ್ಷದ ಹುಡುಗಿ ತನ್ನ ಅಣ್ಣನಿಗಾಗಿ ಲಕ್ಷದ್ವೀಪದಿಂದ ಮುಂಬೈಗೆ ತೆರಳಿ ಹುಡುಕುವ ಕಥೆ ಇದಾಗಿದೆ. ಸಲಿಂಗಕಾಮದ ಸೂಕ್ಷ್ಮ ಅಂಶವೂ ಸಹ ಚಿತ್ರದಲ್ಲಿದ್ದು, ಇದೊಂದು ವಿಭಿನ್ನ ಹಾಗೂ ಧೈರ್ಯದ ಪ್ರಯತ್ನವೆಂದೇ ಹೇಳಬಹುದು. ಈ ಚಿತ್ರ ಐಎಂಡಿಬಿಯಲ್ಲಿ 7.4 ರೇಟಿಂಗ್ ಪಡೆದುಕೊಂಡಿದ್ದು, ಜೀ ಫೈವ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಲು ಲಭ್ಯವಿದೆ.

ಒಟ್ಟಿನಲ್ಲಿ ಯಶ್ ನಟನೆಯ ಮುಂದಿನ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿರುವ ನಿರ್ದೇಶಕಿ ಗೀತು ಮೋಹನ್‌ದಾಸ್ ವಿಭಿನ್ನ ಕಥೆ ಹೇಳಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿರುವ ಪ್ರತಿಭಾವಂತ ನಿರ್ದೇಶಕಿ ಆಗಿದ್ದಾರೆ. ಇನ್ನು ಗೀತು ಮೋಹನ್‌ದಾಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯಶ್ ಅವರನ್ನು ಫಾಲೋ ಮಾಡುತ್ತಿದ್ದು, ಈಕೆ ಫಾಲೋ ಮಾಡುತ್ತಿರುವ ಏಕೈಕ ಮಲಯಾಳೇತರ ನಟ ಆಗಿದ್ದಾರೆ. ಹೀಗಾಗಿ ಈಕೆಯೇ ಯಶ್ ನಟನೆಯ ಮುಂದಿನ ಚಿತ್ರದ ನಿರ್ದೇಶಕಿ ಎಂಬ ಎಂಬ ಚರ್ಚೆ ಜೋರಾಗಿದೆ. h

More from Filmibeat

English summary
Malayalam actress and director Geetu Mohandas likely to direct Yash next film. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X