ಕಟ್ಟಡ, ಟವರ್, ಜೋಕರ್ ಆಡಿಟೋರಿಯಂ; ಯಶ್ 'ಟಾಕ್ಸಿಕ್‌'ಗಾಗಿ ನಿರ್ಮಾಣವಾಯ್ತು ಭಾರೀ ಸಿಟಿ ಸೆಟ್?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ನಟ ಯಶ್ ಕೂಡ ನಿರ್ಮಾಪಕರಾಗಿ ಸಾಥ್ ಕೊಡುತ್ತಿದ್ದಾರೆ. ಅಂದಾಜು 180 ಕೋಟಿ ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಲಿದೆ.

ಗೀತು ಮೋಹನ್ ದಾಸ್ ನಿರ್ದೇನದ 'ಟಾಕ್ಸಿಕ್' ಮುಂದಿನ ವರ್ಷ ಏಪ್ರಿಲ್ 10ಕ್ಕೆ ತೆರೆಗೆ ಬರಲಿದೆ. ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ಕಥೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಚಿತ್ರತಂಡ ಗುಟ್ಟು ಕಾಪಾಡಿಕೊಂಡಿದೆ. ಗೋವಾ, ಶ್ರೀಲಂಕಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

Massive set has been constructed in Bengaluru for Yash starrer Toxic

ಇತ್ತೀಚೆಗೆ ಗೋವಾದ ರೆಸಾರ್ಟ್‌ವೊಂದರಲ್ಲಿ ನಟ ಯಶ್ ಹಾಗೂ ಗೀತು ಮೋಹನ್ ದಾಸ್ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಇದನ್ನು ನೋಡಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಶುರುವಾಗಿ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಸದ್ಯಕ್ಕೆ ಇನ್ನು ಶೂಟಿಂಗ್ ಆರಂಭವಾಗಿಲ್ಲ. ಪ್ರೀ ಪ್ರೊಡಕ್ಷನ್ ವರ್ಕ್ ಮಾತ್ರ ನಡೀತಿದೆ ಎನ್ನಲಾಗ್ತಿದೆ. ಇದೀಗ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದ್ದು ಬೆಂಗಳೂರಿನಲ್ಲಿ ಸೆಟ್‌ ನಿರ್ಮಾಣ ಕೆಲಸ ಆರಂಭವಾಗಿದೆ.

ನಗರದ ಹೆಚ್‌ಎಂಟಿ ಫ್ಯಾಕ್ಟರಿ ಒಳಗೆ ಸೆಟ್‌ಗಳನ್ನು ನಿರ್ಮಿಸಿ ಕನ್ನಡ ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಅಲ್ಲೇ 'ಟಾಕ್ಸಿಕ್' ಚಿತ್ರಕ್ಕಾಗಿ ಅದ್ಧೂರಿ ಸೆಟ್ ನಿರ್ಮಾಣ ಕೆಲಸಗಳು ನಡೀತಿದೆ. ಕಥೆಗೆ ತಕ್ಕಂತೆ ಒಂದು ನಗರದ ಸೆಟ್‌ ಅನ್ನು ಅಲ್ಲಿ ಹಾಕಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಸೆಟ್‌ ಬಗ್ಗೆ ಯಾವುದೇ ವಿಚಾರ ಹೊರಗೆ ಬರದಂತೆ ಚಿತ್ರತಂಡ ಜಾಗ್ರತೆ ವಹಿಸಿರುವುದಾಗಿ ಹೇಳಲಾಗ್ತಿದೆ. 70ರ ದಶಕದ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಶ್ರಮಿಸುತ್ತಿದೆ. ಏಪ್ರಿಲ್ 15ರಿಂದ ಸಿನಿಮಾ ಚಿತ್ರೀಕರಣ ಶುರುವಾಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಸೆಟ್ ವಿಚಾರಕ್ಕೆ ಬಂದರೆ ದೊಡ್ಡ ದೊಡ್ಡ ಕಟ್ಟಡಗಳು, ಎತ್ತರದ ಟವರ್‌ಗಳು, ಜೋಕರ್ ಆಡಿಟೋರಿಯಂ ಮಾದರಿಯಲ್ಲಿ ಸೆಟ್‌ ನಿರ್ಮಾಣವಾಗುತ್ತಿದೆ. ಹೊರ ರಾಜ್ಯಗಳಿಂದ ಸೆಟ್‌ ಕೆಲಸ ಮಾಡಲು ಕಾರ್ಮಿಕರು ಬಂದಿದ್ದಾರೆ ಎನ್ನಲಾಗುತ್ತಿದೆ. ಬಹಳ ಅದ್ಧೂರಿಯಾಗಿ ಸೆಟ್‌ ನಿರ್ಮಾಣವಾಗುತ್ತಿದ್ದು ಚಿತ್ರದಲ್ಲಿ ಈ ಸಿಟಿ ಸೆಟ್ ಹೈಲೆಟ್ ಆಗುತ್ತದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. 70 ದಶಕದಲ್ಲಿ ಭಾರತ ಹಾಗೂ ವಿದೇಶದ ನಗರವನ್ನು ನೆನಪಿಸುವಂತೆ ಈ ಸೆಟ್ ನಿರ್ಮಾಣವಾಗುತ್ತಿದ್ದು ಕಾರ್ಮಿಕರು ಅಂತಿಮ ಸ್ಪರ್ಶ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. 2 ಎಕರೆ ಜಾಗದಲ್ಲಿ ಸೆಟ್ ತಲೆ ಎತ್ತುತ್ತಿದೆ.

Massive set has been constructed in Bengaluru for Yash starrer Toxic

ಟೈಟಲ್, ನಿರ್ದೇಶಕಿ, ಹೀರೊ ಆಗಿ ಯಶ್, ಬ್ಯಾನರ್ ಬಿಟ್ಟರೆ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇನ್ನು ಟೈಟಲ್ ಅನೌನ್ಸ್‌ಮೆಂಟ್ ಟೀಸರ್ ಮಾತ್ರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಮೋಷನ್ ಪೋಸ್ಟರ್ ರೀತಿ ಡಿಸೈನ್ ಮಾಡಿದ್ದ ಟೀಸರ್ ಎಲ್ಲರ ಗಮನ ಸೆಳೆದಿತ್ತು. ಚಿತ್ರವನ್ನು ಕೂಡ ಅದೇ ರೀತಿ ಕಟ್ಟಿಕೊಡುವ ಕೆಲಸ ನಡೀತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಪತಿ ರಾಜೀವ್ ರವಿ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಆಯ್ಕೆ ಆಗುವ ಸಾಧ್ಯತೆಯಿದೆ.

ಸಾನಿಯಾ ಸರ್ದಾರಿಯಾ ಕಾಸ್ಟೂಮ್ ಡಿಸೈನ್ ಮಾಡಲಿದ್ದು ಶ್ರುತಿ ಹಾಸನ್ ಕೂಡ ನಟಿಸುತ್ತಾರೆ ಎನ್ನಲಾಗ್ತಿದೆ. ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಯಶ್ ಸಹೋದರಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನುಳಿದಂತೆ ಬಾಲಿವುಡ್ ಬೆಡಗಿ ನಾಯಕಿಯಾಗಿ ನಟಿಸುವ ಬಗ್ಗೆಯೂ ಚರ್ಚೆ ಆಗುತ್ತಿದೆ. ಇದೇ ತಿಂಗಳು ಸಿನಿಮಾ ಬಗ್ಗೆ ಮತ್ತಷ್ಟು ಅಪ್‌ಡೇಟ್ ಸಿಗುವ ಸಾಧ್ಯತೆಯಿದೆ. ಒಟ್ನಲ್ಲಿ 'ಟಾಕ್ಸಿಕ್' ಸಿನಿಮಾ ಸೆಟ್ಟೇರುವ ಮುನ್ನವೇ ಭಾರೀ ಸದ್ದು ಮಾಡ್ತಿದೆ.

More from Filmibeat

English summary
Huge set is built For Yash Toxic film in Bengaluru;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X