ಸಿನಿಮಾ 'ಟೈಟಲ್' ಗಾಗಿ ಮರಿ 'ಟೈಗರ್' ಕಿತ್ತಾಟ
ಹಿಟ್ ಚಿತ್ರ 'ರನ್ನ'ನ ನಿರ್ದೇಶಕ ನಂದಕಿಶೋರ್ ಪ್ರದೀಪ್ ಮುಂದಿನ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ ಅಲ್ವಾ. ಇದೀಗ ಈ ಚಿತ್ರತಂಡದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ.
ಅದೇನಪ್ಪಾ ಅಂದ್ರೆ ನಿರ್ದೇಶಕ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಜೊತೆಗೆ ಪ್ರದೀಪ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕೆ ಶನಿವಾರದಂದು ಟೈಟಲ್ ಫಿಕ್ಸ್ ಮಾಡಿದ್ದು, 'ಟೈಗರ್' ಎಂದು ಇಡಲಾಗಿತ್ತು, ಆದರೆ ಟೈಟಲ್ ಫಿಕ್ಸ್ ಮಾಡಿದ ಎರಡೇ ದಿನಕ್ಕೆ ಚಿತ್ರತಂಡದ ವಿರುದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಕೇಸ್ ದಾಖಲಾಗಿದೆ.
ಹೌದು ಟೈಗರ್ ಪ್ರಭಾಕರ್ ಮಗ ವಿನೋದ ಪ್ರಭಾಕರ್ ಅಭಿನಯಿಸುತ್ತಿರುವ 'ಮರಿ ಟೈಗರ್' ಚಿತ್ರ ಸುಮಾರು ಮೂರು ವರ್ಷಗಳ ಹಿಂದೆಯೇ ಸೆಟ್ಟೇರಿದ್ದು, ಕಾರಣಾಂತರಗಳಿಂದ ಶೂಟಿಂಗ್ ಕಾರ್ಯ ಮಂದಗತಿಯಲ್ಲಿ ಸಾಗುತ್ತಿತ್ತು.
ಇದೀಗ 'ಮರಿ ಟೈಗರ್' ಚಿತ್ರದ ಶೂಟಿಂಗ್ ಕೊನೆ ಹಂತಕ್ಕೆ ತಲುಪಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಂದರ್ಭದಲ್ಲಿ ನಿರ್ದೇಶಕ ನಂದಕಿಶೋರ್ ಅವರು ತಮ್ಮ ಚಿತ್ರಕ್ಕೆ 'ಟೈಗರ್' ಎಂದು ಅದು ಹೇಗೆ ಟೈಟಲ್ ಇಟ್ಟುಕೊಂಡರು ಎಂದು 'ಮರಿ ಟೈಗರ್' ಚಿತ್ರತಂಡದವರು ಘರ್ಜಿಸುತ್ತಿದ್ದಾರೆ.
ಪಿ.ಎನ್ ಸತ್ಯ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಮರಿ ಟೈಗರ್' ಚಿತ್ರದ ನಾಯಕ ವಿನೋದ್ ಪ್ರಭಾಕರ್, ನಿರ್ಮಾಪಕ ರಮೇಶ್ ಕಶ್ಯಪ್ ಹಾಗೂ ಫಿಲ್ಮ್ ಮೇಕರ್ ಅಜಯ್ ಕುಮಾರ್ ಮುಂತಾದವರು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಈಗಾಗಲೇ ದೂರು ಸಲ್ಲಿಸಿದ್ದಾರೆ.
ಈಗಾಗಲೇ 'ಮರಿ ಟೈಗರ್' ಅಂತ ಒಂದು ಟೈಟಲ್ ಫಿಕ್ಸ್ ಆಗಿರುವಾಗ ಇದೀಗ ಮತ್ತೊಂದು 'ಟೈಗರ್' ಅನ್ನೋ ಟೈಟಲ್ ಕೊಟ್ಟಿರುವ ಕಾರಣಕ್ಕಾಗಿ ನಿರ್ದೇಶಕ ನಂದಕಿಶೋರ್ ಅವರ ಮೇಲೆ ದೂರು ನೀಡಲಾಗಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ರೂಲ್ಸ್ ಪ್ರಕಾರ ಒಂದೇ ಥರದ ಟೈಟಲ್ ಗಳನ್ನು ಎರಡು ಚಿತ್ರಗಳಿಗೆ ನೀಡುವ ಅವಕಾಶವಿರುವುದಿಲ್ಲ, ಆದರೆ ನಂದಕಿಶೋರ್ ಹೇಳುವ ಪ್ರಕಾರ ನಮ್ಮ ಚಿತ್ರಕ್ಕೂ ಟೈಟಲ್ ನೀಡಿದ್ದು, ಕೆ.ಎಫ್ ಸಿ.ಸಿ ಮಾತ್ರವಲ್ಲದೇ ನಾವು ಚಿತ್ರದ ಶೂಟಿಂಗ್ ಶುರು ಮಾಡಿ ಸಮಾರು 20 ದಿನಗಳಾಯಿತು ಎಂದು ಅವರು ಅಭಿಪ್ರಾಯಪಡುತ್ತಾರೆ.
ಒಟ್ನಲ್ಲಿ ಇದೀಗ ಯಾರಿಗೆ ಅದೇ ಟೈಟಲ್ ಉಳಿದುಕೊಳ್ಳುತ್ತದೆ ಹಾಗೂ ಯಾರು ಕಳೆದುಕೊಳ್ಳಬೇಕಾಗುತ್ತದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications














