ಎನ್‌ಟಿಆರ್ ಚಿತ್ರದಲ್ಲಿ ರಶ್ಮಿಕಾ ಡೌಟು, ಆ ನಟಿ ಮೇಲೆ ತ್ರಿವಿಕ್ರಮ್ ಕಣ್ಣು!
'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸಿ, 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಸಿಗುವ ಸಾಧ್ಯತೆ ಇದೆ. ಜೂನಿಯರ್ ಎನ್ ಟಿ ಆರ್ ಮತ್ತು ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ ಚಿತ್ರದಲ್ಲಿ ರಶ್ಮಿಕಾ ನಾಯಕಿ ಎನ್ನಲಾಗಿದೆ.
ಈ ಸಿನಿಮಾ ಖಚಿತವಾದರೆ ರಶ್ಮಿಕಾ ಬೇಡಿಕೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಅವಕಾಶ ಬಂದಿದೆ ಎನ್ನಲಾಯಿತಾದರೂ ಪ್ರಾಜೆಕ್ಟ್ ಅಧಿಕೃತವಾಗಿರಲಿಲ್ಲ. ಈ ನಡುವೆ ನಿರ್ದೇಶಕ ತ್ರಿವಿಕ್ರಮ್ ಮತ್ತೊಬ್ಬ ನಟಿಯ ಮೇಲೆ ಕಣ್ಣಿಟ್ಟಿದ್ದಾರಂತೆ.
ಎನ್‌ಟಿಆರ್ ಜೊತೆ ನಟಿಸಲು ಬಾಲಿವುಡ್‌ನಿಂದ ಆ ನಟಿಯನ್ನು ಕರೆತರುವ ಯೋಜನೆ ಹಾಕಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ಅಷ್ಟಕ್ಕೂ, ಯಾರದು? ಮುಂದೆ ಓದಿ...

ಕಿಯಾರಾ ಅಡ್ವಾಣಿ ಮೇಲೆ ತ್ರಿವಿಕ್ರಮ್ ಕಣ್ಣು
'ಅರವಿಂದ ಸಮೇತ' ಹಾಗೂ 'ಅಲಾ ವೈಕುಂಠಪುರಂಲೋ' ಚಿತ್ರದ ನಂತರ ಮತ್ತೆ ಎನ್‌ಟಿಆರ್ ಜೊತೆ ಸಿನಿಮಾ ಮಾಡ್ತಿರುವ ತ್ರಿವಿಕ್ರಮ್ ಈ ಸಲ ಬಾಲಿವುಡ್ ನಟಿ ಮೇಲೆ ದೃಷ್ಟಿ ಹಾಯಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಕಿಯಾರಾ ಅಡ್ವಾಣಿ ಅವರನ್ನು ನಾಯಕಿಯನ್ನಾಗಿಸುವ ಪ್ರಯತ್ನ ಸಾಗಿದೆಯಂತೆ.

ರಶ್ಮಿಕಾಗೆ ಅವಕಾಶ ಕೈತಪ್ಪಿತಾ?
ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೀರ್ತಿ ಸುರೇಶ್ ಇರಬಹುದು ಎಂಬ ಅಭಿಪ್ರಾಯವಿದೆ. ದಿಢೀರ್ ಅಂತ ಕಿಯಾರಾ ಹೆಸರು ಚರ್ಚೆಗೆ ಬಂದಿದ್ದು, ಹಾಗಾದ್ರೆ ರಶ್ಮಿಕಾಗೆ ಈ ಅವಕಾಶ ಮಿಸ್ ಆಯ್ತಾ ಎಂಬ ಅನುಮಾನ ಕಾಡ್ತಿದೆ.

ತೆಲುಗಿನಲ್ಲಿ ಕಿಯಾರಾ ಮಾಡಿದ್ದು ಎರಡೇ ಚಿತ್ರ
ಮಹೇಶ್ ಬಾಬು ಜೊತೆ 'ಭರತ್ ಅನೇ ನೇನು' ಚಿತ್ರದ ಮೂಲಕ ಟಾಲಿವುಡ್ ಪ್ರವೇಶ ಮಾಡಿದ ಕಿಯಾರಾ ಅಡ್ವಾಣಿ ನಂತರ ರಾಮ್ ಚರಣ್ ಜೊತೆ 'ವಿನಯ ವಿಧೇಯ ರಾಮ' ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಮತ್ತೆ ತೆಲುಗಿನಲ್ಲಿ ಸಿನಿಮಾ ಮಾಡಿಲ್ಲ.
Recommended Video

ಆರ್ ಆರ್ ಆರ್ ಚಿತ್ರದಲ್ಲಿ ಎನ್‌ಟಿಆರ್
ಪ್ರಸ್ತುತ ಜೂನಿಯರ್ ಎನ್‌ಟಿಆರ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ತೇಜ ಸಹ ಈ ಚಿತ್ರದಲ್ಲಿ ನಾಯಕ. ಈ ಸಿನಿಮಾ ಮುಗಿದ ಮೇಲೆಯಷ್ಟೇ ತ್ರಿವಿಕ್ರಮ್ ಪ್ರಾಜೆಕ್ಟ್ ಆರಂಭವಾಗಲಿದೆ. ಸದ್ಯ ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ತ್ರಿವಿಕ್ರಮ್ ನಾಯಕಿಯ ಹುಡುಕಾಟದಲ್ಲಿದ್ದಾರೆ.


Click it and Unblock the Notifications











