For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ಮನೋಜ್ ಬಾಜಪೇಯಿ?

  |

  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಸಲಾರ್' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೊರೊನಾ 2ನೇಯ ಭೀಕರತೆ ಕಡಿಮೆಯಾದ ಬಳಿಕ ಸಲಾರ್ ತಂಡ ಎರಡನೇ ಹಂತದ ಚಿತ್ರೀಕರಣ ಪ್ರಾರಂಭ ಮಾಡಿದೆ. ಇತ್ತೀಚಿಗಷ್ಟೆ ಚಿತ್ರೀಕರಣ ಪ್ರಾರಂಭಮಾಡಿ, ಹಗಲು ರಾತ್ರಿ ಎನ್ನದೇ ಚಿತ್ರೀಕರಣ ಮಾಡಿ ಸದ್ಯ ಮತ್ತೆ ಬ್ರೇಕ್ ನೀಡಿದೆ.

  ಸಲಾರ್ ಸಿನಿಮಾದ ಬಗ್ಗೆ ಒಂದಲ್ಲೊಂದು ಸುದ್ದಿ ಹರಿದಾಡುತ್ತಲೇ ಇದೆ. ಸಿನಿಮಾಗೆ ಆ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ, ಇವರು ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಸುದ್ದಿ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇತ್ತೀಚಿಗಷ್ಟೆ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ವಿಲನ್ 'ಸಲಾರ್'ನಲ್ಲಿ ಪ್ರಭಾಸ್ ವಿರುದ್ಧ ತೊಡೆತಟ್ಟಿ ನಿಲ್ಲಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಹೌದು, ಬಹುಭಾಷಾ ನಟ, ಖ್ಯಾತ ಖಳನಟ ಜಗಪತಿ ಬಾಬು ಪ್ರಭಾಸ್ ಎದುರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಇದಕ್ಕೂ ಮೊದಲು ಬಾಲಿವುಡ್ ಖ್ಯಾತ ನಟ ಜಾನ್ ಅಬ್ರಹಾಂ ಮತ್ತು ತಮಿಳು ಸ್ಟಾರ್ ವಿಜಯ್ ಸೇತುಪತಿ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಈಗ ಮತ್ತೋರ್ವ ಖ್ಯಾತ ನಟನ ಹೆಸರು ವೈರಲ್ ಆಗಿದೆ.

  'ಸಲಾರ್' ಸಿನಿಮಾದ ಪ್ರಭಾಸ್ ಫೋಟೋ ಲೀಕ್; ಟ್ವಿಟ್ಟರ್ ನಲ್ಲಿ ಸಖತ್ ಟ್ರೆಂಡ್'ಸಲಾರ್' ಸಿನಿಮಾದ ಪ್ರಭಾಸ್ ಫೋಟೋ ಲೀಕ್; ಟ್ವಿಟ್ಟರ್ ನಲ್ಲಿ ಸಖತ್ ಟ್ರೆಂಡ್

  ಇತ್ತೀಚಿಗಷ್ಟೆ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡಿರುವ 'ಫ್ಯಾಮಿಲಿ ಮ್ಯಾನ್-2' ವೆಬ್ ಸರಣಿಯ ಹೀರೋ ಮನೋಜ್ ಬಾಜಪೇಯಿ ಸಲಾರ್ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಪ್ರಭಾಸ್ ನಟನೆಯ 23ನೇ ಸಿನಿಮಾ ಸಲಾರ್ ನಲ್ಲಿ ಮನೋಜ್ ಬಾಜಪೇಯಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇನ್ನು ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

  ಅಂದಹಾಗೆ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಸಲಾರ್'ನಲ್ಲಿ ಮನೋಜ್ ಬಾಜಪೇಯಿ ನೋಡಲು ಅಭಿಮಾನಿಗಳ ಸಹ ಕಾತರರಾಗಿದ್ದಾರೆ. ಈಗಾಗಲೇ ಸಲಾರ್ ಸಿನಿಮಾದ ಹೈವೋಲ್ಟೇಜ್ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡಲು ಸಿನಿಮಾತಂಡ ಸಜ್ಜಾಗಿದ್ದು, ಬೃಹತ್ ಸೆಟ್ ಕೂಡ ನಿರ್ಮಾಣವಾಗಿದೆಯಂತೆ. ಈ ಆಕ್ಷನ್ ದೃಶ್ಯ 'ಕೆಜಿಎಫ್'ಗಿಂತ ಎರಡು ಪಟ್ಟು ದೊಡ್ಡದಾಗಿರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆಕ್ಷನ್ ದೃಶ್ಯಕ್ಕೆ ಖ್ಯಾತ ಸಾಹಸ ಕಲಾವಿದರಾದ ಅನ್ಬು-ಅರಿವ್ ಆಕ್ಷನ್ ಡೈರೆಕ್ಟ ಮಾಡುತ್ತಿದ್ದಾರೆ.

  ದೊಡ್ಡ ಆಕ್ಷನ್ ಸೀಕ್ವೆನ್ಸ್ ನಲ್ಲಿ ಫ್ಯಾಮಿಲಿ ಮ್ಯಾನ್ ನಟ ಮನೋಜ್ ಬಾಜಪೇಯಿ ಕೂಡ ಇರಲಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಅಂದಹಾಗೆ ತೆಲುಗು ಮತ್ತು ತಮಿಳು ಸಿನಿಮಾರಂಗ ಮನೋಜ್ ಬಾಜಪೇಯಿ ಅವರಿಗೆ ಹೊಸದಲ್ಲ. ಈ ಮೊದಲೇ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ಮನೋಜ್ ಮಿಂಚಿದ್ದಾರೆ. ಕೊನೆಯದಾಗಿ ಮನೋಜ್, 2014ರಲ್ಲಿ ಬಂದ ತಮಿಳಿನ

  'ಅಂಜಾನ್' ಸಿನಿಮಾದಲ್ಲಿ ಮನೋಜ್ ನಟಿಸಿದ್ದರು. ಬಳಿಕ ಸಿನಿಮಾ ಜೊತೆಗೆ ವೆಬ್ ಸೀರಿಸ್ ಗಳಲ್ಲಿ ಬ್ಯುಸಿಯಾಗಿರುವ ಮನೋಜ್ ಫ್ಯಾಮಿಲಿ ಮ್ಯಾನ್ ವೆಬ್ ಸರಣಿ ಮೂಲಕ ತನ್ನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಜೊತೆಗೆ ದೇಶದ ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ.

  ಸಲಾರ್ ಸಿನಿಮಾ ತೆಲುಗು ಜೊತೆಗೆ ಕನ್ನಡದಲ್ಲೂ ಚಿತ್ರೀಕರಣ ಮಾಡಲಾಗಿತ್ತಿದೆ. ಚಿತ್ರದಲ್ಲಿ ಬಹುತೇಕ ಕೆಜಿಎಫ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ, ಭುವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ ನಟ ಮಧು ಗುರುಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಪ್ರಭಾಸ್ ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಶ್ರುತಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಮೊದಲ ಬಾರಿಗೆ ಶ್ರುತಿ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಪ್ರಭಾಸ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಲಾರ್ ಮುಂದಿನ ವರ್ಷ ಬೇಸಿಗೆ ರಜೆಯ ಸಮಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Family Man Actor Manoj Bajpayee likely to play in Prashanth Neel and Prabhas's salaar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X