ತಾರೆ ಮನೀಷಾ ಸಂಸಾರ ಈಗ ಮುಳುಗಿದ ದೋಣಿ
ಸದ್ಯಕ್ಕೆ ಈಕೆ ಮುಂಬೈನಲ್ಲಿ ವಾಸವಾಗಿದ್ದಾರಂತೆ. "ನಾವಿಬ್ಬರೂ ಒಳ್ಳೆಯವರೇ. ಅವರ ಬಗ್ಗೆ ನನಗೇನು ಕೋಪವಿಲ್ಲ. ಅವರ ಕುಟುಂಬ ಸಹ ಸೂಪರ್. ನಾನು ಅವರ ಬಗ್ಗೆ ಬೆಟ್ಟು ಮಾಡಿ ತೋರಿಸುವಂತಹದ್ದೇನು ಇಲ್ಲ. ಅವರ ಬಗ್ಗೆ ಕಂಪ್ಲೇಂಟ್ ಮಾಡಲು ಏನೇನೂ ಇಲ್ಲ..."
ಈಗಲೂ ಅಷ್ಟೇ ಅವರ ಕುಟುಂಬದ ಬಗ್ಗೆ, ಅವರ ಬಗ್ಗೆ ಎಳ್ಳಷ್ಟೂ ಗೌರವ ಕುಂದಿಲ್ಲ ಎಂದು ಮನೀಷಾ ತಮ್ಮ ಪತಿ ಹಾಗೂ ಆತನ ಕುಟುಂಬದ ಬಗ್ಗೆ ಹಾಡಿ ಹೊಗಳಿದ್ದಾರೆ. ಆದರೆ ಅಂತಹ ಚಿನ್ನದಂತಹ ಪತಿಯನ್ನು ಕೈಬಿಟ್ಟಿದ್ದು ಯಾಕೆ ಎಂಬ ಬಗ್ಗೆ ಸೂಕ್ತ ಕಾರಣವಿಲ್ಲವಂತೆ.
ಎರಡು ವರ್ಷಗಳ ಹಿಂದಷ್ಟೇ ಸಾಮ್ರಾಟ್ ದಲಾಲ್ ಅವರನ್ನು ಮನೀಷಾ ವರಿಸಿದ್ದರು. ಆರಂಭದಲ್ಲಿ ಇವರ ಸಂಸಾರದ ಬಂಡಿ ಸುಗಮವಾಗಿಯೇ ಸಾಗುತ್ತಿತ್ತು. ಆದರೆ ಅದೇನಾಯಿತೋ ಏನೋ ಗೊತ್ತಿಲ್ಲ. ಈಗ ತನ್ನ ಪತಿಯಿಂದ ದೂರವಾಗಿದ್ದಾರೆ ಮನಿಷಾ. ಕಾರಣ ಕೇಳಿದರೆ ಮೇಲಿನಂತೆ ಹೇಳುತ್ತಾರೆ.
ಇದಾದ ಬಳಿಕ ಆಕೆ ಕುಡಿಯೋದೆ ನನ್ನ ಬಿಜಿನೆಸ್ಸು ಎಂದು ಪರಮಾತ್ಮನಿಗೆ ಶರಣಾಗಿದ್ದರು. ಈಗ ಮತ್ತೊಂದು ಕಥೆಯನ್ನೂ ಹೇಳುತ್ತಿದ್ದಾರೆ. ತಾನು ಕುಡಿಯುವುದನ್ನೂ ಬಿಟ್ಟಿದ್ದೇನೆ. ಸಿನೆಮಾ ಪ್ರಪಂಚ ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರ 'ಭೂತ್ ರಿಟರ್ನ್ಸ್' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಮಲಯಾಳಂನ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ. ಇದಾದ ಬಳಿಕ ನಾನೇ ಚಿತ್ರವನ್ನು ನಿರ್ದೇಶಿಸುತ್ತೇನೆ ಎಂದು ತಿಳಿಸಿದ್ದಾರೆ. ಸಂಸಾರದೋಣಿ ಮುಳುಗಿದ ಮೇಲೆ ಏನು ಹೇಳಿ ಏನು ಪ್ರಯೋಜನ? (ಏಜೆನ್ಸೀಸ್)


Click it and Unblock the Notifications












