ಇದೇ ವಾರದಲ್ಲಿ 'ಜಾಕಿ' ಭಾವನಾ ಮದುವೆ.!

By Bharath Kumar

ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಅವರು ಮದುವೆ ದಿನಾಂಕ ನಿಗದಿಯಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಕನ್ನಡದ ನಿರ್ಮಾಪಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಈಗ ಸಪ್ತಪದಿ ತುಳಿಯಲು ಸಿದ್ದವಾಗಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗಾಗಲೇ ಇವರಿಬ್ಬರ ವಿವಾಹ ನಡೆದುಹೋಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದೀಗ, ಮದುವೆ ದಿನಾಂಕ ಅಂತಿಮವಾಗಿದ್ದು, ಇದೇ ವಾರ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅಷ್ಟಕ್ಕೂ, ಭಾವನಾ ಮತ್ತು ನವೀನ್ ಅವರು ವಿವಾಹ ಯಾವಾಗ? ಮತ್ತು ಇವರಿಬ್ಬರ ಮದುವೆ ಆಗುತ್ತಿರುವುದು ಎಲ್ಲಿ? ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಮುಂದೆ ಓದಿ....

ಡಿಸೆಂಬರ್ 22ಕ್ಕೆ ವಿವಾಹ

ಡಿಸೆಂಬರ್ 22ಕ್ಕೆ ವಿವಾಹ

ಈ ಮೊದಲು ಕೇಳಿ ಬಂದಿದ್ದ ಸುದ್ದಿ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ ಭಾವನಾ ಅವರ ಮದುವೆ ಆಗಬೇಕಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಈಗ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ವಾರ ಅಂದ್ರೆ, ಡಿಸೆಂಬರ್ 22 ರಂದು ಮಾಂಗಲ್ಯಧಾರಣೆ ನಡೆಯಲಿದೆ.

ಸರಳ ವಿವಾಹದ ಮೊರೆ ಹೋದ ನಟ

ಸರಳ ವಿವಾಹದ ಮೊರೆ ಹೋದ ನಟ

ಸಿನಿಮಾ ತಾರೆಯರು ವಿವಾಹ ಅಂದ್ರೆ ಅದ್ಧೂರಿ, ಅಭಿಮಾನಿಗಳು ಸಂಭ್ರಮ, ನಟ-ನಟಿಯರ ಸಮಾಗಮ ಹೀಗೆಲ್ಲಾ ಇರುತ್ತೆ. ಆದ್ರೆ, ಭಾವನಾ ಸರಳ ವಿವಾಹದ ಮೊರೆ ಹೋಗಿದ್ದು, ಕೇರಳದ ತ್ರಿಶೂರ್ ನಲ್ಲಿ ವಿವಾಹ ನಡೆಯಲಿದೆ. ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ಅಧಿಕೃತ ಘೋಷಣೆಯಾಗಿಲ್ಲ

ಅಧಿಕೃತ ಘೋಷಣೆಯಾಗಿಲ್ಲ

ಮೂಲಗಳ ಪ್ರಕಾರ ಡಿಸೆಂಬರ್ 22 ರಂದು ಮದುವೆ ಎನ್ನಲಾಗಿದೆ. ಇದುವರೆಗೂ ಭಾವನಾ ಆಗಲಿ, ನಿರ್ಮಾಪಕ ನವೀನ್ ಆಗಲಿ ಅಧಿಕೃತವಾಗಿ ಎಲ್ಲೂ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದ್ರೆ, ಸ್ನೇಹಿತರ ಪ್ರಕಾರ ದಿನಾಂಕ ನಿಗದಿಯಾಗಿರುವ ಸುದ್ದಿ ಸೋರಿಕೆಯಾಗಿದೆ. ಹೀಗಾಗಿ, ಮದುವೆ ಡೇಟ್ ಬಗ್ಗೆ ಕುತೂಹಲದ ಜೊತೆ ಅನುಮಾನ ಕೂಡ ಕಾಡುತ್ತಿದೆ.

ಮಾರ್ಚ್ 9 ರಂದು ನಿಶ್ಚಿತಾರ್ಥ

ಮಾರ್ಚ್ 9 ರಂದು ನಿಶ್ಚಿತಾರ್ಥ

ಮಾರ್ಚ್ 9 ರಂದು ಕೊಚ್ಚಿಯಲ್ಲಿನ ತಮ್ಮ ನಿವಾಸದಲ್ಲಿ ನಟಿ ಭಾವನಾ-ನವೀನ್ ನಿಶ್ಚಿತಾರ್ಥ ನಡೆದಿತ್ತು. ಆಗಲೂ ಕಟುಂಬಸ್ಥರು ಮತ್ತು ಕೆಲವೇ ಕೆಲವು ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಭಾವನಾರ ಭಾವಿ ಪತಿ ಬಗ್ಗೆ

ಭಾವನಾರ ಭಾವಿ ಪತಿ ಬಗ್ಗೆ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಾವನಾ ಜೊತೆಯಾಗಿ ನಟಿಸಿದ್ದ 'ರೋಮಿಯೋ' ಚಿತ್ರದ ಬಂಡವಾಳ ಹಾಕಿದ್ದವರು ಇದೇ ನವೀನ್. ಅದಕ್ಕೂ ಮೊದಲು ಕನ್ನಡದ 'ನಾಯಕ' ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ನವೀನ್ ನಟಿಸಿದ್ದರು. 'ರೋಮಿಯೋ' ಸಿನಿಮಾ ಶೂಟಿಂಗ್ ಟೈಮ್ ನಲ್ಲಿ ಭೇಟಿ ಆದ ನವೀನ್-ಭಾವನಾ ಮೊದಮೊದಲು ಉತ್ತಮ ಗೆಳೆಯರಾಗಿದ್ದರು. ಅವರ ಗೆಳೆತನ ಪ್ರೀತಿಗೆ ತಿರುಗಿ ನಾಲ್ಕು ವರ್ಷಗಳಾಗಿವೆ. ನಾಲ್ಕು ವರ್ಷಗಳ ಪ್ರೀತಿಗೆ ಡಿಸೆಂಬರ್ ನಲ್ಲಿ ಅಧಿಕೃತ ಮುದ್ರೆ ಬೀಳಲಿದೆ.

'ಟಗರು' ಚಿತ್ರದಲ್ಲಿ ನಟನೆ

'ಟಗರು' ಚಿತ್ರದಲ್ಲಿ ನಟನೆ

ಸದ್ಯ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದಲ್ಲಿ ಭಾವನಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಮಾನ್ವಿತಾ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರು. ದುನಿಯಾ ಸೂರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ಅಪಹರಣ ಪ್ರಕರಣ

ಅಪಹರಣ ಪ್ರಕರಣ

ಇನ್ನು ಭಾವನಾ ಅವರು ನಿಶ್ಚಿತಾರ್ಥ ಆಗುವ ಕೆಲವು ದಿನಗಳ ಹಿಂದೆಯಷ್ಟೇ ಅಪಹರಣಕ್ಕೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಕುಮಾರ್ ಹೆಸರು ಕೇಳಿ ಬಂದಿತ್ತು. ಹಾಗಾಗಿ, ದಿಲೀಪ್ ಬಂಧನ ಕೂಡ ಆಗಿತ್ತು. ನಂತರ ಜಾಮಿನು ಪಡೆದುಕೊಂಡಿದ್ದರು.

More from Filmibeat

English summary
Malayalam actress Bhavana and Kannada producer Naveen got engaged on March 9, 2017 early this year but the wedding date was not revealed. now the wedding date has been fixed finally, and it will be on December 22.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X