ರವಿಚಂದ್ರನ್ ಮಗನ ಸಿನಿಮಾಗೆ ಮತ್ತೆ ಟೈಟಲ್ ಬದಲಾವಣೆ.!
ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ ಮುಂದಿನ ಚಿತ್ರ 'ವಿಐಪಿ' (ವೃತ್ತಿ ಇಲ್ಲದ ಪದವಿಧರ) ಎನ್ನಲಾಗಿತ್ತು. ಅದಾದ ನಂತರ 'ಸನ್ ಆಫ್ ರವಿಚಂದ್ರನ್' ಎಂದು ಚಿತ್ರದ ಟೈಟಲ್ ಬದಲಾಯಿಸಲಾಯಿತು. ಇದೀಗ ಮತ್ತೆ ಟೈಟಲ್ ಚೇಂಜ್ ಮಾಡಲಾಗಿದೆ.
ಹೌದು, ತಮಿಳಿನಲ್ಲಿ 'ವಿಐಪಿ' (ವೇಲೈ ಇಲೈ ಪಟ್ಟಧಾರಿ) ಎಂಬ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿತ್ತು. ಕನ್ನಡದಲ್ಲೀಗ ಈ ಚಿತ್ರಕ್ಕೆ 'ಬೃಹಸ್ಪತಿ' ಎಂದು ನಾಮಕರಣ ಮಾಡಲಾಗಿದೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗಿದೆ.

ಇನ್ನುಳಿದಂತೆ ಹಿಂದಿ ಹಾಗೂ ತೆಲುಗು ಚಿತ್ರದಲ್ಲಿ ಗುರುತಿಸಿಕೊಂಡಿರುವ ನಟಿ 'ಮಿಷ್ಠಿ' ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಡೈಲಾಗ್ ಕಿಂಗ್ ಸಾಯಿ ಕುಮಾರ್ ಮನೋರಂಜನ್ ಅವರ ತಂದೆಯಾಗಿ ಕಾಣಿಸಿಕೊಂಡಿದ್ದಾರೆ.
ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.
English summary
Ravichandran son manoranjan’s upcoming film gets a new title. It was earlier called VIP (Vrutti Illada Padavidara) now it will be Brihaspathi.


Click it and Unblock the Notifications