»   » ಕೋಮಲ್ ಜೊತೆ ಮಲಯಾಳಂ ಮಾಳವಿಕಾ ಕೋಕೋ

ಕೋಮಲ್ ಜೊತೆ ಮಲಯಾಳಂ ಮಾಳವಿಕಾ ಕೋಕೋ

Posted By:
Subscribe to Filmibeat Kannada
ಮಲಯಾಳಂ ನಟಿಯರು ಕನ್ನಡಕ್ಕೆ ಬರುವುದು ಹೊಸ ವಿಷಯವೇನಲ್ಲ. ಮೀರಾ ಜಾಸ್ಮಿನ್, ನವ್ಯಾ ನಾಯರ್, ಪ್ರಿಯಾಮಣಿ, ಭಾವನಾ ಮೆನನ್, ಪಾರ್ವತಿ ಮೆನನ್, ನಿತ್ಯಾ ಮೆನನ್, ಭಾಮಾ ಹೀಗೆ ಬಹಳಷ್ಟು ನಟಿಯರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪಾರ್ವತಿ ಮೆನನ್, ಭಾಮಾ ಹಾಗೂ ಭಾವನಾರಂತ ಕೆಲವರಂತೂ ಇಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಮಾಳವಿಕಾ. 'ಮಲರ್ವಾಡಿ ಆರ್ಟ್ಸ್ ಕ್ಲಬ್' ಚಿತ್ರದ ಮೂಲಕ ಚಿತ್ರಯಾನ ಆರಂಭಿಸಿದ ಮಾಳವಿಕಾ ನಂತರ ಒಂದೆರಡು ಚಿತ್ರಗಳಲ್ಲಿ ನಟಿಸಿ ಪರಿಚಿತೆ ಎನಿಸಿದ್ದಾರೆ. ಇದೀಗ ಮಾಳವಿಕಾರನ್ನು ಕೋಮಲ್ ಕುಮಾರ್ ನಾಯಕತ್ವದ ಚಿತ್ರವೊಂದರ ಮೂಲಕ ಕನ್ನಡಕ್ಕೆ ಕರೆ ತರುತ್ತಿದ್ದಾರೆ.

ಜಯರಾಜ್ ನಿರ್ದೇಶನದ ಮಲಯಾಳಮ ಚಿತ್ರ 'ತಿಲಕಂ' 2003ರಲ್ಲಿ ಬಿಡುಗಡೆಯಾಗಿತ್ತು. ಬರೋಬ್ಬರಿ 9 ವರ್ಷಗಳ ನಂತರ ಅದೀಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ಬಾಲ್ಯದಲ್ಲೇ ಕಳೆದು ಹೋಗಿರುವ ಬಾಲಕ ಕೈಗೆ ಸಿಕ್ಕಿದಾಗ ಮಾನಸಿಕ ಅಸ್ವಸ್ಥನಾಗಿರುತ್ತಾನೆ. ಆರೈಕೆ ಮಾಡುವ ನಾಯಕಿ ಆತನಲ್ಲಿ ಅನುರಕ್ತಳಾಗುತ್ತಾಳೆ. ಇದೇ ಚಿತ್ರದ ಕಥೆಯ ಎಳೆ.

ಈ ಪಾತ್ರದಲ್ಲಿ ದಿಲೀಪ್ ಮತ್ತು ಕಾವ್ಯಾ ಮಾಧವನ್ ಅಮೋಘವಾಗಿ ಅಭಿನಯಿಸಿದ್ದರು. ಈ ಚಿತ್ರದ ರೀಮೇಕ್ ಕನ್ನಡ ಚಿತ್ರದಲ್ಲಿ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ನಟಿಸಲಿರುವ ಕೋಮಲ್‌  ಅವರಿಗೆ ಮಾಳವಿಕಾ ಹೀರೋಯಿನ್. ಮಲಯಾಳಿ ನಟಿಯರಿಗೆ ಕನ್ನಡ ಚಿತ್ರರಂಗವೆಂದರೆ ಆಕರ್ಷಣೆ ಸಹಜ. ಏಕೆಂದರೆ ಅಲ್ಲಿಗಿಂತ ಇಲ್ಲಿ ಸಂಭಾವನೆ ಹೆಚ್ಚು.

ಬರಲಿರುವ ಈ ಚಿತ್ರಕ್ಕೆ ನಿರ್ದೇಶಕರು ಕಣ್ಣೀರ ಚಿತ್ರಗಳ ನಿರ್ದೇಶಕ ಖ್ಯಾತಿಯ ಸಾಯಿಪ್ರಕಾಶ್. ಕೋಮಲ್ ನಂಬಿ ಚಿತ್ರ ನಿರ್ಮಿಸುತ್ತಿರುವವರು ರಾಜೇಶ್ ಮತ್ತು ರಮೇಶ್ ಎಂಬ ಹೊಸ ನಿರ್ಮಾಪಕರು. ಇನ್ನೊಬ್ಬರು ಕೂಡ ಇವರ ಜತೆ ಕೈ ಜೋಡಿಸುವ ಸಾಧ್ಯತೆಯಿದೆ. ಸಾಯಿಪ್ರಕಾಶ್-ಕೋಮಲ್ ಜೋಡಿ ಅದೇನು ಮೋಡಿ ಮಾಡಲಿದೆಯೋ ಕಾದು ನೋಡಬೇಕಷ್ಟೇ! (ಒನ್ ಇಂಡಿಯಾ ಕನ್ನಡ)

English summary
Malayalam actress Malavika acts in Komla Kumar Kannada upcoming movie. This movie is Remake of 2003 released Malayalam movie 'Tilakam'. That Malayam movie was directed by Jayaraj and Dilip and Kavya Madhavan acted in this. This, Malayalam remake Kannada movie to direct by Saiprakash. 
 
Please Wait while comments are loading...